Saturday, September 24, 2022
Google search engine
HomeUncategorizedRAIN EFFECT: ಬೆಂಗಳೂರಿನ ರಸ್ತೆ ಮೇಲೆ ಸಿಕ್ತು ಕ್ಯಾಟ್ ಫಿಶ್…!

RAIN EFFECT: ಬೆಂಗಳೂರಿನ ರಸ್ತೆ ಮೇಲೆ ಸಿಕ್ತು ಕ್ಯಾಟ್ ಫಿಶ್…!

RAIN EFFECT: ಬೆಂಗಳೂರಿನ ರಸ್ತೆ ಮೇಲೆ ಸಿಕ್ತು ಕ್ಯಾಟ್ ಫಿಶ್…!

ಮಳೆ ಆರ್ಭಟಕ್ಕೆ ಇಡೀ ಕರ್ನಾಟಕವೇ ಬೆಚ್ಚಿಬಿದ್ದಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆ ಕಾರಣಕ್ಕೆ ಜನ ಮನೆಯಿಂದ ಹೊರ ಬರಲೂ ಹಿಂದೆಮುಂದೆ ನೋಡುವಂತಾಗಿದೆ. ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರು ವರುಣಾರ್ಭಟಕ್ಕೆ ತತ್ತರಿಸಿ ಹೋಗಿದ್ದು, ಜನ ಪರದಾಡುತ್ತಿದ್ದಾರೆ.

ಪ್ರಮುಖ ರಸ್ತೆಗಳು ನೀರಿನಿಂದ ಆವೃತವಾಗಿದ್ದು, ವಾಹನ ಸಂಚಾರ ಕಷ್ಟಕರವಾಗಿದೆ. ಕೆಲವೊಂದು ಬಡಾವಣೆಗಳಲ್ಲಿ ಬೋಟ್ ಮೇಲೆ ಸಂಚರಿಸುವಷ್ಟು ನೀರು ನಿಂತಿದೆ. ರಾಜ ಕಾಲುವೆಯ ಒತ್ತುವರಿಯೇ ಇದಕ್ಕೆ ಕಾರಣವೆಂದು ಹೇಳಲಾಗುತ್ತಿದೆ.

ಇದರ ಮಧ್ಯೆ ಕೆಲವೊಂದು ನಂಬಲಸಾಧ್ಯ ಘಟನೆಗಳು ನಡೆಯುತ್ತಿದ್ದು, ಮಳೆ ನೀರು ಹರಿಯುತ್ತಿದ್ದ ಪ್ರಮುಖ ರಸ್ತೆಯಲ್ಲಿ ಕ್ಯಾಟ್ ಫಿಶ್ ಸಿಕ್ಕಿದೆ. ಇದರ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬೆಳ್ಳಂದೂರು ಬಳಿ ಈ ಕ್ಯಾಟ್ ಫಿಶ್ ಸಿಕ್ಕಿದೆ ಎಂದು ಹೇಳಲಾಗುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments