Tuesday, September 27, 2022
Google search engine
HomeUncategorizedBIG NEWS: PayCM ಪೋಸ್ಟರ್ ಅಭಿಯಾನಕ್ಕೆ ಸಜ್ಜಾದ ಕಾಂಗ್ರೆಸ್ ನಾಯಕರು; ಬೆಂಗಳೂರಿನ ಗಲ್ಲಿ ಗಲ್ಲಿಗೂ ಪೋಸ್ಟರ್...

BIG NEWS: PayCM ಪೋಸ್ಟರ್ ಅಭಿಯಾನಕ್ಕೆ ಸಜ್ಜಾದ ಕಾಂಗ್ರೆಸ್ ನಾಯಕರು; ಬೆಂಗಳೂರಿನ ಗಲ್ಲಿ ಗಲ್ಲಿಗೂ ಪೋಸ್ಟರ್ ಅಂಟಿಸಲು ಕರೆ ಕೊಟ್ಟ ಡಿ.ಕೆ.ಶಿ; ಖಾಕಿ ಹೈ ಅಲರ್ಟ್

BIG NEWS: PayCM ಪೋಸ್ಟರ್ ಅಭಿಯಾನಕ್ಕೆ ಸಜ್ಜಾದ ಕಾಂಗ್ರೆಸ್ ನಾಯಕರು; ಬೆಂಗಳೂರಿನ ಗಲ್ಲಿ ಗಲ್ಲಿಗೂ ಪೋಸ್ಟರ್ ಅಂಟಿಸಲು ಕರೆ ಕೊಟ್ಟ ಡಿ.ಕೆ.ಶಿ; ಖಾಕಿ ಹೈ ಅಲರ್ಟ್

ಬೆಂಗಳೂರು: ಕಾಂಗ್ರೆಸ್ ನಾಯಕರ ಪೇಸಿಎಂ ಅಭಿಯಾನ ತಾರಕಕ್ಕೇರುವ ಸಾಧ್ಯತೆ ದಟ್ಟವಾಗಿದ್ದು, ಪೇಸಿಎಂ ಪೋಸ್ಟರ್ ಅಭಿಯಾನದಲ್ಲಿ ಸ್ವತಃ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆ ಪಿ ಸಿ ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಭಾಗಿಯಾಗಲು ಸಜ್ಜಾಗಿದ್ದಾರೆ.

ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಕಾಂಗ್ರೆಸ್ ನಡೆಸುತ್ತಿರುವ ಈ ಆಂದೋಲನದಲ್ಲಿ ಶಾಸಕರೆಲ್ಲರೂ ಭಾಗಿಯಾಗುವಂತೆ ಡಿ.ಕೆ.ಶಿವಕುಮಾರ್ ಕರೆ ನೀಡಿದ್ದಾರೆ. ಇಂದು ಬೆಂಗಳೂರಿನ ಗಲ್ಲಿ ಗಲ್ಲಿಗಳಲ್ಲಿ ಗೋಡೆಗಳ ಮೇಲೆ ಪೇಸಿಎಂ ಪೋಸ್ಟರ್ ಅಂಟಿಸಲಾಗುವುದು ಎಂದು ತಿಳಿಸಿದ್ದಾರೆ.

ಕೆಪಿಸಿಸಿ ಕಚೇರಿಯಿಂದ ಕಾಂಗ್ರೆಸ್ ನಾಯಕರು ಪೇಸಿಎಂ ಪೋಸ್ಟರ್ ಅಭಿಯಾನಕ್ಕೆ ತೆರಳುವ ಸಾಧ್ಯತೆ ದಟ್ಟವಾಗಿದ್ದು ಕೆಪಿಸಿಸಿ ಕಚೇರಿ ಹೊರಭಾಗದಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಕೆ ಎಸ್ ಆರ‍್ ಪಿ ತುಕಡಿ ಸೇರಿದಂತೆ 100ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಸಿಎಂ ಗೃಹ ಕಚೇರಿ ಕೃಷ್ಣ, ಸರ್ಕಾರಿ ನಿವಾಸ ಸೇರಿದಂತೆ ಹಲವು ಪ್ರಮುಖ ಸ್ಥಳಗಳಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಕಾಂಗ್ರೆಸ್ ಅಭಿಯಾನ ತಡೆಯುವ ನಿಟ್ಟಿನಲ್ಲಿ ಸರ್ಕಾರ ಸಿದ್ಧತೆ ನಡೆಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments