BIG NEWS: ಸಿದ್ದರಾಮಯ್ಯನವರೇ, ನಾವು ನುಡಿದಂತೆ ನಡೆದಿದ್ದೇವೆ; ನೀವು “ಉಗ್ರಭಾಗ್ಯ” ಯೋಜನೆಯಡಿ ಸಾಕಿದ ರಣಹದ್ದುಗಳನ್ನು ಬೇಟೆಯಾಡಿದ್ದೇವೆ; ವಿಪಕ್ಷನಾಯಕನಿಗೆ ಕುಟುಕಿದ BJP
ಬೆಂಗಳೂರು: ದೇಶದ ಆಂತರಿಕ ಭದ್ರತೆಗೆ ಸವಾಲೆಸೆದಿದ್ದ ಪಿಎಫ್ಐ ಮತ್ತು ಅದರ ಸಹವರ್ತಿ ಸಂಘಟನೆಗಳನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮುಂದಿನ 5 ವರ್ಷಗಳ ಅವಧಿಗೆ ನಿಷೇಧ ಮಾಡಿದೆ. ಮತಾಂಧ ಶಕ್ತಿಗಳ ವಿರುದ್ಧ ಬಿಜೆಪಿಯ ಸಮರ ಮುಂದುವರೆಯಲಿದೆ. ನಾವು ನುಡಿದಂತೆ ನಡೆದಿದ್ದೇವೆ ಎಂದು ಕಾಂಗ್ರೆಸ್ ನಾಯಕರಿಗೆ ರಾಜ್ಯ ಬಿಜೆಪಿ ಟಾಂಗ್ ನೀಡಿದೆ.
ಸಿದ್ದರಾಮಯ್ಯನವರೇ ನಾವು ನುಡಿದಂತೆ ನಡೆದಿದ್ದೇವೆ. ನೀವು “ಉಗ್ರಭಾಗ್ಯ” ಯೋಜನೆಯಡಿ ಸಾಕಿದ ರಣಹದ್ದುಗಳನ್ನು ಬೇಟೆಯಾಡಿದ್ದೇವೆ. ಪಿಎಫ್ಐ ಸೇರಿದಂತೆ ಅದರ ಸಹವರ್ತಿ ಸಂಘಟನೆಗಳು ಮಾಡುತ್ತಿದ್ದ ಎಲ್ಲಾ ದೇಶ ವಿರೋಧಿ ಚಟುವಟಿಕೆಗಳಿಗೆ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷ ಬೆಂಗಾವಲಾಗಿ ನಿಂತಿತ್ತು ಎಂದು ಕಿಡಿಕಾರಿದೆ.
ನಿಷೇಧದ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಏಕೆ ಇನ್ನೂ ಬಾಯಿ ತೆರೆದಿಲ್ಲ? ಮತಬ್ಯಾಂಕ್ ಕಳೆದುಕೊಳ್ಳುವ ಭಯವೇ? ಎಂದು ಪ್ರಶ್ನಿಸಿದೆ.