Tuesday, September 27, 2022
Google search engine
HomeUncategorizedBIG NEWS: BJP ಜನಸ್ಪಂದನಾ ಸಮಾವೇಶಕ್ಕೆ ಪೊಲೀಸ್ ಭದ್ರತೆ; ನಾಲ್ಕು ಜಿಲ್ಲೆಗಳ ಆರಕ್ಷಕರ ನಿಯೋಜನೆ

BIG NEWS: BJP ಜನಸ್ಪಂದನಾ ಸಮಾವೇಶಕ್ಕೆ ಪೊಲೀಸ್ ಭದ್ರತೆ; ನಾಲ್ಕು ಜಿಲ್ಲೆಗಳ ಆರಕ್ಷಕರ ನಿಯೋಜನೆ

BIG NEWS: BJP ಜನಸ್ಪಂದನಾ ಸಮಾವೇಶಕ್ಕೆ ಪೊಲೀಸ್ ಭದ್ರತೆ; ನಾಲ್ಕು ಜಿಲ್ಲೆಗಳ ಆರಕ್ಷಕರ ನಿಯೋಜನೆ

ಬೆಂಗಳೂರು: ಇಂದು ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಬೃಹತ್ ಜನಸ್ಪಂದನಾ ಸಮಾವೇಶ ನಡೆಯಲಿದ್ದು, ಸರ್ಕಾರದ ಮೂರು ವರ್ಷದ ಸಾಧನೆಯೊಂದಿಗೆ ಮುಂಬರುವ ವಿಧಾನಸಭಾ ಚುನಾವಣೆಗೆ ಶಕ್ತಿ ಪ್ರದರ್ಶಕ್ಕೆ ವೇದಿಕೆ ಸಜ್ಜಾಗಿದೆ.

ಸುಮಾರು 40 ಎಕರೆ ಜಾಗದಲ್ಲಿ ಜನಸ್ಪಂದನಾ ಕಾರ್ಯಕ್ರಮಕ್ಕೆ ವ್ಯವಸ್ಥೆ ಮಾಡಲಾಗಿದ್ದು, 3 ಲಕ್ಷ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಜನಸ್ಪಂದನಾ ಸಮಾವೇಶಕ್ಕೆ ತೆರಳಲು ಬಿಜೆಪಿ ವಿಶೇಷ ಬಸ್ ವ್ಯವಸ್ಥೆಯನ್ನು ಮಾಡಿದೆ.

ದೊಡ್ಡಬಳ್ಳಾಪುರದಲ್ಲಿ ಆಯೋಜಿಸಿರುವ ಬಿಜೆಪಿ ಜನಸ್ಪಂದನಾ ಸಮಾವೇಶಕ್ಕೆ ಬೆಂಗಳೂರು ಗ್ರಾಮಾಂತರ ಎಸ್ ಪಿ ಬಾಲದಂಡಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ನಾಲ್ಕು ಜಿಲ್ಲೆಗಳ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.

ಇಬ್ಬರು ಎ ಎಸ್ ಪಿ, 11 ಡಿವೈಎಸ್ ಪಿ, 35 ಇನ್ಸ್ ಪೆಕ್ಟರ್ ಗಳು, 100 ಪಿಎಸ್ ಐ, 150 ಎ ಎಸ್ ಐ, 1200 ಕಾನ್ಸ್ ಟೇಬಲ್ ಗಳು ಹೆಚ್ಚುವರಿಯಾಗಿ 400 ಗೃಹ ರಕ್ಷಕ ದಳ ಸಿಬ್ಬಂದಿ, 4 ಕೆ ಎಸ್ ಆರ್ ಪಿ ತುಕಡಿ, 6 ಡಿ ಆರ್ ತುಕಡಿಗಳಿಂದ ಭದ್ರತೆ ಕೈಗೊಳ್ಳಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments