Thursday, August 11, 2022
Google search engine
HomeUncategorizedBREAKING NEWS: ಕೊಲ್ಕತ್ತಾದಲ್ಲಿ AK47 ನಿಂದ ಮನಬಂದಂತೆ ಗುಂಡಿನ ದಾಳಿ: CISF ಅಧಿಕಾರಿ ಸಾವು

BREAKING NEWS: ಕೊಲ್ಕತ್ತಾದಲ್ಲಿ AK47 ನಿಂದ ಮನಬಂದಂತೆ ಗುಂಡಿನ ದಾಳಿ: CISF ಅಧಿಕಾರಿ ಸಾವು

BREAKING NEWS: ಕೊಲ್ಕತ್ತಾದಲ್ಲಿ AK47 ನಿಂದ ಮನಬಂದಂತೆ ಗುಂಡಿನ ದಾಳಿ: CISF ಅಧಿಕಾರಿ ಸಾವು

ಕೊಲ್ಕತ್ತಾದಲ್ಲಿ ಎಕೆ47 ಗನ್ ನಿಂದ ಮನಬಂದಂತೆ ಗುಂಡಿನ ದಾಳಿ ನಡೆಸಲಾಗಿದೆ. ಸಿಐಎಸ್ಎಫ್ ಅಧಿಕಾರಿ ಕೊಲೆ ಮಾಡಿದ ಬಂದೂಕುಧಾರಿ ಎಕೆ47 ಗನ್ ಸಮೇತ ಪೊಲೀಸರಿಗೆ ಶರಣಾಗಿದ್ದಾನೆ. ಗುಂಡಿನ ದಾಳಿಯಲ್ಲಿ ಮತ್ತೊಬ್ಬರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೊಲ್ಕೊತ್ತಾದ ಇಂಡಿಯನ್ ಮ್ಯೂಸಿಯಂ ಪಾರ್ಕ್ ಸ್ಟ್ರೀಟ್ ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಒಬ್ಬರು ಸಾವು ಕಂಡಿದ್ದಾರೆ. ಸ್ಥಳಕ್ಕೆ ರಕ್ಷಣಾ ಪಡೆಗಳು ದೌಡಾಯಿಸಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕೋಲ್ಕತ್ತಾದ ಇಂಡಿಯನ್ ಮ್ಯೂಸಿಯಂನಲ್ಲಿ ಸಿಐಎಸ್‌ಎಫ್ ಬ್ಯಾರಕ್‌ ಗಳ ಮೇಲೆ ಗುಂಡಿನ ದಾಳಿ ನಡೆದಿದೆ. ಡಿಎಸ್ಪಿ ದರ್ಜೆಯ ಅಧಿಕಾರಿ ಮೃತಪಟ್ಟಿದ್ದು, ಮತ್ತೊಬ್ಬ ಅಧಿಕಾರಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಕೋಲ್ಕತ್ತಾ ಪೊಲೀಸರು, ಕಮಾಂಡ್ ಫೋರ್ಸ್ ಮತ್ತು ಆಂಬ್ಯುಲೆನ್ಸ್ ಈಗಾಗಲೇ ಸ್ಥಳಕ್ಕೆ ತಲುಪಿದ್ದಾರೆ. ಕಮಾಂಡೋಗಳು ಬುಲೆಟ್ ಪ್ರೂಫ್ ಜಾಕೆಟ್ ಧರಿಸಿ ಮ್ಯೂಸಿಯಂ ಪ್ರವೇಶಿಸಿದ್ದಾರೆ. ಬಂದೂಕುಧಾರಿ ಗನ್ ಸಮೇತ ಶರಣಾಗಿದ್ದಾನೆ ಎಂದು ಹೇಳಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments