Saturday, September 24, 2022
Google search engine
HomeUncategorizedShocking: ಪ್ರೇಮಿಯ ನಗ್ನ ಚಿತ್ರ ಪೋಸ್ಟ್ ಮಾಡಿದ ವೈದ್ಯ; ಯುವತಿ ಸ್ನೇಹಿತರಿಂದ ಮಾರಣಾಂತಿಕ ಹಲ್ಲೆ

Shocking: ಪ್ರೇಮಿಯ ನಗ್ನ ಚಿತ್ರ ಪೋಸ್ಟ್ ಮಾಡಿದ ವೈದ್ಯ; ಯುವತಿ ಸ್ನೇಹಿತರಿಂದ ಮಾರಣಾಂತಿಕ ಹಲ್ಲೆ

Shocking: ಪ್ರೇಮಿಯ ನಗ್ನ ಚಿತ್ರ ಪೋಸ್ಟ್ ಮಾಡಿದ ವೈದ್ಯ; ಯುವತಿ ಸ್ನೇಹಿತರಿಂದ ಮಾರಣಾಂತಿಕ ಹಲ್ಲೆ

ವೈದ್ಯನೊಬ್ಬ ತನ್ನ ಪ್ರೇಮಿಯ ನಗ್ನ ಚಿತ್ರಗಳನ್ನು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದು, ಈ ವಿಚಾರ ತಿಳಿದ ಯುವತಿಯ ಸ್ನೇಹಿತರು ಆತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಬೆಂಗಳೂರಿನ ಬಿಟಿಎಂ ಲೇಔಟ್ ನಲ್ಲಿ ಈ ಘಟನೆ ನಡೆದಿದ್ದು, ತೀವ್ರವಾಗಿ ಗಾಯಗೊಂಡಿರುವ ವೈದ್ಯ ಕೋಮಾದಲ್ಲಿದ್ದು ಜೀವನ್ಮರಣದ ಸ್ಥಿತಿಯಲ್ಲಿ ಹೋರಾಡುತ್ತಿದ್ದಾನೆ.

ತಮಿಳುನಾಡಿನ ಚೆನ್ನೈ ಮೂಲದ 27 ವರ್ಷದ ವಿಕಾಶ್ ಕೋಮಾದಲ್ಲಿರುವ ವೈದ್ಯನಾಗಿದ್ದು, ಈತ ಉಕ್ರೇನ್ ನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡಿದ್ದಾನೆ. ಎರಡು ವರ್ಷಗಳ ಕಾಲ ಚೆನ್ನೈನಲ್ಲಿ ಪ್ರಾಕ್ಟೀಸ್ ಮಾಡಿದ ಬಳಿಕ ಉನ್ನತ ವ್ಯಾಸಂಗಕ್ಕೆ ವಿದೇಶಕ್ಕೆ ತೆರಳುವ ಸಲುವಾಗಿ ಬೆಂಗಳೂರಿಗೆ ಆಗಮಿಸಿ ಸಿದ್ಧತೆ ನಡೆಸಿದ್ದ.

ಸೆಪ್ಟೆಂಬರ್ 8ರಂದು ಈತನ ನಿವಾಸಕ್ಕೆ ಆಗಮಿಸಿದ್ದ ಗೆಳತಿ, ವಿಕಾಶ್ ಲ್ಯಾಪ್ಟಾಪ್ ಚೆಕ್ ಮಾಡಿದ್ದಾಳೆ. ಈ ವೇಳೆ ತನ್ನ ನಗ್ನ ಚಿತ್ರಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಹಾಕಿರುವುದು ಗೊತ್ತಾಗಿದೆ. ಇಬ್ಬರ ನಡುವೆ ವಾಗ್ವಾದ ನಡೆದಿದ್ದು ಬಳಿಕ ಆಕೆ ತನ್ನ ಸ್ನೇಹಿತರಾದ ಸುಶೀಲ್, ಗೌತಮ್ ಮತ್ತು ಸೂರ್ಯ ಎಂಬವರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾಳೆ.

ನಂತರ ವಿಕಾಶ್ ಮತ್ತು ಆತನ ಗೆಳತಿ ಮಾತುಕತೆಗೊಂದು ಸುಶೀಲ್ ಮನೆಗೆ ತೆರಳಿದ್ದು, ಅಲ್ಲಿ ವಿಕಾಶ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಆತನ ಗೆಳತಿಯೇ ಆಸ್ಪತ್ರೆಗೆ ದಾಖಲಿಸಿ ಚೆನ್ನೈನಲ್ಲಿದ್ದ ವಿಕಾಶ್ ಕುಟುಂಬಸ್ಥರಿಗೆ ವಿಷಯ ತಿಳಿಸಿದ್ದಾಳೆ.

ಪ್ರಕರಣ ದಾಖಲಿಸಿಕೊಂಡಿರುವ ಬೇಗೂರು ಠಾಣೆ ಪೊಲೀಸರು ಸುಶೀಲ್ ನನ್ನು ವಶಕ್ಕೆ ಪಡೆದಿದ್ದು, ತಲೆಮರೆಸಿಕೊಂಡಿರುವ ಮತ್ತಿಬ್ಬರ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments