BIG NEWS: ಹೊರಬರಲಿದೆಯಾ ಮಾಜಿ ಸಿಎಂ ಯಡಿಯೂರಪ್ಪ ಬರೆದ ಡೈರಿ….? ಕುತೂಹಲ ಮೂಡಿಸಿದ ಪುತ್ರಿಯ ಹೇಳಿಕೆ
ಶಿವಮೊಗ್ಗ: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರಿಗೆ 80ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಈ ಸಂದರ್ಭದಲ್ಲಿ ಮಾತನಾಡಿರುವ ಯಡಿಯೂರಪ್ಪ ಪುತ್ರಿ ಅರುಣಾದೇವಿ, ಯಡಿಯೂರಪ್ಪ ಡೈರಿ ಬಗ್ಗೆ ಮಾತನಾಡಿದ್ದಾರೆ.
ಜೀವನ ಹಿಂತಿರುಗಿ ನೋಡಿದಾಗ ನನಗೆ ತೃಪ್ತಿ ತಂದಿದೆ ಎಂದಿದ್ದಾರೆ. 25 ವರ್ಷದ ಯುವಕನ ಶಿಸ್ತು ಇನ್ನೂ ಅವರಲ್ಲಿದೆ. ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡುವುದಾಗಿ ತಿಳಿಸಿದ್ದಾರೆ. ನಮ್ಮ ತಂದೆ ಜೈಲಿಗೆ ಹೋಗಿದ್ದು ಕರಾಳ ದಿನಗಳು ಎಂದು ಹೇಳಿದ್ದಾರೆ.
ಖುರ್ಚಿ ಅಲ್ಲಾಡಿಸಲು ಏನೆಲ್ಲ ಆರೋಪ ಮಾಡಿದರು. ಆ ಸಂದರ್ಭದಲ್ಲಿ ರಾಜಕೀಯವೇ ಅಸಹ್ಯ ಅನಿಸಿತು. ಜೈಲಿನಲ್ಲಿದ್ದಾಗ ನಮ್ಮ ತಂದೆ ಡೈರಿ ಬರೆದಿದ್ದರು. ಪ್ರತಿಯೊಂದು ಘಟನೆಗಳನ್ನು ಅದರಲ್ಲಿ ಬರೆದಿದ್ದಾರೆ. ಸಂದರ್ಭ ಬಂದಾಗ ಅದು ಹೊರಬರುತ್ತೆ ಎಂದಿದ್ದಾರೆ.
ಹೊನ್ನಳ್ಳಿಯಲ್ಲಿ 1 ಎಕರೆ ಜಾಗ ತೆಗೆದುಕೊಂಡು ಗದ್ದೆ ಮಾಡಿದ್ದರು. ನೋವನ್ನು ಮರೆಯಲು ಕೃಷಿಯತ್ತ ಗಮನ ಕೊಟ್ಟರು. ಹೊಲದಲ್ಲಿ ನೇಗಿಲು ಹಿಡಿದು ಕೆಲಸ ಮಾಡಿದ್ದಾರೆ. ಪ್ರತಿ ಶಿವರಾತ್ರಿ ದಿನ ನನ್ನ ತಾಯಿ ಮೈತ್ರಾದೇವಿ ನೆನೆದು ಕಣ್ಣೀರಿಡುತ್ತಾರೆ ಎಂದು ಭಾವುಕರಾಗಿದ್ದಾರೆ.