Sunday, March 26, 2023
Google search engine
HomeUncategorizedWatch | ಮಗನಿಗೆ ಕಾಪಿ ಚೀಟಿ ಕೊಡಲು ಹೋಗಿ ಸಿಕ್ಕಿಬಿದ್ದ ತಂದೆ….! ಮನಬಂದಂತೆ ಥಳಿಸಿದ ಪೊಲೀಸರು

Watch | ಮಗನಿಗೆ ಕಾಪಿ ಚೀಟಿ ಕೊಡಲು ಹೋಗಿ ಸಿಕ್ಕಿಬಿದ್ದ ತಂದೆ….! ಮನಬಂದಂತೆ ಥಳಿಸಿದ ಪೊಲೀಸರು

Watch | ಮಗನಿಗೆ ಕಾಪಿ ಚೀಟಿ ಕೊಡಲು ಹೋಗಿ ಸಿಕ್ಕಿಬಿದ್ದ ತಂದೆ….! ಮನಬಂದಂತೆ ಥಳಿಸಿದ ಪೊಲೀಸರು

ಮಕ್ಕಳ ಕಡೆಗೆ ತಂದೆ ಪ್ರೀತಿಗೆ ಯಾವುದೇ ಮಿತಿಯಿಲ್ಲ. ನಮ್ಮಲ್ಲಿ ಹೆಚ್ಚಿನವರು ಇದನ್ನು ಒಪ್ಪುತ್ತಾರೆ. ಈ ಪ್ರೀತಿಯು ಕೆಲವೊಮ್ಮೆ ಮನುಷ್ಯನನ್ನು ಮಾಡಲಾಗದ ಕೆಲಸವನ್ನು ಮಾಡಿಸುತ್ತದೆ. ಅಂಥದ್ದೇ ಒಂದು ವಿಡಿಯೋ ಈಗ ವೈರಲ್​ ಆಗಿದೆ.

ಮಹಾರಾಷ್ಟ್ರದ ಜಲಗಾಂವ್‌ನ ವ್ಯಕ್ತಿಯೊಬ್ಬನಿಗೆ ಪೊಲೀಸರು ಥಳಿಸಿದ ವಿಡಿಯೋ ಇದಾಗಿದೆ. ಅಸಲಿಗೆ ಆಗಿದ್ದೇನೆಂದರೆ, ಈತ ತನ್ನ ಮಗನ ಪರೀಕ್ಷಾ ಹಾಲ್‌ಗೆ ಕಾಪಿ ಚಿಟ್‌ಗಳನ್ನು ಹಸ್ತಾಂತರಿಸಲು ಹೋಗಿ ಸಿಕ್ಕಿಬಿದ್ದಿದ್ದಾನೆ. ಹೀಗೆ ಚಿಟ್​ ಕೊಟ್ಟರೆ ಮಗ ಉತ್ತೀರ್ಣನಾಗಬಹುದು ಎಂದು ಕಾಪಿಗೆ ಅಪ್ಪನೇ ಸಹಕಾರ ಮಾಡಲು ಹೋಗಿ ಅರೆಸ್ಟ್​ ಆಗಿದ್ದಾನೆ.

ಸಿಕ್ಕಿಬಿದ್ದ ತಕ್ಷಣ ಇಬ್ಬರು ಪೊಲೀಸರು ಲಾಠಿಯಿಂದ ಥಳಿಸಿದ್ದಾರೆ. ಈ ವಿಡಿಯೋ ಶನಿವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಇಬ್ಬರು ಪೊಲೀಸರು ಆ ವ್ಯಕ್ತಿಯನ್ನು ಬಲವಾಗಿ ಥಳಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಆತ ನೆಲಕ್ಕೆ ಬೀಳುತ್ತಾನೆ. ಬಿದ್ದ ನಂತರವೂ ಪೊಲೀಸ್‌ ಅಧಿಕಾರಿ ಹೊಡೆಯುವುದನ್ನು ನಿಲ್ಲಿಸುವುದಿಲ್ಲ.

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments