FAT ಮತ್ತು HER: ಸವಾಲು ಎಸೆದು ಯುವತಿಯ ಸೋಲಿಸಿದ ಯುವಕ….!

ಅಂಥದ್ದೇ ಒಂದು ವಿಡಿಯೋ ವೈರಲ್ ಆಗಿದೆ. ಆದರೆ ಇದು ತಮಾಷೆಯ ಸವಾಲನ್ನು ನೀಡಿರುವ ವಿಡಿಯೋವಾಗಿದೆ. ಒಬ್ಬ ವ್ಯಕ್ತಿ ಯುವತಿಯೊಬ್ಬಳಿಗೆ ಸವಾಲು ಎಸೆದಿರುವ ತಮಾಷೆಯ ವಿಡಿಯೋ ಇದಾಗಿದೆ.
ಯುವಕ, ಯುವತಿಗೆ 100 ಡಾಲರ್ ಹಣವನ್ನು ನೀಡುತ್ತಾನೆ ಮತ್ತು FAT ಅನ್ನು ಉಚ್ಚರಿಸಲು ಕೇಳುತ್ತಾನೆ. ಅದಕ್ಕೆ ಸರಿಯಾಗಿ ಉತ್ತರಿಸುತ್ತಾಳೆ. ನಂತರ, ಅವನು HER ಅನ್ನು ಉಚ್ಚರಿಸಲು ಕೇಳುತ್ತಾನೆ. ಯುವತಿ ಸರಿಯಾಗಿ ಹೇಳುತ್ತಾಳೆ.
ಮುಂದೆ ಇರುವುದೇ ಟ್ರಿಕ್ಕಿ FAT ಮತ್ತು HER ಎರಡನ್ನೂ ಸೇರಿಸುವಂತೆ ಹೇಳುತ್ತಾರೆ. ಆಗ ಅವಳು ಫ್ಯಾಟ್ ಹರ್ ಎನ್ನುತ್ತಾಳೆ. ಆದರೆ ಈ ಉತ್ತರ ತಪ್ಪು ಎನ್ನುವ ಯುವಕ ಅದು ಫಾದರ್ ಎಂದು ತಮಾಷೆ ಮಾಡಿ ದುಡ್ಡು ನಿನಗೆ ಸಿಗುವುದಿಲ್ಲ ಎಂದು ವಾಪಸ್ ತೆಗೆದುಕೊಂಡು ಹೋಗುತ್ತಾನೆ.