Saturday, September 24, 2022
Google search engine
HomeUncategorizedOMG: 17 ಗಂಟೆಗಳಲ್ಲಿ 67 ಪಬ್ ನಲ್ಲಿ ಕುಡಿದು ಗಿನ್ನೆಸ್​ ದಾಖಲೆ

OMG: 17 ಗಂಟೆಗಳಲ್ಲಿ 67 ಪಬ್ ನಲ್ಲಿ ಕುಡಿದು ಗಿನ್ನೆಸ್​ ದಾಖಲೆ

OMG: 17 ಗಂಟೆಗಳಲ್ಲಿ 67 ಪಬ್ ನಲ್ಲಿ ಕುಡಿದು ಗಿನ್ನೆಸ್​ ದಾಖಲೆ

ಗಿನ್ನಿಸ್​ ದಾಖಲೆ ಮಾಡಲು ಇಂಥಹದ್ದೇ ವಿಚಾರ ಬೇಕೆಂದಿಲ್ಲ ಎಂಬುದಕ್ಕೆ ಇಲ್ಲೊಬ್ಬ ಮಹಾನ್​ ಸಾಧನೆ ಮಾಡಿದ್ದಾನೆ. ಸುಮಾರು 17 ಗಂಟೆಗಳಲ್ಲಿ 67 ವಿವಿಧ ಪಬ್​ಗಳಲ್ಲಿ ಡ್ರಿಂಕ್ಸ್​ ಮಾಡಿ ಗಿನ್ನೆಸ್​ ವಿಶ್ವ ದಾಖಲೆಯನ್ನು ಮುರಿಯುವ ಮೂಲಕ ಬ್ರಿಟಿಶ್​ ವ್ಯಕ್ತಿ ಇತಿಹಾಸ ನಿರ್ಮಿಸಿದ್ದಾರೆ.

ಲಿವರ್​ಪೂಲ್​ ಎಕೋ ಪ್ರಕಾರ, ಬ್ರಿಟಿಷ್​ ವ್ಯಕ್ತಿಯನ್ನು ನಾಥನ್​ ಕ್ರಿಂಪ್​ ಎಂದು ಗುರುತಿಸಲಾಗಿದೆ. 22 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು 24 ಗಂಟೆಗಳಲ್ಲಿ ಹೆಚ್ಚು ಭೇಟಿ ನೀಡುವ ಪಬ್​ಗಳ ಸವಾಲನ್ನು ಸ್ವೀಕರಿಸಿದ್ದರು. ಕ್ರಿಂಪ್​ ಇಂಗ್ಲೆಂಡ್​ನ ಬ್ರೈಟನ್​ ಪ್ರದೇಶದಲ್ಲಿ 67 ಪಬ್​ಗಳಲ್ಲಿ 17 ಗಂಟೆಗಳ ಸಮಯದ ಚೌಕಟ್ಟಿನೊಳಗೆ ಕುಡಿದು ಮುಗಿಸಿದರು. ಸವಾಲಿನ ಸಮಯದಲ್ಲಿ ಆತ ಒಬ್ಬಂಟಿಯಾಗಿರಲಿಲ್ಲ, ಅವನ ಜೊತೆಯಲ್ಲಿ ಸ್ನೇಹಿತರ ಜೊತೆಗಿದ್ದರು.

ಆ ಯುವಕನ ಪ್ರಕಾರ, ಸವಾಲು ಅವನಿಗೆ ಕಠಿಣವಾಗಿ ತೋರಿತು. ಇದು ನಾನು ಮಾಡಿದ ಅತ್ಯಂತ ಕಷ್ಟಕರವಾದ ಕೆಲಸವಾಗಿತ್ತು. ಆರಂಭದಲ್ಲಿ ಕಡಿಮೆ ಅಂದಾಜು ಮಾಡಿದ್ದೆ ಎಂದು ಅವರು ಹೇಳಿಕೊಂಡಿದ್ದಾರೆ.

ವರದಿಯ ಪ್ರಕಾರ, 17 ಗಂಟೆಗಳಲ್ಲಿ ಸುಮಾರು 20- 30 ಲೀಟರ್​ ಪಾನೀಯಗಳನ್ನು ಕುಡಿದಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ನಿರಂತರವಾಗಿ ಶೌಚಾಲಯಕ್ಕೆ ಹೋಗಬೇಕಾಗಿತ್ತು, ಇದು ಹೆಚ್ಚಿನ ಸಮಯವನ್ನು ತೆಗೆದುಕೊಂಡಿತು. ಹಾಗೆಯೇ, ಕ್ರಿಂಪ್​ ತನ್ನನ್ನು ಬೆಂಬಲಿಸಲು ಬಂದ ತನ್ನ ಸ್ನೇಹಿತರಿಗೆ ಧನ್ಯವಾದ ಅರ್ಪಿಸಿದ್ದಾನೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments