Thursday, August 11, 2022
Google search engine
HomeUncategorizedBREAKING NEWS: ಅಪಘಾತಕ್ಕೀಡಾದ ಆಂಬುಲೆನ್ಸ್: ರೋಗಿ ಸೇರಿ ಮೂವರ ಸಾವು

BREAKING NEWS: ಅಪಘಾತಕ್ಕೀಡಾದ ಆಂಬುಲೆನ್ಸ್: ರೋಗಿ ಸೇರಿ ಮೂವರ ಸಾವು

BREAKING NEWS: ಅಪಘಾತಕ್ಕೀಡಾದ ಆಂಬುಲೆನ್ಸ್: ರೋಗಿ ಸೇರಿ ಮೂವರ ಸಾವು

ಉಡುಪಿ: ಟೋಲ್ ಕಂಬಕ್ಕೆ ಆಂಬುಲೆನ್ಸ್ ಡಿಕ್ಕಿಯಾಗಿ ಮೂವರು ಸಾವನ್ನಪ್ಪಿದ ಘಟನೆ ಉಡುಪಿಯಲ್ಲಿ ನಡೆದಿದೆ. ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಶಿರೂರು ಟೋಲ್ ನಲ್ಲಿ ಘಟನೆ ಸಂಭವಿಸಿದೆ.

ಹೊನ್ನಾವರದಿಂದ ಕುಂದಾಪುರಕ್ಕೆ ರೋಗಿ ಸಾಗಿಸುತ್ತಿದ್ದ ವೇಳೆ ಟೋಲ್ ಕಂಬಕ್ಕೆ ಆಂಬುಲೆನ್ಸ್ ಡಿಕ್ಕಿಯಾಗಿ ಮೂವರು ಮೃತಪಟ್ಟಿದ್ದಾರೆ. ರೋಗಿ, ರೋಗಿಯ ಪತ್ನಿ ಹಾಗೂ ಆಂಬುಲೆನ್ಸ್ ಸಿಬ್ಬಂದಿ ಮೃತಪಟ್ಟಿದ್ದಾರೆ. ಒಬ್ಬ ಟೋಲ್ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಆಂಬುಲೆನ್ಸ್ ಚಾಲಕನ ಅಜಾಗರೂಕತೆಯಿಂದ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಸ್ಥಳಕ್ಕೆ ಬೈಂದೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments