Friday, December 9, 2022
Google search engine
HomeUncategorizedSHOCKING: ಅಪ್ಪನ ಮೇಲಿನ ಸಿಟ್ಟಿಗೆ ಉದ್ಯಮಿಯಿಂದ ನಾಲ್ಕು ವರ್ಷದ ಕಂದನ ಬರ್ಬರ ಹತ್ಯೆ

SHOCKING: ಅಪ್ಪನ ಮೇಲಿನ ಸಿಟ್ಟಿಗೆ ಉದ್ಯಮಿಯಿಂದ ನಾಲ್ಕು ವರ್ಷದ ಕಂದನ ಬರ್ಬರ ಹತ್ಯೆ

SHOCKING: ಅಪ್ಪನ ಮೇಲಿನ ಸಿಟ್ಟಿಗೆ ಉದ್ಯಮಿಯಿಂದ ನಾಲ್ಕು ವರ್ಷದ ಕಂದನ ಬರ್ಬರ ಹತ್ಯೆ

ವಯನಾಡ್​ (ಕೇರಳ): ಅಪ್ಪನ ಮೇಲಿನ ದ್ವೇಷಕ್ಕೆ ನಾಲ್ಕು ವರ್ಷದ ಬಾಲಕನನ್ನು ಕೊಲೆ ಮಾಡಿದ ಆರೋಪಿ ಈಗ ಸಿಕ್ಕಿಬಿದ್ದಿದ್ದಾನೆ.

ಕೇರಳದ ವಯನಾಡ್ ಜಿಲ್ಲೆಯ ಪೊಲೀಸರು ಕೊಲೆಗೆ ಸಂಬಂಧಿಸಿದಂತೆ ಜೀತೇಶ್​ ಎಂಬಾತನನ್ನು ಅರೆಸ್ಟ್​ ಮಾಡಿದ್ದಾರೆ. ನಾಲ್ಕು ವರ್ಷದ ಆದಿ ದೇವ್​ನನ್ನು ಕೊಲೆ ಮಾಡಿರುವ ಆರೋಪ ಈತ ಎದುರಿಸುತ್ತಿದ್ದಾನೆ.

ಬಾಲಕನ ತಾಯಿ ಅಂಗನವಾಡಿಗೆ ಕರೆದೊಯ್ಯುತ್ತಿದ್ದಾಗ ಇಬ್ಬರ ಮೇಲೆ ಜೀತೇಶ್​ ಹಲ್ಲೆ ನಡೆಸಿದ್ದ. ಘಟನೆಯಲ್ಲಿ ಬಾಲಕನ ಎಡ ಕಿವಿ ಮತ್ತು ತಲೆಯ ಬಳಿ ತೀವ್ರವಾಗಿ ಗಾಯವಾಗಿತ್ತು. ತಾಯಿಗೂ ತೀವ್ರ ಗಾಯವಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಬಾಲಕ ಮೃತಪಟ್ಟರೆ ತಾಯಿಗೆ ಚಿಕಿತ್ಸೆ ಮುಂದುವರೆದಿದೆ.

ಆರೋಪಿ ಜೀತೇಶ್​ ಹಾಗೂ ಬಾಲಕನ ತಂದೆ ಜಯಪ್ರಕಾಶ್ ವ್ಯಾಪಾರ ಪಾಲುದಾರರಾಗಿದ್ದರು. ಇವರಿಬ್ಬರೂ ಕೊಚ್ಚಿಯಲ್ಲಿ ವ್ಯವಹಾರ ನಡೆಸುತ್ತಿದ್ದರು. ಇತ್ತೀಚೆಗೆ ಇಬ್ಬರ ನಡುವೆ ಮನಸ್ತಾಪ ಉಂಟಾಗಿದ್ದರಿಂದ ಈ ಕೃತ್ಯ ಎಸಗಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

SCREENGRAB
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments