Sunday, March 26, 2023
Google search engine
HomeUncategorizedCaught on cam: ಹಳದಿ ಶಾಸ್ತ್ರದಲ್ಲಿ ಪಾಲ್ಗೊಂಡಿದ್ದಾಗಲೇ ಬಂದೆರಗಿತ್ತು ಸಾವು;

Caught on cam: ಹಳದಿ ಶಾಸ್ತ್ರದಲ್ಲಿ ಪಾಲ್ಗೊಂಡಿದ್ದಾಗಲೇ ಬಂದೆರಗಿತ್ತು ಸಾವು;

Caught on cam: ಹಳದಿ ಶಾಸ್ತ್ರದಲ್ಲಿ ಪಾಲ್ಗೊಂಡಿದ್ದಾಗಲೇ ಬಂದೆರಗಿತ್ತು ಸಾವು;

ಬದುಕು ಅನಿಶ್ಚಿತತೆಯಿಂದ ಕೂಡಿದೆ ಎಂಬುದಕ್ಕೆ ನಮ್ಮ ಮುಂದೆ ಹಲವು ಪ್ರಸಂಗಗಳು ನಡೆದಿವೆ. ಅಂಥದ್ದೇ ಮತ್ತೊಂದು ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮದುವೆ ಸಮಾರಂಭದಲ್ಲಿ ವರನಿಗೆ ಹಳದಿ ಶಾಸ್ತ್ರ ಮಾಡ್ತಿದ್ದ ವ್ಯಕ್ತಿ ಹೃದಯಸ್ತಂಭನಕ್ಕೊಳಗಾಗಿ ಕೂತಲ್ಲೇ ಕುಸಿದು ಬಿದ್ದು ಸಾವನ್ನಪ್ಪಿರೋ ದುರಂತ ಹೈದರಾಬಾದ್ ನಲ್ಲಿ ನಡೆದಿದೆ.

ಕಲಾಪತ್ಥರ್ ಪ್ರದೇಶದಲ್ಲಿ ನಡೆದ ಹಳದಿ ಸಮಾರಂಭದಲ್ಲಿ ರಬ್ಬಾನಿ ಎಂದು ಗುರುತಿಸಲಾದ ವ್ಯಕ್ತಿ ಹೃದಯ ಸ್ತಂಭನಕ್ಕೆ ಒಳಗಾಗಿ ಮೃತಪಟ್ಟರು.

ಫೆಬ್ರವರಿ 20 ರಂದು ನಡೆದ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರಬ್ಬಾನಿ ತಮ್ಮ ಹತ್ತಿರದ ಸಂಬಂಧಿಕರ ಮನೆಯಲ್ಲಿ ಹಳದಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ವರನಿಗೆ ಅರಿಶಿನ ಹಚ್ಚುವ ವೇಳೆ ಕುಸಿದು ಬಿದ್ದರು. ರಬ್ಬಾನಿ ಅವರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಚಿಕಿತ್ಸೆ ಪಡೆಯುವಾಗ ಸಾವನ್ನಪ್ಪಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments