Thursday, August 11, 2022
Google search engine
HomeUncategorizedBIG NEWS: ಸೈಲೆಂಟ್ ಆಗಿ 2ನೇ ಮದುವೆಯಾಗಿದ್ದಾರಾ ವಿಜಯಾನಂದ ಕಾಶಪ್ಪನವರ್?

BIG NEWS: ಸೈಲೆಂಟ್ ಆಗಿ 2ನೇ ಮದುವೆಯಾಗಿದ್ದಾರಾ ವಿಜಯಾನಂದ ಕಾಶಪ್ಪನವರ್?

BIG NEWS: ಸೈಲೆಂಟ್ ಆಗಿ 2ನೇ ಮದುವೆಯಾಗಿದ್ದಾರಾ ವಿಜಯಾನಂದ ಕಾಶಪ್ಪನವರ್?

ಬೆಂಗಳೂರು: ಕಾಂಗ್ರೆಸ್ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಸೈಲೆಂಟ್ ಆಗಿ ಎರಡನೇ ವಿವಾಹವಾಗಿದ್ದಾರಾ ಎಂಬ ಅನುಮಾನ ಎಲ್ಲರಲ್ಲಿ ಮೂಡಿದೆ. ಪೂಜಶ್ರೀ ಎಂಬ ನಟಿ ಕಂ ಮಾಡೆಲ್ ಜತೆ ವಿಜಯಾನಂದ ಕಾಶಪ್ಪನವರ್ ವಿವಾಹವಾಗಿದ್ದಾರೆ ಎಂಬ ಮಾತು ಕೇಳಿಬಂದಿದ್ದು, ನಟಿಯ ಜತೆಗಿನ ಕೆಲವು ಫೋಟೋಗಳು, ಮಗುವೊಂದರ ಜನನ ಪ್ರಮಾಣ ಪತ್ರದಲ್ಲಿ ವಿಜಯಾನಂದ ಕಾಶಪ್ಪನವರ ಹೆಸರು ಇರುವುದು ಈ ಪ್ರಕರಣಕ್ಕೆ ಪುಷ್ಠಿ ನೀಡುವಂತಿದೆ.

ತಂದೆಯ ಕಾಲಂ ಎದುರಲ್ಲಿ ವಿಜಯಾನಂದ ಕಾಶಪ್ಪನವರ್ ಎಂಬ ಉಲ್ಲೇಖವಿರುವ ಜನನ ಪ್ರಮಾಣಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವೈರಲ್ ಆಗಿರುವ ಪ್ರಮಾಣ ಪತ್ರದಲ್ಲಿ ತಾಯಿ ಹೆಸರು ಪೂಜಾಶ್ರೀ ಎಂದು ಇದೆ. ನಟಿ ಪೂಜಾಶ್ರೀ ಜತೆ ವಿಜಯಾನಂದ ಕಾಶಪ್ಪನವರ್ ಎರಡನೇ ವಿವಾಹವಾಗಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ.

ಜನನ ಪ್ರಮಾಣಪತ್ರದಲ್ಲಿ ಮಗು 1-9-2021ರಲ್ಲಿ ಹುಟ್ಟಿದ್ದು, ಮಗುವಿನ ಹೆಸರು ದೇವಕಿ ವಿ.ಕೆ ಎಂದಿದೆ. ಜನನ ಸ್ಥಳ ಮದರ್ ಹುಡ್ ಆಸ್ಪತ್ರೆ ಬೆಂಗಳೂರು ಎಂದು ಉಲ್ಲೇಖಿಸಲಾಗಿದೆ.

ನಟಿಯೊಂದಿಗಿನ ಸಂಬಂಧ ವಿಚಾರವಾಗಿಯೇ ಕಳೆದ ವರ್ಷ ವಿಜಯಾನಂದ ಕಾಶಪ್ಪನವರ್ ಅವರ ಪತ್ನಿ ವೀಣಾ ಕಾಶಪ್ಪನವರ್ ಮಧ್ಯೆ ಜಗಳವಾಗಿದ್ದು, ಇದೇ ಕಾರಣಕ್ಕಾಗಿ ವೀಣಾ ಕಾಶಪ್ಪನವರ್ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ ಎನ್ನಲಾಗಿದೆ. ಬಾಗಲಕೋಟೆ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆಯಾಗಿರುವ ವೀಣಾ ಕಾಶಪ್ಪನವರ್ ಆಗಲಿ, ವಿಜಯಾನಂದ ಕಾಶಪ್ಪನವರ್ ಆಗಲಿ ಈ ಬಗ್ಗೆ ಪ್ರತಿಕ್ರಿಯೆಗೆ ನಿರಾಕರಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments