Watch Video | ಕಾರು – ಟ್ರಕ್ ನಡುವೆ ಸಿಲುಕಿದ ಸೈಕ್ಲಿಸ್ಟ್; ಪವಾಡಸದೃಶ್ಯ ರೀತಿಯಲ್ಲಿ ಪಾರು

ಮಾರಣಾಂತಿಕ ಅಪಘಾತದ ವಿಡಿಯೋ ಇದಾಗಿದೆ. ಯಮರಾಜ ರಜೆಯಲ್ಲಿದ್ದಾಗ ಎಂದು ಶೀರ್ಷಿಕೆ ಕೊಟ್ಟು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಸೈಕ್ಲಿಸ್ಟ್ ಒಬ್ಬ ರಸ್ತೆ ದಾಟುತ್ತಿದ್ದಾಗ, ನಿಯಂತ್ರಣ ತಪ್ಪಿದ ಕಾರು ಅವನ ಮೇಲೆ ಎರಗಿದೆ. ಅತ್ತ ಕಡೆಯಿಂದ ವೇಗವಾಗಿ ಬಂದ ಟ್ರಕ್ ನಡುವೆ ಕಾರು ಸಿಲುಕಿಕೊಂಡಿದೆ. ಸೈಕ್ಲಿಸ್ಟ್ ಮೇಲೆ ಮೊದಲು ಕಾರು ಹರಿದಿದ್ದರೆ, ಅತ್ತ ಕಡೆಯಿಂದ ಬಂದ ಟ್ರಕ್ ಕೂಡ ಅವನ ಮೇಲೆ ಹೋಗಿದ್ದು. ಇಂಟರ್ನೆಟ್‌ನಲ್ಲಿ ಸಂಚಲನವನ್ನು ಸೃಷ್ಟಿಸುತ್ತಿದೆ.
ಈ ಅಪಘಾತವು ಹತ್ತಿರದ ಸಿಸಿಟಿವಿ ದೃಶ್ಯಗಳಲ್ಲಿ ದಾಖಲಾಗಿದ್ದು, ರಸ್ತೆ ಅಪಘಾತ ಎಷ್ಟು ಅಪಾಯಕಾರಿಯಾಗಿದೆ ಎಂಬುದನ್ನು ತೋರಿಸುತ್ತದೆ. ಆದರೆ ಇಂಥ ಭಯಾನಕ ಅಪಘಾತದ ನಡುವೆಯೂ ಸೈಕ್ಲಿಸ್ಟ್ ಮೇಲೆ ಏಳುವುದನ್ನು ಕಾಣಬಹುದು.