BREAKING: ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪ:, ರಿಕ್ಟರ್ ಮಾಪಕದಲ್ಲಿ 6.3 ತೀವ್ರತೆ

ಜಕಾರ್ತ: ಇಂಡೋನೇಷ್ಯಾದ ಟೊಬೆಲೊದಲ್ಲಿ ಗುರುವಾರ ಭೂಕಂಪನದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 6.3 ಇತ್ತು.
ಭೂಕಂಪದ ಕೇಂದ್ರಬಿಂದು ಇಂಡೋನೇಷ್ಯಾದಿಂದ 177 ಕಿಮೀ ಉತ್ತರದಲ್ಲಿದೆ ಎಂದು USGS ವರದಿ ಮಾಡಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಭೂಕಂಪದಿಂದ ಯಾವುದೇ ಹಾನಿಯಾಗಿರುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.