Wednesday, February 8, 2023
Google search engine
HomeUncategorizedBIG NEWS: ಸ್ಯಾಂಟ್ರೋ ರವಿ ಆಸ್ತಿ ಜಪ್ತಿಗೆ ಕ್ರಮ; ಸಿಎಂ ಬೊಮ್ಮಾಯಿ ಮಾಹಿತಿ

BIG NEWS: ಸ್ಯಾಂಟ್ರೋ ರವಿ ಆಸ್ತಿ ಜಪ್ತಿಗೆ ಕ್ರಮ; ಸಿಎಂ ಬೊಮ್ಮಾಯಿ ಮಾಹಿತಿ

BIG NEWS: ಸ್ಯಾಂಟ್ರೋ ರವಿ ಆಸ್ತಿ ಜಪ್ತಿಗೆ ಕ್ರಮ; ಸಿಎಂ ಬೊಮ್ಮಾಯಿ ಮಾಹಿತಿ

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ತೀವ್ರ ಸುದ್ದಿಗೆ ಗ್ರಾಸವಾಗಿರುವ ಸ್ಯಾಂಟ್ರೋ ರವಿ ವಿರುದ್ಧ ದಾಖಲಾಗಿರುವ ಪ್ರಕರಣಗಳ ತನಿಖೆ ನಡೆಯುತ್ತಿದೆ. ಈ ನಡುವೆ ಆತನ ಆಸ್ತಿ ಜಪ್ತಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಸ್ಯಾಂಟ್ರೋ ರವಿ ಬಗ್ಗೆ ಎಲ್ಲಾ ರೀತಿಯ ತನಿಖೆಗೂ ಆದೇಶಿಸಲಾಗಿದೆ. ಈ ಹಿಂದೆ ಸ್ಯಾಂಟ್ರೋ ರವಿ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿತ್ತು. ಆದರೆ ಇದೆಲ್ಲವೂ ಕಾಂಗ್ರೆಸ್ ಅವಧಿಯಲ್ಲಿ ನಡೆದಿದ್ದು. ಆತ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿಯೇ ಬಿಡುಗಡೆಯಾಗಿದ್ದ. ಆತನಿಗೆ 20 ವರ್ಷಗಳ ಇತಿಹಾಸವಿದೆ. ಈ ಸಂದರ್ಭಗಳಲ್ಲಿ ಯಾರ ಯಾರ ಸರ್ಕಾರ ಇತ್ತು, ಯಾವ ಯಾವ ಮಂತ್ರಿಗಳಿದ್ದರು, ಆತನಿಗೆ ಯಾರ ಜೊತೆ ಸಂಬಂಧವಿತ್ತು ಎಲ್ಲವೂ ತನಿಖೆಯಾಗಲಿದೆ ಎಂದರು.

ಸಂಪೂರ್ಣ ತನಿಖೆ ಬಳಿಕ ಸತ್ಯ ಹೊರಬರಲಿದೆ. ಈಗಾಗಲೇ ಆತನಿಗೆ ಸೇರಿದ ಆಸ್ತಿ ಜಪ್ತಿಗೂ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments