Wednesday, August 10, 2022
Google search engine
HomeUncategorizedBIG NEWS: ಸಿಎಂ ಅಗುವ ಆಸೆ ನನಗೂ ಇದೆ; ನಾನೇನು ಸನ್ಯಾಸಿನಾ ? ಟಾಂಗ್ ನೀಡಿದ...

BIG NEWS: ಸಿಎಂ ಅಗುವ ಆಸೆ ನನಗೂ ಇದೆ; ನಾನೇನು ಸನ್ಯಾಸಿನಾ ? ಟಾಂಗ್ ನೀಡಿದ ಡಿ.ಕೆ. ಶಿವಕುಮಾರ್

BIG NEWS: ಸಿಎಂ ಅಗುವ ಆಸೆ ನನಗೂ ಇದೆ; ನಾನೇನು ಸನ್ಯಾಸಿನಾ ? ಟಾಂಗ್ ನೀಡಿದ ಡಿ.ಕೆ. ಶಿವಕುಮಾರ್

ಬೆಂಗಳೂರು: ಸಿದ್ದರಾಮೋತ್ಸವ ಪಕ್ಷದ ಕಾರ್ಯಕ್ರಮವಲ್ಲ, ವ್ಯಕ್ತಿ ಪೂಜೆಗಿಂತ ಪಕ್ಷ ಪೂಜೆ ಮುಖ್ಯ ಎಂದು ಹೇಳಿಕೆ ನೀಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸಿಎಂ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ ಎಂಬ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿಕೆಗೆ ಡಿಕೆಶಿ ನೇರವಾಗಿ ತಿರುಗೇಟು ನೀಡಿದ್ದಾರೆ.

ಪಕ್ಷ ಪೂಜೆ ಎಂದವರಿಂದ ಸಿಎಂ ಆಸೆ ವ್ಯಕ್ತ ಎಂಬ ಈಶ್ವರಪ್ಪ ಹೇಳಿಕೆಗೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, ಸಿಎಂ ಆಗುವ ಆಸೆ ನನಗೂ ಇದೆ. ನಾನೇನು ಸನ್ಯಾಸಿನಾ? ಜನರ ಬಳಿ, ಬೇಕಾದವರ ಬಳಿ ಏನೋ ಹೇಳಿಕೊಳ್ಳುತ್ತೇನೆ ಅದರ ಬಗ್ಗೆ ಇವರಿಗ್ಯಾಕೆ ಚಿಂತೆ ಎಂದು ಪ್ರಶ್ನಿಸಿದ್ದಾರೆ.

ನಮ್ಮ ಸರ್ಕಾರ, ನಮ್ಮ ಪಕ್ಷ ಅಧಿಕಾರಕ್ಕೆ ಬರಬೇಕು. ಹಾಗಾಗಿ ಪಕ್ಷ ಅಧಿಕಾರಕ್ಕೆ ಬರಲು ಮತ ಹಾಕುವವರ ಬಳಿ ಹೇಳ್ತೀವಿ. ನಾನು ಏನು ಮಾತಾಡ್ತೀನಿ ಅನ್ನೋದು ಇವರಿಗ್ಯಾಕೆ ಬೇಕು? ಅವರು ಬೇಕಿದ್ರೆ ಔಷಧಿ ಹಾಕಿಕೊಳ್ಳಲಿ ಎಂದು ಕಿಡಿ ಕಾರಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments