Thursday, August 11, 2022
Google search engine
HomeUncategorizedSHOCKING: ಬಜೆಟ್​ ಏರ್ ​ಲೈನ್ಸ್‌ ನ ಊಟದಲ್ಲಿ ಹಾವಿನ ತಲೆ ಪತ್ತೆ….!

SHOCKING: ಬಜೆಟ್​ ಏರ್ ​ಲೈನ್ಸ್‌ ನ ಊಟದಲ್ಲಿ ಹಾವಿನ ತಲೆ ಪತ್ತೆ….!

SHOCKING: ಬಜೆಟ್​ ಏರ್ ​ಲೈನ್ಸ್‌ ನ ಊಟದಲ್ಲಿ ಹಾವಿನ ತಲೆ ಪತ್ತೆ….!

ಇದು ಎಂತವರಿಗೂ ಗಾಬರಿ ತರುವ ಸುದ್ದಿಯಾಗಿದೆ. ಟರ್ಕಿಯ ಏರ್​ಲೈನ್​ನ ವಿಮಾನದ ಅಟೆಂಡೆಂಟ್​ಗೆ ಊಟದ ತಟ್ಟೆಯಲ್ಲಿ ಹಾವಿನ ತಲೆ ಕಾಣಿಸಿದೆ.

ಕ್ಯಾಬಿನ್​ ಸಿಬ್ಬಂದಿ ಜುಲೈ 21 ರಂದು ಟರ್ಕಿಯ ಅಂಕಾರಾದಿಂದ ಜರ್ಮನಿಯ ಡಸೆಲ್ಡಾರ್ಫ್​ಗೆ ಸನ್​ಎಕ್ಸ್​ಪ್ರೆಸ್​ ವಿಮಾನದೊಂದಿಗೆ ಪ್ರಯಾಣಿಸುತ್ತಿದ್ದಾಗ ಆಹಾರದಲ್ಲಿ ಹಾವಿನ ತಲೆಯನ್ನು ಕಂಡುಕೊಂಡರು. ತರಕಾರಿಗಳು ಮತ್ತು ಆಲೂಗಡ್ಡೆ ಮತ್ತಿತರ ತಿನಿಸಿನ ನಡುವೆ ಹಾವಿನ ತಲೆ ಕಂಡುಬಂದಿದೆ ಎಂದು ಕ್ಯಾಬಿನ್​ ಸಿಬ್ಬಂದಿ ಹೇಳಿದ್ದಾರೆ.

ಸನ್​ಎಕ್ಸ್​ಪ್ರೆಸ್​ ಏರ್​ಲೈನ್ಸ್​ಗೆ ಕ್ಯಾಟರಿಂಗ್​ ಸೇವೆಯನ್ನು ಸ್ಯಾನ್​ಕಾಕ್​ ಇನ್​‌ ಫ್ಲೈಟ್​ ಒದಗಿಸಿತ್ತು. ಕ್ಯಾಬಿನ್​ ಸಿಬ್ಬಂದಿ ಆಹಾರ ತಿನ್ನುತ್ತಿದ್ದಾಗ ಹಾವಿನ ತಲೆ ಬಿದ್ದಿರುವುದು ಕಂಡು ಬಂದಿದ್ದು, ಹಾವಿನ ತಲೆ ಕಾಣಿಸುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದೆ.

ಭೀಮನ ಅಮವಾಸ್ಯೆಯಂದು ಪತಿಯ ಆಯಸ್ಸು, ಯಶಸ್ಸಿಗೆ ಪತ್ನಿ ತಪ್ಪದೆ ಮಾಡಿ ಈ ಕೆಲಸ

ಘಟನೆ ಬೆಳಕಿಗೆ ಬಂದ ಕೂಡಲೇ, ಸನ್​ ಎಕ್ಸ್​ಪ್ರೆಸ್​ ಏರ್​ಲೈನ್ಸ್​ ಹೇಳಿಕೆಯನ್ನು ಬಿಡುಗಡೆ ಮಾಡಿ, ಈ ವಿಷಯವನ್ನು ಪರಿಶೀಲಿಸಲು ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಘೋಷಿಸಿ, ಅತ್ಯುನ್ನತ ಗುಣಮಟ್ಟದ ಸೇವೆ ಒದಗಿಸುವುದು ಪ್ರಮುಖ ಆದ್ಯತೆ ಎಂದು ಹೇಳಿಕೊಂಡಿದೆ.

ಆಹಾರವನ್ನು ಹೆಚ್ಚಿನ ತಾಪಮಾನದಲ್ಲಿ ಬೇಯಿಸಲಾಗುತ್ತದೆ, ಆಹಾರದಲ್ಲಿ ತಾಜಾ ಹಾವಿನ ತಲೆ ಬರಲು ಹೇಗೆ ಸಾಧ್ಯವಿದೆ, ಈ ರೀತಿ ಟೀಕೆಯಲ್ಲಿ ಅರ್ಥವಿಲ್ಲ ಎಂದು ಆಹಾರ ಸರಬರಾಜು ಕಂಪನಿ ಹೇಳಿಕೊಂಡಿದೆ.

ಇಂತಹ ಘಟನೆ ನಡೆಯುತ್ತಿರುವುದು ಇದೇ ಮೊದಲಲ್ಲ ಎಂಬ ಆರೋಪವೂ ಇದೆ. ಆಹಾರದಲ್ಲಿ ಬಸವನಹುಳು ಮತ್ತು ಜೀರುಂಡೆಗಳು ಕಂಡುಬಂದಿವೆ ಎಂದು ವಿಮಾನಯಾನ ಸಿಬ್ಬಂದಿ ಈ ಹಿಂದೆ ದೂರು ನೀಡಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments