Wednesday, February 8, 2023
Google search engine
HomeUncategorizedWatch Video | ಮತ್ತೊಬ್ಬ ಬೀದಿಬದಿ​ ಕಲಾವಿದನ ಅದ್ಬುತ ಪ್ರತಿಭೆ ಬಹಿರಂಗ

Watch Video | ಮತ್ತೊಬ್ಬ ಬೀದಿಬದಿ​ ಕಲಾವಿದನ ಅದ್ಬುತ ಪ್ರತಿಭೆ ಬಹಿರಂಗ

Watch Video | ಮತ್ತೊಬ್ಬ ಬೀದಿಬದಿ​ ಕಲಾವಿದನ ಅದ್ಬುತ ಪ್ರತಿಭೆ ಬಹಿರಂಗ

ನವದೆಹಲಿ: ಬೀದಿಬದಿಯ ಪ್ರತಿಭೆಗಳಿಗೆ ಕೊರತೆಯೇನಿಲ್ಲ. ಅಂಥದ್ದೇ ಒಂದು ಪ್ರತಿಭೆಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ದೆಹಲಿಯ ಬೀದಿಯಲ್ಲಿ ವ್ಯಕ್ತಿಯೊಬ್ಬರು ಮಂತ್ರಮುಗ್ಧರಾಗಿ ಕೀಬೋರ್ಡ್​ ನುಡಿಸುತ್ತಿದ್ದು ಅದೀಗ ನೆಟ್ಟಿಗರ ಮನಸ್ಸು ಗೆದ್ದಿದೆ.

ಜನಪ್ರಿಯ ಬಾಲಿವುಡ್ ಹಾಡುಗಳನ್ನು ಅವರು ನುಡಿಸುತ್ತಿದ್ದಾರೆ. ಇದನ್ನು ಇನ್​ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಿಕೊಳ್ಳಲಾಗಿದೆ. ಐಸಾಕ್ ನ್ಯೂಟನ್ ಎಂದು ಗುರುತಿಸಲಾದ ಈ ಕಲಾವಿದ “ತುಜೆ ದೇಖಾ ತೊ ಯೇ ಜನ ಸನಮ್” ಹಾಡಿಗೆ ಕೀಬೋರ್ಡ್​ ನುಡಿಸುವುದನ್ನು ವಿಡಿಯೋದಲ್ಲಿ ಕೇಳಬಹುದು.

ಹಿಂದಿನ ಪ್ರಸಿದ್ಧ ಧಾರಾವಾಹಿ ತಾರಕ್​ ಮೆಹ್ತಾ ಕಾ ಉಲ್ಟಾ ಚಸ್ಮಾದಲ್ಲಿನ ಅಯ್ಯರ್​ ಪಾತ್ರಧಾರಿಯಂತೆ ಈ ಕಲಾವಿದ ಕಾಣಿಸುತ್ತಿರುವುದಾಗಿ ಹಲವರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಕೆಲವೊಬ್ಬರು ಈ ಕಲಾವಿದ ಹಾಸ್ಯನಟರಾಗಿದ್ದ ರಾಜು ಶ್ರೀವಾಸ್ತವ್ ಅವರನ್ನು ಹೋಲುತ್ತಿದ್ದಾರೆ ಎಂದಿದ್ದಾರೆ. ಒಟ್ಟಿನಲ್ಲಿ ಇವರು ತಮ್ಮ ಕಲೆಯಿಂದ ಮತ್ತು ಮುಖ ಚಹರೆಯಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments