Thursday, December 8, 2022
Google search engine
HomeUncategorizedBIG NEWS: ಸಿಎಂ ಬೊಮ್ಮಾಯಿ ಪಿಎಗೆ ಹನಿಟ್ರ್ಯಾಪ್; ಬ್ಲಾಕ್ ಮೇಲ್ ಮಾಡಿ ಸರ್ಕಾರದ ಮಹತ್ವದ ದಾಖಲೆಗಳನ್ನು...

BIG NEWS: ಸಿಎಂ ಬೊಮ್ಮಾಯಿ ಪಿಎಗೆ ಹನಿಟ್ರ್ಯಾಪ್; ಬ್ಲಾಕ್ ಮೇಲ್ ಮಾಡಿ ಸರ್ಕಾರದ ಮಹತ್ವದ ದಾಖಲೆಗಳನ್ನು ಪಡೆದ ಯುವತಿ

BIG NEWS: ಸಿಎಂ ಬೊಮ್ಮಾಯಿ ಪಿಎಗೆ ಹನಿಟ್ರ್ಯಾಪ್; ಬ್ಲಾಕ್ ಮೇಲ್ ಮಾಡಿ ಸರ್ಕಾರದ ಮಹತ್ವದ ದಾಖಲೆಗಳನ್ನು ಪಡೆದ ಯುವತಿ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಪಿಎ ಹರೀಶ್ ಎಂಬುವವರನ್ನು ಮಹಿಳೆ ಹನಿಟ್ರ್ಯಾಪ್ ಖೆಡ್ಡಾಗೆ ಕೆಡವಿ ಸರ್ಕಾರದ ಮಹತ್ವದ ದಾಖಲೆಗಳನ್ನು ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿದೆ.

ಪರಿಷತ್ ಡಿ ದರ್ಜೆ ನೌಕರಳಾಗಿರುವ ಯುವತಿ ಸಿಎಂ ಬೊಮ್ಮಾಯಿ ಅವರ ಪಿಎ ಆಗಿರುವ ಹರೀಶ್ ಅವರಿಗೆ ಹನಿಟ್ರ್ಯಾಪ್ ಮಾಡಿದ್ದು, ಬಳಿಕ ಬ್ಲ್ಯಾಕ್ ಮೇಲ್ ಮೂಲಕ ಹಲವು ಮಹತ್ವದ ದಾಖಲೆಗಳನ್ನು ಪಡೆದಿದ್ದಾಳೆ. ಅಲ್ಲದೇ ಹಣ ವಸೂಲಿಯನ್ನೂ ಮಾಡಿದ್ದಾರೆ. ಹೀಗೆ ಪಡೆದ ದಾಖಲೆಗಳನ್ನು ವಿಪಕ್ಷಗಳಿಗೆ ನೀಡಿರುವ ಅನುಮಾನವಿದೆ ಎಂದು ಜನ್ಮಭೂಮಿ ಫೌಂಡೇಶನ್ ಅಧ್ಯಕ್ಷ ನಟರಾಜ್ ಶರ್ಮಾ ವಿಧಾನಸೌಧ ಠಾಣೆಯಲ್ಲಿ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.

ಆರಂಭದಲ್ಲಿ ಯುವತಿ ಪಿಎ ಹರೀಶ್ ಜೊತೆ ಸಲುಗೆ ಬೆಳೆಸಿ ಟ್ರ್ಯಾಪ್ ಮಾಡಿದ್ದಾಳೆ. ಬಳಿಕ ಹನಿಟ್ರ್ಯಾಪ್ ಮಾಡಿ ಬ್ಲ್ಯಾಕ್ ಮೇಲ್ ಮೂಲಕ ದಾಖಲೆಗಳನ್ನು ಪಡೆದುಕೊಂಡಿದ್ದಾಳೆ. ಹನಿಟ್ರ್ಯಾಪ್ ಗೆ ಒಳಗಾಗಿದ್ದ ಹರೀಶ್ ಅವರನ್ನು ಈಗಾಗಲೇ ಸೇವೆಯಿಂದ ತೆಗೆದು ಹಾಕಲಾಗಿದೆ ಎನ್ನಲಾಗಿದೆ. ಈ ಪ್ರಕರಣದ ಬಗ್ಗೆ ಸಂಪೂರ್ಣ ತನಿಖೆ ನಡೆಸುವಂತೆ ದೂರು ದಾಖಲಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments