Viral Video: ಶೋ ನಡೆಯುವಾಗಲೇ ಅಭಿಮಾನಿಯ ಫೋನ್ ಕಿತ್ತೆಸೆದ ಖ್ಯಾತ ಗಾಯಕ

ಅಮೆರಿಕದ ಗಾಯಕ ಮತ್ತು ಗೀತ ರಚನೆಕಾರ ಕ್ರಿಸ್ ಬ್ರೌನ್ ಅವರು ಇತ್ತೀಚೆಗೆ ವೇದಿಕೆಯಲ್ಲಿ ಪ್ರದರ್ಶನ ನೀಡುತ್ತಿರುವಾಗ ಅಭಿಮಾನಿಯೊಬ್ಬರ ಫೋನ್ ಅನ್ನು ಪ್ರೇಕ್ಷಕರ ಕಡೆ ಎಸೆದಿದ್ದು, ಭಾರೀ ಚರ್ಚೆಯಾಗ್ತಿದೆ.
ಟಿಕ್‌ಟಾಕ್‌ನಲ್ಲಿ ಮೊದಲು ಹಂಚಿಕೊಳ್ಳಲಾದ ಈ ಘಟನೆಯಲ್ಲಿ ಕ್ರಿಸ್ ಬ್ರೌನ್ ತನ್ನ ‘ಟೇಕ್ ಯು ಡೌನ್’ ಸಂಗೀತ ಕಾರ್ಯಕ್ರಮದ ಸಮಯದಲ್ಲಿ ವೇದಿಕೆಗೆ ಬರುವಂತೆ ಅದೃಷ್ಟಶಾಲಿ ಅಭಿಮಾನಿಯನ್ನು ಆಹ್ವಾನಿಸಿದ ನಂತರ ಫೋನ್ ಎಸೆದಿದ್ದಾರೆ.
ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿರುವ ವೀಡಿಯೊದಲ್ಲಿ ವೇದಿಕೆಯ ಮೇಲೆ ಕುಳಿತಿದ್ದ ಮಹಿಳಾ ಅಭಿಮಾನಿಯ ಸುತ್ತಲೂ ಬ್ರೌನ್ ನೃತ್ಯ ಮಾಡುವುದನ್ನು ತೋರಿಸಿದೆ.
ಬ್ರೌನ್ ಪದೇ ಪದೇ ಫೋನ್ ಅನ್ನು ಅಭಿಮಾನಿಯ ಕೈಯಿಂದ ತೆಗೆದುಕೊಂಡು ದೂರ ಇಡುತ್ತಿರುವುದನ್ನು ನೋಡಬಹುದು. ಆದಾಗ್ಯೂ ಆಕೆ ಫೋನ್ ತೆಗೆದು ಹಿಡಿದುಕೊಂಡಿದ್ದಾಗ ಗಾಯಕ ಬ್ರೌನ್ ಆಕೆಯ ಕೈಯಿಂದ ಫೋನ್ ಅನ್ನು ಕಸಿದುಕೊಂಡು ಪ್ರೇಕ್ಷಕರತ್ತ ಎಸೆಯುತ್ತಾರೆ. ಬ್ರೌನ್ ಅವರ ಈ ನಡೆ ಬಗ್ಗೆ ಭಾರೀ ಟೀಕೆ ವ್ಯಕ್ತವಾಗ್ತಿದೆ.