Friday, March 24, 2023
Google search engine
HomeUncategorized‘Romancing stunts’: ಚಲಿಸುವ ಬೈಕ್ ನಲ್ಲೇ ಯುವ ಜೋಡಿ ರೊಮ್ಯಾನ್ಸ್

‘Romancing stunts’: ಚಲಿಸುವ ಬೈಕ್ ನಲ್ಲೇ ಯುವ ಜೋಡಿ ರೊಮ್ಯಾನ್ಸ್

‘Romancing stunts’: ಚಲಿಸುವ ಬೈಕ್ ನಲ್ಲೇ ಯುವ ಜೋಡಿ ರೊಮ್ಯಾನ್ಸ್

ಜೈಪುರ: ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ನಡೆದ ಘಟನೆಯೊಂದರಲ್ಲಿ, ಹೋಳಿ ಹಬ್ಬದ ಮುನ್ನಾದಿನದಂದು ಜೋಡಿಯೊಂದು ಮೋಟಾರು ಬೈಕ್‌ ನಲ್ಲಿ ‘ರೊಮ್ಯಾನ್ಸಿಂಗ್ ಸ್ಟಂಟ್’ ಮಾಡುತ್ತಿರುವುದು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಈ ಜೋಡಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಕಾರ್ ನಲ್ಲಿ ಪ್ರಯಾಣಿಸುತ್ತಿದ್ದವರು ಚಿತ್ರೀಕರಿಸಿದ್ದಾರೆ. ರಾಯಲ್ ಎನ್‌ಫೀಲ್ಡ್ ಮೋಟಾರ್‌ಸೈಕಲ್‌ನ ಪೆಟ್ರೋಲ್ ಟ್ಯಾಂಕ್ ಮೇಲೆ ಹುಡುಗಿ ಕುಳಿತಿದ್ದು, ತಬ್ಬಿಕೊಂಡು ವ್ಯಕ್ತಿ ದ್ವಿಚಕ್ರ ವಾಹನವನ್ನು ಚಲಾಯಿಸುತ್ತಿರುವುದನ್ನು ವೈರಲ್ ವಿಡಿಯೊದಲ್ಲಿ ಕಾಣಬಹುದು.

ಈ ಘಟನೆ B2 ಬೈಪಾಸ್‌ನಲ್ಲಿ ನಡೆದಿದೆ. ಬೈಕ್ ನ ನೋಂದಣಿ ಸಂಖ್ಯೆ ಆಧರಿಸಿ ಜೋಡಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

ಫೆಬ್ರವರಿಯಲ್ಲಿ ಇದೇ ರೀತಿಯ ಘಟನೆ ಅಜ್ಮೀರ್ ನಗರದಲ್ಲಿ ನಡೆದಿದ್ದು, ಜೋಡಿ ಮೋಟಾರ್‌ ಬೈಕ್‌ನಲ್ಲಿ ‘ಕಿಸ್ಸಿಂಗ್ ಸ್ಟಂಟ್’ ಮಾಡುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿತ್ತು.

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments