BIG NEWS: ಹಾಸನ JDS ಅಭ್ಯರ್ಥಿ ಗೊಂದಲಕ್ಕೆ ವಾರದಲ್ಲೇ ಅಂತಿಮ ತೆರೆ; ಮಾಜಿ ಸಿಎಂ HDK ಮಾಹಿತಿ
ಶಿವಮೊಗ್ಗ: ಹಾಸನ ಜೆಡಿಎಸ್ ಟಿಕೆಟ್ ಗೊಂದಲಕ್ಕೆ ಶೀಘ್ರದಲ್ಲಿಯೇ ತೆರೆ ಎಳೆಯಲಾಗುವುದು ಎಂದು ಮಾಜಿ ಸಿಎ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಡಿ. ಕುಮಾರಸ್ವಾಮಿ, 2ನೇ ಕಂತಿನ ಜೆಡಿಎಸ್ ಪಟ್ಟಿಯಲ್ಲಿ ಹಾಸನ ಅಭ್ಯರ್ಥಿಯ ಆಯ್ಕೆಯೂ ಇರಲಿದೆ. ಇನ್ನೊಂದು ವಾರದಲ್ಲಿ ಹಾಸನ ಅಭ್ಯರ್ಥಿ ಆಯ್ಕೆ ಗೊಂದಲಕ್ಕೆ ತೆರೆ ಎಳೆಯುತ್ತೇವೆ ಎಂದು ಹೇಳಿದರು.
ಕ್ಷೇತ್ರದಲ್ಲಿ ಭಾವಾನಿ, ಹೆಚ್.ಡಿ.ರೇವಣ್ಣ ಪಕ್ಷ ಸಂಘಟನೆಗಾಗಿ ಓಡಾಡುತ್ತಿದ್ದಾರೆ. ಪಕ್ಷದಿಂದ ಯಾರನ್ನು ಅಭ್ಯರ್ಥಿಯನ್ನಾಗಿ ಘೋಷಿಸುತ್ತೇವೆ ಅವರಿಗೆ ಮತ ನೀಡಿ ಎಂದು ಪ್ರಚಾರ ನಡೆಸಿದ್ದಾರೆ ಎಂದು ಹೇಳಿದರು.