Sunday, September 25, 2022
Google search engine
HomeUncategorizedBREAKING NEWS: ಹಿರಿಯ ನಟ, ನಿರ್ಮಾಪಕ ಭಾರತಿರಾಜ ಆಸ್ಪತ್ರೆಗೆ ದಾಖಲು

BREAKING NEWS: ಹಿರಿಯ ನಟ, ನಿರ್ಮಾಪಕ ಭಾರತಿರಾಜ ಆಸ್ಪತ್ರೆಗೆ ದಾಖಲು

BREAKING NEWS: ಹಿರಿಯ ನಟ, ನಿರ್ಮಾಪಕ ಭಾರತಿರಾಜ ಆಸ್ಪತ್ರೆಗೆ ದಾಖಲು

ಚೆನ್ನೈ: ತಮಿಳು ಚಲನಚಿತ್ರ ನಿರ್ಮಾಪಕ-ನಟ ಭಾರತಿರಾಜ ಶ್ವಾಸಕೋಶದ ಸೋಂಕಿನ ಹಿನ್ನಲೆಯಲ್ಲಿ ಚೆನ್ನೈನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಭಾರತಿರಾಜ ಅವರನ್ನು ಚೆನ್ನೈನ ಎಂಜಿಎಂ ಹೆಲ್ತ್‌ ಕೇರ್‌ ನ ತೀವ್ರ ನಿಗಾ ಘಟಕಕ್ಕೆ(ಐಸಿಯು) ದಾಖಲಿಸಲಾಗಿದೆ. ಆಸ್ಪತ್ರೆಯ ಹೇಳಿಕೆಯ ಪ್ರಕಾರ, ಅವರು ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯ ಸ್ಥಿರವಾಗಿದೆ ಎಂದು ಹೇಳಲಾಗಿದೆ.

81 ವರ್ಷದ ಭಾರತಿರಾಜ ಅವರನ್ನು ತೀವ್ರ ನಿಗಾ ಘಟಕದಲ್ಲಿರಿಸಿ ವೈದ್ಯರ ತಂಡದಿಂದ ಮೇಲ್ವಿಚಾರಣೆ ಮಾಡಲಾಗುತ್ತಿದೆ.  ಭಾರತಿರಾಜ ಅವರು ಧನುಷ್ ಅಭಿನಯದ ‘ತಿರುಚಿತ್ರಾಂಬಲ’ದಲ್ಲಿ ಕೊನೆಯದಾಗಿ ಅಭಿನಯಿಸಿದ್ದು ಇದು ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments