Wednesday, August 17, 2022
Google search engine
HomeUncategorizedSHOCKING NEWS: ತುಂಬಿ ಹರಿಯುತ್ತಿದ್ದ ನದಿಯಲ್ಲಿ ಹುಚ್ಚಾಟ; ವಿಡಿಯೋಗಾಗಿ ನೀರಿನಲ್ಲಿ ಬಾಲಕನ ಕೈ ಬಿಟ್ಟ ಅಪ್ಪ;...

SHOCKING NEWS: ತುಂಬಿ ಹರಿಯುತ್ತಿದ್ದ ನದಿಯಲ್ಲಿ ಹುಚ್ಚಾಟ; ವಿಡಿಯೋಗಾಗಿ ನೀರಿನಲ್ಲಿ ಬಾಲಕನ ಕೈ ಬಿಟ್ಟ ಅಪ್ಪ; ನೋಡ ನೋಡುತ್ತಿದ್ದಂತೆ ನದಿಯಲ್ಲಿ ಕೊಚ್ಚಿ ಹೋದ ತಂದೆ-ಮಗ

SHOCKING NEWS: ತುಂಬಿ ಹರಿಯುತ್ತಿದ್ದ ನದಿಯಲ್ಲಿ ಹುಚ್ಚಾಟ; ವಿಡಿಯೋಗಾಗಿ ನೀರಿನಲ್ಲಿ ಬಾಲಕನ ಕೈ ಬಿಟ್ಟ ಅಪ್ಪ; ನೋಡ ನೋಡುತ್ತಿದ್ದಂತೆ ನದಿಯಲ್ಲಿ ಕೊಚ್ಚಿ ಹೋದ ತಂದೆ-ಮಗ

BIG NEWS: ತುಂಬಿ ಹರಿಯುತ್ತಿದ್ದ ನದಿಯಲ್ಲಿ ಯುವಕರ ಹುಚ್ಚಾಟ; ಸೇತುವೆಯಿಂದ ಹಾರಿದ ಮೂವರು; ಓರ್ವ ನಾಪತ್ತೆ | Kannada Dunia | Kannada News | Karnataka News | India News

ತುಮಕೂರು: ರಾಜ್ಯಾದ್ಯಂತ ವರುಣನ ಅಬ್ಬರಕ್ಕೆ ನದಿ, ಕೆರೆ, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಅಪಾಯದ ನಡುವೆಯೂ ಕೆಲವರು ನೀರಿನಲ್ಲಿ ಹುಚ್ಚಾಟ ಮೆರೆಯುತ್ತಾ, ಪ್ರಾಣಾಪಾಯ ತಂದುಕೊಳ್ಳುತ್ತಿದ್ದಾರೆ.

ತುಂಬಿ ಹರಿಯುತ್ತಿದ್ದ ನೀರಿನಲ್ಲಿ ಸ್ನೇಹಿತರೊಂದಿಗೆ ಹುಚ್ಚಾಟವಾಡಲು ಹೋಗಿ ಪುಟ್ಟ ಮಗನ ಪ್ರಾಣಕ್ಕೆ ತಂದೆಯೊಬ್ಬ ಕುತ್ತು ತಂದುಬಿಡುವ ಸಂದರ್ಭ… ಕ್ಷಣಾರ್ಧದಲ್ಲಿ ಸ್ಥಳೀಯರಿಂದ ಬಾಲಕ ಬಚಾವ್ ಆಗಿರುವ ಘಟನೆ ನಡೆದಿದೆ.

ತುಮಕೂರಿನ ಗೋಳೂರು ಕೆರೆಯಲ್ಲಿ ಮಗನ ಕೈ ಹಿಡಿದು ನಿಂತಿದ್ದ ಅಪ್ಪ, ವಿಡಿಯೋಗಾಗಿ ನೀರಿನಲ್ಲಿ ಮಗನ ಕೈ ಬಿಟ್ಟಿದ್ದಾನೆ. ಬಾಲಕ ಹರಿಯುವ ನೀರಿನಲ್ಲಿ ಕೊಚ್ಚಿ ಹೋಗಿದ್ದು, ತಕ್ಷಣ ಮಗನನ್ನು ರಕ್ಷಿಸಲೆಂದು ತಂದೆಯೂ ಕೈಚಾಚಿದ್ದಾರೆ. ಅಷ್ಟರಲ್ಲಿ ನೀರಿನ ರಭಸಕ್ಕೆ ತಂದೆ-ಮಗ ಇಬ್ಬರೂ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಕಣ್ಣೆದುರೇ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ತಂದೆ-ಮಗನನ್ನು ಸ್ಥಳೀಯರು ರಕ್ಷಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments