Thursday, February 2, 2023
Google search engine
Home Blog

ಕಾರ್ ಗೆ ಬೆಂಕಿ ತಗುಲಿ ಗರ್ಭಿಣಿ ಪತ್ನಿ, ಪತಿ ಸಾವು

0

ಕಾರ್ ಗೆ ಬೆಂಕಿ ತಗುಲಿ ಗರ್ಭಿಣಿ ಪತ್ನಿ, ಪತಿ ಸಾವು

ಕಣ್ಣೂರು: ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ಕಾರ್ ಗೆ ಬೆಂಕಿ ತಗುಲಿ ಹೊತ್ತಿ ಉರಿದ ಪರಿಣಾಮ ಗರ್ಭಿಣಿ ಹಾಗೂ ಆಕೆಯ ಪತಿ ಸಜೀವ ದಹನವಾಗಿರುವ ದಾರುಣ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ.

ರೀಶಾ(26) ಮತ್ತು ಆಕೆಯ ಪತಿ ಪ್ರಿಜಿತ್(35) ಮೃತಪಟ್ಟವರು. ರೀಶಾ ಅವರಿಗೆ ಹೆರಿಗೆ ನೋವು ಕಾನಿಸಿಕೊಂಡಿದ್ದರಿಂದ ಅವರು ಜಿಲ್ಲಾ ಆಸ್ಪತ್ರೆಗೆ ಹೋಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

2020 ರ ಮಾರುತಿ ಎಸ್-ಪ್ರೆಸ್ಸೋ ಕಾರ್ ನಲ್ಲಿ ಆರು ಜನರು ಪ್ರಯಾಣಿಸುತ್ತಿದ್ದರು. ಮಗು ಸೇರಿದಂತೆ ಹಿಂಬದಿಯಲ್ಲಿದ್ದ ನಾಲ್ವರು ಪಾರಾಗಿದ್ದಾರೆ. ಆದರೆ ಮುಂಭಾಗದಲ್ಲಿದ್ದ ದಂಪತಿಗಳಿಗೆ ಬೆಂಕಿ ತಗುಲಿದಾಗ ಬಾಗಿಲು ತೆರೆಯಲು ಸಾಧ್ಯವಾಗಲಿಲ್ಲ.

ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ತಲುಪುವಷ್ಟರಲ್ಲಿ ಪ್ರಿಜಿತ್ ಮತ್ತು ರೀಶಾ ಸಾವನ್ನಪ್ಪಿದ್ದರು. ದಂಪತಿಯನ್ನು ರಕ್ಷಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ ಎಂದು ಸ್ಥಳದಲ್ಲಿದ್ದವರು ಹೇಳಿದ್ದಾರೆ.

ಆದಿ ಯೋಗಿ ಪ್ರತಿಮೆ: ಯಥಾಸ್ಥಿತಿ ಕಾಯ್ದುಕೊಳ್ಳುವ ಆದೇಶ ಮುಂದುವರೆಸಿದ ಹೈಕೋರ್ಟ್

0

ಆದಿ ಯೋಗಿ ಪ್ರತಿಮೆ: ಯಥಾಸ್ಥಿತಿ ಕಾಯ್ದುಕೊಳ್ಳುವ ಆದೇಶ ಮುಂದುವರೆಸಿದ ಹೈಕೋರ್ಟ್

ಬೆಂಗಳೂರು: ಚಿಕ್ಕಬಳ್ಳಾಪುರದ ನಂದಿ ಬೆಟ್ಟದ ಬಳಿ ಆದಿ ಯೋಗಿ ಪ್ರತಿಮೆ ಸ್ಥಾಪನೆ ವಿಚಾರಕ್ಕೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಯ್ದುಕೊಳ್ಳುವ ಆದೇಶವನ್ನು ಹೈಕೋರ್ಟ್ ಮುಂದುವರೆಸಿದೆ.

ಎಸ್. ಕ್ಯಾತಪ್ಪ ಮತ್ತಿತರರು ಸಲ್ಲಿಸಿದ್ದ ಪಿಐಎಲ್ ವಿಚಾರಣೆ ನಡೆಸಿದ್ದು, ಯಥಾಸ್ಥಿತಿ ಆದೇಶದ ತೆರವಿಗೆ ಇಶಾ ಪ್ರತಿಷ್ಠಾನ ಮನವಿ ಮಾಡಿತು. ಪ್ರತಿಮೆ ಅನಾವರಣಗೊಳಿಸಿದ ದಿನದಂದು ಬೆಂಕಿ ಹಾಕಲಾಗಿದೆ. ಪಟಾಕಿ ಸಿಡಿಸಿ ಪರಿಸರಕ್ಕೆ ಹಾನಿಯಾಗಿದೆ ಎಂದು ಅರ್ಜಿದಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಯಥಾಸ್ಥಿತಿ ಕಾಯ್ದುಕೊಳ್ಳುವ ಆದೇಶ ಮುಂದುವರೆಸಿದ ಹೈಕೋರ್ಟ್ ವಿಚಾರಣೆ ಮುಂದೂಡಿದೆ.

ಕೋಲಾರದಲ್ಲಿ ಸ್ಪರ್ಧೆಗೆ ಮುಂದಾದ ಸಿದ್ಧರಾಮಯ್ಯರಿಗೆ ಕುರುಬ ಸಮಾಜದ ಬೆಂಬಲ

0

ಕೋಲಾರದಲ್ಲಿ ಸ್ಪರ್ಧೆಗೆ ಮುಂದಾದ ಸಿದ್ಧರಾಮಯ್ಯರಿಗೆ ಕುರುಬ ಸಮಾಜದ ಬೆಂಬಲ

ಕೋಲಾರ: ಕೋಲಾರ ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧೆ ಬಗ್ಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಕೋಲಾರ ನಗರದ ಖಾಸಗಿ ಹೋಟೆಲ್ ನಲ್ಲಿ ಚಿಕ್ಕರಾಯಪ್ಪ ನೇತೃತ್ವದಲ್ಲಿ ಕುರುಬ ಸಮುದಾಯದ ಮುಖಂಡರ ಸಭೆ ನಡೆಸಲಾಗಿದೆ.

ಸಿದ್ದರಾಮಯ್ಯ ಅವರನ್ನು ಕರೆಸಿ ಬೃಹತ್ ಸಭೆ ನಡೆಸಲು ಸಭೆಯಲ್ಲಿ ಒಮ್ಮತದ ನಿರ್ಧಾರ ಕೈಗೊಳ್ಳಲಾಗಿದೆ. ಸಿದ್ದರಾಮಯ್ಯ ಪರವಾಗಿ ಸಮುದಾಯ ಒಗ್ಗೂಡಿಸಲು ಸಮಾಜದ ಮುಖಂಡರು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಸಭೆ ನಡೆಸಿರುವ ಮುಖಂಡರು ಚುನಾವಣೆಯಲ್ಲಿ ಸಿದ್ಧರಾಮಯ್ಯ ಪರವಾಗಿ ಸಮಾಜವನ್ನು ಒಟ್ಟುಗೂಡಿಸಲು ತೀರ್ಮಾನಿಸಿದ್ದಾರೆ.

ಚಿನ್ನ ಖರೀದಿದಾರರಿಗೆ ಬಿಗ್ ಶಾಕ್: ದಿನೇ ದಿನೇ ಏರುಗತಿಯಲ್ಲಿ ಸಾಗಿ ಹೊಸ ದಾಖಲೆ ಮಟ್ಟಕ್ಕೇರಿದ ಚಿನ್ನದ ದರ

0

ಚಿನ್ನ ಖರೀದಿದಾರರಿಗೆ ಬಿಗ್ ಶಾಕ್: ದಿನೇ ದಿನೇ ಏರುಗತಿಯಲ್ಲಿ ಸಾಗಿ ಹೊಸ ದಾಖಲೆ ಮಟ್ಟಕ್ಕೇರಿದ ಚಿನ್ನದ ದರ

ನವದೆಹಲಿ: ದಿನದಿಂದ ದಿನಕ್ಕೆ ದುಬಾರಿಯಾಗುತ್ತಿರುವ ಚಿನ್ನದ ಬೆಲೆ ಈಗ 59,000 ರೂ. ಸಮೀಪಕ್ಕೆ ತಲುಪಿದೆ, ಬೆಳ್ಳಿ ಕೂಡ 1500 ರೂ. ಹೆಚ್ಚಳವಾಗಿದೆ.

ಬಜೆಟ್‌ ನಿಂದ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಇಂದು MCX ನಲ್ಲಿ ಚಿನ್ನದ ಬೆಲೆ ತನ್ನ ಹೊಸ ದಾಖಲೆಯ ಮಟ್ಟವನ್ನು ತಲುಪಿದೆ. ಜಾಗತಿಕ ಮಾರುಕಟ್ಟೆಯ ಅಬ್ಬರದ ನಡುವೆಯೇ ದೇಶೀಯ ಮಾರುಕಟ್ಟೆಯಲ್ಲೂ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ದೆಹಲಿಯ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಂದು 58,600 ರೂ. ಇದೆ ಎಂದು ಹೆಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಮಾಹಿತಿ ನೀಡಿದೆ.

ಗುರುವಾರ ದೆಹಲಿಯ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 770 ರೂಪಾಯಿ ಏರಿಕೆಯಾಗಿದ್ದು, ಪ್ರತಿ 10 ಗ್ರಾಂಗೆ 58,680 ರೂಪಾಯಿಗಳಿಗೆ ತಲುಪಿದೆ. ಅದೇ ಸಮಯದಲ್ಲಿ, ಕಳೆದ ವಹಿವಾಟಿನಲ್ಲಿ, ಚಿನ್ನದ ಬೆಲೆ 10 ಗ್ರಾಂಗೆ 57,910 ರೂ. ಇತ್ತು. ಇದಲ್ಲದೇ ಬೆಳ್ಳಿಯ ಬೆಲೆಯೂ 1,491 ರೂಪಾಯಿ ಏರಿಕೆಯಾಗಿ ಪ್ರತಿ ಕೆಜಿಗೆ 71,666 ರೂಪಾಯಿಗಳಿಗೆ ತಲುಪಿದೆ.

ಬಹಿರ್ದೆಸೆಗೆ ಹೋದಾಗಲೇ ದುರಂತ: ಹಳ್ಳದಲ್ಲಿ ಮುಳುಗಿ ಬಾಲಕರು ಸಾವು

0

ಬಹಿರ್ದೆಸೆಗೆ ಹೋದಾಗಲೇ ದುರಂತ: ಹಳ್ಳದಲ್ಲಿ ಮುಳುಗಿ ಬಾಲಕರು ಸಾವು

ಬಳ್ಳಾರಿ: ಬಹಿರ್ದೆಸೆಗೆ ತೆರಳಿದ್ದ ಇಬ್ಬರು ಬಾಲಕರು ಹಳ್ಳದಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಗುತ್ತಿಗನೂರು ಸಮೀಪ ನಡೆದಿದೆ.

ಮಣಿಕಂಠ(14), ಹರ್ಷವರ್ಧನ(9) ಮೃತಪಟ್ಟವರು ಎಂದು ಹೇಳಲಾಗಿದೆ. ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಗುತ್ತಿಗನೂರು ಗ್ರಾಮದ ಸಮೀಪ ಘಟನೆ ನಡೆದಿದೆ. ಅಂಬಾದೇವಿ ಜಾತ್ರೆಗೆ ಬಂದಿದ್ದ ಚೌಡಕಿ ಕುಟುಂಬದ ಮಕ್ಕಳು ಮೃತಪಟ್ಟಿದ್ದಾರೆ.

ಒಂದೇ ಕುಟುಂಬದ ಮೂವರು ಮಕ್ಕಳು ಬಹಿರ್ದೆಸೆಗೆ ತೆರಳಿದ್ದರು. ಇಬ್ಬರು ಬಾಲಕರು ಸಾವನ್ನಪ್ಪಿದ್ದು, ಮತ್ತೊಬ್ಬ ಬಾಲಕ ಸುರಕ್ಷಿತವಾಗಿದ್ದಾನೆ. ಸ್ಥಳಕ್ಕೆ ಕುರುಗೋಡು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಭಾರತ-ಆಸ್ಟ್ರೇಲಿಯಾ ಟೆಸ್ಟ್‌ ಸರಣಿ, ಅಹಮದಾಬಾದ್‌ನಲ್ಲಿ ಪಂದ್ಯ ವೀಕ್ಷಿಸಲಿದ್ದಾರೆ ಪ್ರಧಾನಿ ಮೋದಿ: ಆಸೀಸ್‌ ಪಿಎಂಗೂ ಆಹ್ವಾನ

0

ಭಾರತ-ಆಸ್ಟ್ರೇಲಿಯಾ ಟೆಸ್ಟ್‌ ಸರಣಿ, ಅಹಮದಾಬಾದ್‌ನಲ್ಲಿ ಪಂದ್ಯ ವೀಕ್ಷಿಸಲಿದ್ದಾರೆ ಪ್ರಧಾನಿ ಮೋದಿ: ಆಸೀಸ್‌ ಪಿಎಂಗೂ ಆಹ್ವಾನ

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 4 ಪಂದ್ಯಗಳ ಟೆಸ್ಟ್ ಸರಣಿ ಫೆಬ್ರವರಿ 9 ರಿಂದ ಆರಂಭವಾಗಲಿದೆ. ಈ ಸರಣಿಯನ್ನು ಬಾರ್ಡರ್-ಗವಾಸ್ಕರ್ ಟ್ರೋಫಿ ಎಂದೂ ಕರೆಯಲಾಗುತ್ತದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ (WTC ಫೈನಲ್) ಫೈನಲ್‌ ಹಿನ್ನೆಲೆಯಲ್ಲಿ ಈ ಸರಣಿ ಬಹಳ ಮುಖ್ಯ. ಸರಣಿಯ ನಾಲ್ಕನೇ ಪಂದ್ಯದ ಕುರಿತಾದ ಇಂಟ್ರೆಸ್ಟಿಂಗ್‌ ಸುದ್ದಿಯೊಂದು ಈಗ ಹೊರಬಿದ್ದಿದೆ.

ಅಹಮದಾಬಾದ್‌ನಲ್ಲಿ ನಡೆಯಲಿರುವ ಈ ಟೆಸ್ಟ್ ಪಂದ್ಯವನ್ನು ನೋಡಲು ಪ್ರಧಾನಿ ನರೇಂದ್ರ ಮೋದಿ ತೆರಳಲಿದ್ದಾರೆ.ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಅಂತಿಮ ಟೆಸ್ಟ್ ಪಂದ್ಯವನ್ನು ಮೋದಿ ವೀಕ್ಷಿಸಲಿದ್ದಾರೆ. ಅಷ್ಟೇ ಅಲ್ಲ ಪಂದ್ಯ ವೀಕ್ಷಣೆಗಾಗಿ ಆಗಮಿಸುವಂತೆ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರನ್ನು ಕೂಡ ಆಹ್ವಾನಿಸಲಾಗಿದೆ. ಆಸೀಸ್‌ ಪ್ರಧಾನಿ ಭಾರತಕ್ಕೆ ಬರಲಿದ್ದು, ಎರಡೂ ದೇಶಗಳ ಪ್ರಧಾನ ಮಂತ್ರಿಗಳು ಕ್ರೀಡಾಂಗಣದಲ್ಲಿ ಆಟಗಾರರನ್ನು ಪ್ರೋತ್ಸಾಹಿಸಲಿದ್ದಾರೆ.

ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂ ವಿಶ್ವದ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂಗಳಲ್ಲಿ ಒಂದಾಗಿದೆ. ಈ ಕ್ರೀಡಾಂಗಣದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸರಣಿಯ ನಾಲ್ಕನೇ ಟೆಸ್ಟ್ ಪಂದ್ಯ ಮಾರ್ಚ್ 9ರಿಂದ ಆರಂಭವಾಗಲಿದೆ. ಈ ಕ್ರೀಡಾಂಗಣಕ್ಕೆ ಪ್ರಧಾನಿ ಮೋದಿ ಹೆಸರನ್ನು ಇಟ್ಟಿದ್ದು, ಇದೇ ಮೊದಲ ಬಾರಿಗೆ ಅವರು ಕ್ರಿಕೆಟ್ ಪಂದ್ಯವನ್ನು ವೀಕ್ಷಿಸಲು ಇಲ್ಲಿಗೆ ಆಗಮಿಸಲಿದ್ದಾರೆ.

ಬಾರ್ಡರ್-ಗವಾಸ್ಕರ್ ಟ್ರೋಫಿ ಆಡಲು ಆಸ್ಟ್ರೇಲಿಯಾ ತಂಡ ಭಾರತಕ್ಕೆ ಬರಲಿದೆ. ಸರಣಿಯ ಮೊದಲ ಟೆಸ್ಟ್ ಪಂದ್ಯ ಫೆಬ್ರವರಿ 9ರಿಂದ ನಾಗ್ಪುರದಲ್ಲಿ ಆರಂಭವಾಗಲಿದೆ. ಸರಣಿಯ ಮುಂದಿನ ಮೂರು ಟೆಸ್ಟ್ ಪಂದ್ಯಗಳು ದೆಹಲಿ, ಧರ್ಮಶಾಲಾ ಮತ್ತು ಅಹಮದಾಬಾದ್‌ನಲ್ಲಿ ನಡೆಯಲಿವೆ. ಬಾರ್ಡರ್-ಗವಾಸ್ಕರ್ ಟ್ರೋಫಿಯ ಎಲ್ಲಾ ಪಂದ್ಯಗಳನ್ನು ಗೆಲ್ಲುವುದು ಭಾರತಕ್ಕೆ ಬಹಳ ಮುಖ್ಯವಾಗಿದೆ. ಟೀಂ ಇಂಡಿಯಾ ಈ ಎಲ್ಲಾ ಪಂದ್ಯಗಳನ್ನು ಗೆದ್ದರೆ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಪ್ರವೇಶಿಸುವ ಪ್ರಬಲ ಸ್ಪರ್ಧಿಯಾಗಲಿದೆ.

ಮುಟ್ಟಾದಾಗ ಅಡುಗೆ ಮನೆಗೆ ಕಾಲಿಡಬಾರದು; ಉಪ್ಪಿನಕಾಯಿಯನ್ನೂ ಮುಟ್ಟುವಂತಿಲ್ಲ; ಇಲ್ಲಿದೆ ಈ ರೂಢಿಗಳ ಹಿಂದಿನ ಸತ್ಯ

0

ಮುಟ್ಟಾದಾಗ ಅಡುಗೆ ಮನೆಗೆ ಕಾಲಿಡಬಾರದು; ಉಪ್ಪಿನಕಾಯಿಯನ್ನೂ ಮುಟ್ಟುವಂತಿಲ್ಲ; ಇಲ್ಲಿದೆ ಈ ರೂಢಿಗಳ ಹಿಂದಿನ ಸತ್ಯ

ಮುಟ್ಟಿನ ಸಮಯದಲ್ಲಿ ಮಹಿಳೆಯರು ಕೆಲವೊಂದು ನಿರ್ದಿಷ್ಟ ಕೆಲಸಗಳನ್ನು ಮಾಡಬಾರದು ಎಂಬ ನಿಯಮ ಅನಾದಿ ಕಾಲದಿಂದಲೂ ಇದೆ. ಇದು ಸತ್ಯವೋ ಮಿಥ್ಯವೋ ಎಂಬುದನ್ನು ಪರಿಶೀಲಿಸದೇ ಜನರು ಪಾಲಿಸುತ್ತಾರೆ. ಮುಟ್ಟಾದಾಗ ಮಹಿಳೆಯರು ತಮ್ಮ ಕೂದಲನ್ನು ತೊಳೆದರೆ ಅಥವಾ ಮುಟ್ಟಿನ ಸಮಯದಲ್ಲಿ ವ್ಯಾಯಾಮ ಮಾಡಿದರೆ ಅವರ ಆರೋಗ್ಯವು ಹದಗೆಡುತ್ತದೆ ಎಂದು ಹೇಳಲಾಗುತ್ತದೆ.

ಋತುಮತಿಯಾದಾಗ ಅಡುಗೆಮನೆಗೆ ಹೋಗಬಾರದು, ಉಪ್ಪಿನಕಾಯಿಯನ್ನು ಮುಟ್ಟಬಾರದು, ಮುಟ್ಟಿದರೆ ಉಪ್ಪಿನಕಾಯಿ ಹಾಳಾಗಿ ಹೋಗುತ್ತದೆ. ಅಡುಗೆಮನೆ ಅಶುದ್ಧವಾಗುತ್ತದೆ ಎಂದೆಲ್ಲಾ ಹಿರಿಯರು ಹೇಳುವುದನ್ನು ನೀವೂ ಕೇಳಿರಬಹುದು. ಈ ಆಚರಣೆಗಳ ಹಿಂದಿನ ಅಸಲಿ ಸತ್ಯವೇನು ಅನ್ನೋದನ್ನು ತಿಳಿಯೋಣ.

ಪಿರಿಯಡ್ಸ್‌ನಲ್ಲಿ ಉಪ್ಪಿನಕಾಯಿಯನ್ನು ಮುಟ್ಟಬೇಕೇ ಅಥವಾ ಬೇಡವೇ?

ಪುರಾತನ ಕಾಲದಿಂದಲೂ, ಮುಟ್ಟಾದಾಗ ಉಪ್ಪಿನಕಾಯಿಯನ್ನು ಮುಟ್ಟಿದರೆ ಉಪ್ಪಿನಕಾಯಿ ಕೆಡುತ್ತದೆ ಅಥವಾ ಕೊಳೆಯುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಆದರೆ ಈ ವಿಚಾರದಲ್ಲಿ ಯಾವುದೇ ಸತ್ಯಾಂಶವಿಲ್ಲ. ವಾಸ್ತವವಾಗಿ ಮುಟ್ಟು ಮತ್ತು ಉಪ್ಪಿನಕಾಯಿಗೆ ಒಂದಕ್ಕೊಂದು ಸಂಬಂಧವಿಲ್ಲ. ಉಪ್ಪಿನಕಾಯಿ ಒಂದು ಖಾದ್ಯ ವಸ್ತುವಾಗಿದ್ದು ಅದನ್ನು ಸರಿಯಾಗಿ ಇಡದಿದ್ದರೆ ಕೆಡಬಹುದು. ಮುಟ್ಟಿನ ಸಮಯದಲ್ಲಿ ಸ್ಪರ್ಷಿಸಿದರೆ ಕೆಟ್ಟು ಹೋಗುತ್ತದೆ ಎಂಬದು ಸಂಪೂರ್ಣವಾಗಿ ಅಸಂಬದ್ಧ ಮತ್ತು ವದಂತಿಯಾಗಿದೆ.

ಮುಟ್ಟಿನ ಸಮಯದಲ್ಲಿ ಕೂದಲನ್ನು ತೊಳೆಯದಂತೆ ಸಲಹೆ ನೀಡಲಾಗುತ್ತದೆ. ಏಕೆಂದರೆ ಆಗ ರಕ್ತದ ಹರಿವು ಅಧಿಕವಾಗಿರುತ್ತದೆ. ಆದರೆ ಇದು ಕೂಡ ಸತ್ಯಕ್ಕೆ ದೂರವಾದದ್ದು. ವಾಸ್ತವವಾಗಿ ಋತುಚಕ್ರದಲ್ಲಿ ಕೂದಲು ತೊಳೆಯುವುದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ. ಅದು ನಿಮ್ಮ ಪಿರಿಯಡ್‌ ಮೇಲೆ ಯಾವುದೇ ಮಹತ್ವದ ಪರಿಣಾಮ ಬೀರುವುದಿಲ್ಲ. ಪಿರಿಯಡ್ಸ್ ಸಮಯದಲ್ಲಿ ವ್ಯಾಯಾಮ ಮಾಡಬಾರದು ಎಂಬುದನ್ನು ನೀವೂ ಕೇಳಿರಬಹುದು. ಮುಟ್ಟಾದಾಗ ವ್ಯಾಯಾಮ ಮಾಡಿದರೆ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎನ್ನಲಾಗುತ್ತದೆ.

ಆದರೆ ಋತುಚಕ್ರದ ಸಮಯದಲ್ಲಿ ಕೆಲವರಿಗೆ ವಿಪರೀತ ಸೆಳೆತ, ಬ್ಲೀಡಿಂಗ್‌ ಸಮಸ್ಯೆಯಿರುತ್ತದೆ. ಲಘು ವ್ಯಾಯಾಮ ಮಾಡಿದರೆ ಸೆಳೆತ ಕಡಿಮೆಯಾಗುತ್ತದೆ. ಪಿರಿಯಡ್ಸ್ ಸಮಯದಲ್ಲಿ ಅಡುಗೆಮನೆಗೆ ಕಾಲಿಡಬಾರದು ಎಂಬ ನಿಯಮ ಅನೇಕ ಕಡೆಗಳಲ್ಲಿ ರೂಢಿಯಲ್ಲಿದೆ. ಆದರೆ ಅಡುಗೆ ಮನೆಗೂ ಋತುಚಕ್ರಕ್ಕೂ ಯಾವುದೇ ಸಂಬಂಧವಿಲ್ಲ. ಮುಟ್ಟಿನ ಸಮಯದಲ್ಲಿ ನೀವು ಹೈಜಿನಿಕ್‌ ಆಗಿರಬೇಕು. ಚೆನ್ನಾಗಿ ಸ್ನಾನ ಮಾಡಿ ಸ್ವಚ್ಛವಾಗಿದ್ದರೆ ಅಡುಗೆಮನೆಗೆ ಹೋಗಬಹುದು. ಇದರಿಂದ ಅಡುಗೆಮನೆಯಲ್ಲಿ ಯಾವುದೇ ಕೆಟ್ಟ ಪರಿಣಾಮವಾಗುವುದಿಲ್ಲ.

 

BIG NEWS: ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆತ ಪ್ರಕರಣ; ಆರೋಪಿಗಳ ಗಡಿಪಾರಿಗೆ ವಿರೋಧ

0

BIG NEWS: ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆತ ಪ್ರಕರಣ; ಆರೋಪಿಗಳ ಗಡಿಪಾರಿಗೆ ವಿರೋಧ

ಮಡಿಕೇರಿ: ವಿಪಕ್ಷ ನಾಯಕ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಗಡಿಪಾರು ಮಾಡಲು ಮುಂದಾಗಿದ್ದ ಪೊಲೀಸರ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.

ಆರೋಪಿಗಳ ಗಡಿಪಾರು ಮಾಡಲು ಪೊಲೀಸ್ ಇಲಾಖೆಯು ಉಪವಿಭಾಗಾಧಿಕಾರಿ ನ್ಯಾಯಾಲಯಕ್ಕೆ ಶಿಫಾರಸು ಮಾಡಿರುವುದನ್ನು ಖಂಡಿಸಿ ಹಿಂದೂಪರ ಸಂಘಟನೆ ಕಾರ್ಯಕರ್ತರು ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಮಡಿಕೇರಿಯಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾವಣೆಗೊಂಡಿರುವ ನೂರಾರು ಕಾರ್ಯಕರ್ತರು ಗಡಿಪಾರು ನೋಟೀಸ್ ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ.

ಮಡಿಕೇರಿಗೆ ಆಗಮಿಸಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣ ಸಂಬಂಧ ಕವನ್ ಕಾವೇರಪ್ಪ, ವಿನಯ್ ಎಂಬುವವರ ಗಡಿಪಾರಿಗೆ ಪೊಲೀಸ್ ಇಲಾಖೆ ಶಿಫಾರಸು ಮಾಡಿದೆ.

ಈ ವಸ್ತುಗಳನ್ನು ಯಾವಾಗಲೂ ಫ್ರಿಡ್ಜ್‌ನಲ್ಲಿಡಿ; ಆರಾಮಾಗಿ ಇಳಿಸಬಹುದು ತೂಕ….!

0

ಈ ವಸ್ತುಗಳನ್ನು ಯಾವಾಗಲೂ ಫ್ರಿಡ್ಜ್‌ನಲ್ಲಿಡಿ; ಆರಾಮಾಗಿ ಇಳಿಸಬಹುದು ತೂಕ….!

ಹೆಚ್ಚುತ್ತಿರುವ ತೂಕವನ್ನು ನಿಯಂತ್ರಿಸಲು ಆರೋಗ್ಯಕರ ಆಹಾರವನ್ನು ಅನುಸರಿಸುವುದು ಬಹಳ ಮುಖ್ಯ. ಆದರೆ ಡಯಟ್‌ ಮಾಡುವುದು ಎಲ್ಲರಿಗೂ ಸುಲಭದ ಕೆಲಸವಲ್ಲ. ಡಯಟ್‌ ಮಾಡಲು ಸಾಧ್ಯವಿಲ್ಲ, ತಿನ್ನಲೇಬೇಕು ಎನ್ನುವ ಅನೇಕರಿದ್ದಾರೆ. ಅವರಿಗೆ ತೂಕವನ್ನು ಕಡಿಮೆ ಮಾಡಿಕೊಳ್ಳುವುದು ಒಂದು ಸವಾಲಿನ ಕೆಲಸವಾಗಿದೆ. ನೀವು ಸಹ ಅದೇ ರೀತಿ ಆಹಾರ ಪ್ರಿಯರಾಗಿದ್ದರೆ ಕೆಲವೊಂದು ಸರಳ ಸಲಹೆಗಳನ್ನು ಅನುಸರಿಸಿ.

ನೀವು ಸಹ ತೂಕ ಇಳಿಸಿಕೊಳ್ಳಲು ಬಯಸಿದರೆ, ಯಾವಾಗಲೂ ನಿಮ್ಮ ಫ್ರಿಡ್ಜ್‌ನಲ್ಲಿ ಆರೋಗ್ಯಕರ ವಸ್ತುಗಳನ್ನು ಇರಿಸಿ. ಆಗ ಆರಾಮಾಗಿ ತೂಕವನ್ನು ಕಡಿಮೆ ಮಾಡಬಹುದು. ಏಕೆಂದರೆ ತಿನ್ನಬೇಕೆಂಬ ಕಡುಬಯಕೆಯಲ್ಲಿ ಫ್ರಿಡ್ಜ್‌  ತೆರೆದಾಗ ತಾಜಾ ಹಣ್ಣುಗಳು, ತರಕಾರಿಗಳು ಸೇರಿದಂತೆ ಆರೋಗ್ಯಕರ ಆಹಾರಗಳು ಮಾತ್ರ ಕಾಣುತ್ತವೆ. ಆಗ ನೀವು ಹೆಲ್ದಿ ಫುಡ್‌ಗಳನ್ನು ಮಾತ್ರ ಸೇವಿಸುತ್ತೀರಾ. ಇದರಿಂದ ಸಹಜವಾಗಿಯೇ ತೂಕ ಇಳಿಕೆಯಾಗುತ್ತದೆ.

ಫ್ರಿಡ್ಜ್‌ನಲ್ಲಿ ಸದಾ ಇರಬೇಕಾದ ವಸ್ತುಗಳು

ಮೊಟ್ಟೆಮೊಟ್ಟೆ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮೊಟ್ಟೆಯಿಂದ ಬಗೆಬಗೆಯ ತಿನಿಸುಗಳನ್ನು ಮಾಡಿ ಹೊಟ್ಟೆ ತುಂಬಿಸಿಕೊಳ್ಳಬಹುದು. ಅದಕ್ಕಾಗಿಯೇ ಯಾವಾಗಲೂ ಮೊಟ್ಟೆಗಳನ್ನು ಫ್ರಿಡ್ಜ್‌ನಲ್ಲಿ ಇಡಬೇಕು.

ತರಕಾರಿತರಕಾರಿಗಳು ಸಹ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ಈ ತರಕಾರಿಗಳನ್ನು ಮೊಟ್ಟೆಗಳೊಂದಿಗೆ ಭಕ್ಷ್ಯವಾಗಿ ಬಳಸಬಹುದು. ಅತ್ಯುತ್ತಮವಾದ ಸಲಾಡ್ ಮಾಡಿಕೊಂಡು ಕೂಡ ತಿನ್ನಬಹುದು.

ಸೀಸನಲ್‌ ಫ್ರೂಟ್ಸ್‌: ಕೆಲವೊಮ್ಮೆ ನಮಗೆ ಸಿಹಿ ತಿನ್ನಬೇಕೆಂಬ ಕಡು ಬಯಕೆಯಾಗುತ್ತದೆ. ಆ ಸಮಯದಲ್ಲಿ ಚಾಕಲೇಟ್, ಕ್ಯಾಂಡಿ ಅಥವಾ ಕೇಕ್ ಬದಲಿಗೆ ಫ್ರಿಡ್ಜ್‌ನಲ್ಲಿ ಇಟ್ಟಿರುವ ಸೀಸನಲ್‌ ಫ್ರೂಟ್ಸ್‌ ಸೇವಿಸಿ. ಇದು ತೂಕ ಇಳಿಸಿಕೊಳ್ಳಲು ಸುಲಭದ ಮಾರ್ಗವಾಗಿದೆ.

 

ನಿಮ್ಮ ಬಳಿ ಹಳೆಯ ಅಥವಾ ಹರಿದು ಹೋಗಿರುವ 100, 200, 500 ರೂಪಾಯಿ ನೋಟುಗಳಿದೆಯಾ ? RBI ನೀಡಿದೆ ಮಹತ್ವದ ಮಾಹಿತಿ

0

ನಿಮ್ಮ ಬಳಿ ಹಳೆಯ ಅಥವಾ ಹರಿದು ಹೋಗಿರುವ 100, 200, 500 ರೂಪಾಯಿ ನೋಟುಗಳಿದೆಯಾ ? RBI ನೀಡಿದೆ ಮಹತ್ವದ ಮಾಹಿತಿ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಕರೆನ್ಸಿ ನೋಟುಗಳನ್ನು ನೀಡಲಾಗುತ್ತದೆ.  ಆದರೆ ನೋಟು ಅಮಾನ್ಯೀಕರಣದ ನಂತರ ದೇಶಾದ್ಯಂತ ನೋಟುಗಳ ಬಗ್ಗೆ ಅನೇಕ ರೀತಿಯ ವೈರಲ್ ಮತ್ತು ನಕಲಿ ಸುದ್ದಿಗಳು ಹೊರಬರುತ್ತಿವೆ.

ಇದೀಗ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಿಮಗಾಗಿ ವಿಶೇಷ ಕೊಡುಗೆಯನ್ನು ತಂದಿದ್ದು, ಇದರಲ್ಲಿ ನೀವು ಹೊಚ್ಚ ಹೊಸ ನೋಟುಗಳನ್ನು ಪಡೆಯುತ್ತೀರಿ. ಈ ನೋಟುಗಳ ಬಗ್ಗೆ ಬ್ಯಾಂಕ್ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದೆ.

ಹತ್ತಿರದ ಶಾಖೆಯನ್ನು ಸಂಪರ್ಕಿಸಬೇಕು

ನೀವು ಸಹ ಹಳೆಯ ಅಥವಾ ಹರಿದ ನೋಟುಗಳನ್ನು ಬದಲಾಯಿಸಲು ಬಯಸಿದರೆ ಅದು ಬಹಳ ಸುಲಭ. ನಿಮ್ಮ ಹತ್ತಿರದ ಶಾಖೆಯನ್ನು ಸಂಪರ್ಕಿಸುವಂತೆ ಬ್ಯಾಂಕ್‌ ಟ್ವೀಟ್‌ ಮೂಲಕ ತಿಳಿಸಿದೆ. ಅಲ್ಲಿ ನೀವು ನೋಟುಗಳು ಮತ್ತು ನಾಣ್ಯಗಳನ್ನು ವಿನಿಮಯ ಮಾಡಿಕೊಳ್ಳಬಹುದು.

ರಿಸರ್ವ್ ಬ್ಯಾಂಕ್ ನಿಯಮ

ರಿಸರ್ವ್ ಬ್ಯಾಂಕ್‌ನ ಹೊಸ ನಿಯಮಗಳ ಪ್ರಕಾರ, ನಿಮ್ಮ ಬಳಿ ಹಳೆಯ ಅಥವಾ ಹರಿದ ನೋಟುಗಳಿದ್ದರೆ ಬ್ಯಾಂಕ್‌ನ ಯಾವುದೇ ಶಾಖೆಗೆ ಭೇಟಿ ನೀಡುವ ಮೂಲಕ ಅವುಗಳನ್ನು ವಿನಿಮಯ ಮಾಡಿಕೊಳ್ಳಬಹುದು. ಬ್ಯಾಂಕ್ ಉದ್ಯೋಗಿ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ನಿರಾಕರಿಸಿದರೆ ಈ ಬಗ್ಗೆ ದೂರು ಸಲ್ಲಿಸಬಹುದು. ನೋಟಿನ ಸ್ಥಿತಿ ಹದಗೆಟ್ಟಷ್ಟೂ ಅದರ ಮೌಲ್ಯ ಕಡಿಮೆಯಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಬೇಕು.

ಯಾವ ಸಂದರ್ಭಗಳಲ್ಲಿ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲಾಗುತ್ತದೆ ?

RBI ಪ್ರಕಾರ, ಯಾವುದೇ ಹರಿದ ನೋಟಿನ ಒಂದು ಭಾಗವು ಕಾಣೆಯಾದಾಗ ಅಥವಾ ಎರಡಕ್ಕಿಂತ ಹೆಚ್ಚು ತುಣುಕುಗಳನ್ನು ಒಳಗೊಂಡಿದ್ದರೆ, ಅದರ ಯಾವುದೇ ಅಗತ್ಯ ಭಾಗವು ಕಾಣೆಯಾಗಿಲ್ಲದಿದ್ದರೆ ಮಾತ್ರ ಅದನ್ನು ಸ್ವೀಕರಿಸಲಾಗುತ್ತದೆ. ಕರೆನ್ಸಿ ನೋಟಿನ ಕೆಲವು ವಿಶೇಷ ಭಾಗಗಳಾದ ಪ್ರಾಧಿಕಾರದ ಹೆಸರು, ಖಾತರಿ ಮತ್ತು ಭರವಸೆಯ ಷರತ್ತು, ಸಹಿ, ಅಶೋಕ ಸ್ತಂಭ, ಮಹಾತ್ಮ ಗಾಂಧಿಯವರ ಚಿತ್ರ, ನೀರಿನ ಗುರುತು ಇತ್ಯಾದಿಗಳು ಸಹ ಕಾಣೆಯಾಗಿದ್ದರೆ ನೋಟು ವಿನಿಮಯವಾಗುವುದಿಲ್ಲ. ದೀರ್ಘಕಾಲದವರೆಗೆ ಮಾರುಕಟ್ಟೆಯಲ್ಲಿ ಚಲಾವಣೆಯಲ್ಲಿರುವ ಕಾರಣ ಬಳಕೆಗೆ ಯೋಗ್ಯವಲ್ಲದ ಮಣ್ಣಾದ ನೋಟುಗಳನ್ನು ಸಹ ಬದಲಾಯಿಸಬಹುದು.

ಆರ್‌.ಬಿ.ಐ ಕಚೇರಿಯಲ್ಲೂ ನೋಟು ಬದಲಾಯಿಸಬಹುದು

ಸ್ವಲ್ಪ ಸುಟ್ಟುಹೋಗಿರುವ ನೋಟುಗಳು ಅಥವಾ ಒಟ್ಟಿಗೆ ಅಂಟಿಕೊಂಡಿರುವ ನೋಟುಗಳನ್ನು ಸಹ ಬದಲಾಯಿಸಬಹುದು. ಆದರೆ ಬ್ಯಾಂಕ್‌ಗಳು ಅವುಗಳನ್ನು ತೆಗೆದುಕೊಳ್ಳುವುದಿಲ್ಲ. ನೀವು ಅವುಗಳನ್ನು ಆರ್‌ಬಿಐನ ಕಚೇರಿಗೆ ತೆಗೆದುಕೊಂಡು ಹೋಗಬೇಕಾಗುತ್ತದೆ. ಉದ್ದೇಶಪೂರ್ವಕವಾಗಿ ನೋಟನ್ನು ಹಾನಿಮಾಡಿಲ್ಲ ಎಂಬುದು ಖಚಿತವಾದ ಬಳಿಕ ಆರ್‌ಬಿಐ ಅದನ್ನು ವಿನಿಮಯ ಮಾಡುತ್ತದೆ.