Saturday, November 26, 2022
Google search engine
HomeUncategorizedBIG NEWS: ಸಿದ್ದರಾಮಯ್ಯ, ಡಿಕೆಶಿಯಾಯ್ತು ಈಗ ಖರ್ಗೆ ಬೆಂಬಲಿಗರ ಗುಂಪೂ ಹುಟ್ಟಿಕೊಂಡಿದೆ; ಕಾಂಗ್ರೆಸ್ ಸ್ಥಿತಿ ಮನೆಯೊಂದು...

BIG NEWS: ಸಿದ್ದರಾಮಯ್ಯ, ಡಿಕೆಶಿಯಾಯ್ತು ಈಗ ಖರ್ಗೆ ಬೆಂಬಲಿಗರ ಗುಂಪೂ ಹುಟ್ಟಿಕೊಂಡಿದೆ; ಕಾಂಗ್ರೆಸ್ ಸ್ಥಿತಿ ಮನೆಯೊಂದು 3 ಬಾಗಿಲು ಎಂದು ಪ್ರಹ್ಲಾದ್ ಜೋಶಿ ವ್ಯಂಗ್ಯ

BIG NEWS: ಸಿದ್ದರಾಮಯ್ಯ, ಡಿಕೆಶಿಯಾಯ್ತು ಈಗ ಖರ್ಗೆ ಬೆಂಬಲಿಗರ ಗುಂಪೂ ಹುಟ್ಟಿಕೊಂಡಿದೆ; ಕಾಂಗ್ರೆಸ್ ಸ್ಥಿತಿ ಮನೆಯೊಂದು 3 ಬಾಗಿಲು ಎಂದು ಪ್ರಹ್ಲಾದ್ ಜೋಶಿ ವ್ಯಂಗ್ಯ

ಹುಬ್ಬಳ್ಳಿ: ಕಾಂಗ್ರೆಸ್ ನಲ್ಲಿ ಗುಂಪುಗಾರಿಕೆ ಹೆಚ್ಚುತ್ತಿದೆ. ಬೇರೆ ರಾಜ್ಯಗಳಲ್ಲಿ ಕಾಂಗ್ರೆಸ್ ಅಡ್ರೆಸ್ಸಿಗೆ ಇಲ್ಲವಾಗಿದೆ. ಈಗ ಕರ್ನಾಟಕದಲ್ಲಿಯೂ ನಾಪತ್ತೆಯಾಗಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಸಚಿವರು, ಕಾಂಗ್ರೆಸ್ ಒಡೆದ ಮನೆಯಾಗಿದೆ. ಈ ಹಿಂದೆ ಕಾಂಗ್ರೆಸ್ ನಲ್ಲಿ ಎರಡು ಗುಂಪುಗಳಿದ್ದವು. ಈಗ ಮೂರು ಗುಂಪುಗಳಾಗಿ ಮನೆಯೊಂದು ಮೂರು ಬಾಗಿಲು ಎಂಬ ಸ್ಥಿತಿಯಾಗಿದೆ ಎಂದರು.

ಇಷ್ಟುದಿನ ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಅವರ ಬೆಂಬಲಿಗರ ಒಂದು ಗುಂಪು, ಡಿ.ಕೆ.ಶಿ. ಬೆಂಬಲಿಗರ ಒಂದು ಗುಂಪು ಎಂದು ಎರಡು ಗುಂಪುಗಳಿದ್ದವು. ಈಗ ಖರ್ಗೆ ಅವರ ಬೆಂಬಲಿಗರ ಗುಂಪೊಂದು ಹುಟ್ಟಿಕೊಂಡಿದೆ. ಹಾಗಾಗಿ ಕಾಂಗ್ರೆಸ್ ನಲ್ಲಿ ಮನೆಯೊಂದು ಮೂರು ಬಾಗಿಲಾಗಿದೆ ಎಂದು ವ್ಯಂಗ್ಯವಾಡಿದರು.

ಎಲ್ಲಾ ರಾಜ್ಯಗಳಲ್ಲಿಯೂ ಕಾಂಗ್ರೆಸ್ ಗೆ ಅಡ್ರೆಸ್ಸಿಲ್ಲದಾಗಿದೆ. ಇನ್ನು ಕೆಲದಿನಗಳಲ್ಲೇ ದೇಶದಿಂದಲೇ ಕಾಂಗ್ರೆಸ್ ನಾಪತ್ತೆಯಾಗಲಿದೆ ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments