Thursday, August 11, 2022
Google search engine
HomeUncategorizedBIG NEWS: ಶಿಕಾರಿಪುರದಿಂದಲೇ ನಾನು ಸ್ಪರ್ಧಿಸಬೇಕೆಂದಿಲ್ಲ; ಸೂಕ್ತ ಸಮಯದಲ್ಲಿ ಹೈಕಮಾಂಡ್ ನಿಂದಲೇ ತೀರ್ಮಾನ ಎಂದ ಬಿ.ವೈ.‌...

BIG NEWS: ಶಿಕಾರಿಪುರದಿಂದಲೇ ನಾನು ಸ್ಪರ್ಧಿಸಬೇಕೆಂದಿಲ್ಲ; ಸೂಕ್ತ ಸಮಯದಲ್ಲಿ ಹೈಕಮಾಂಡ್ ನಿಂದಲೇ ತೀರ್ಮಾನ ಎಂದ ಬಿ.ವೈ.‌ ವಿಜಯೇಂದ್ರ

BIG NEWS: ಶಿಕಾರಿಪುರದಿಂದಲೇ ನಾನು ಸ್ಪರ್ಧಿಸಬೇಕೆಂದಿಲ್ಲ; ಸೂಕ್ತ ಸಮಯದಲ್ಲಿ ಹೈಕಮಾಂಡ್ ನಿಂದಲೇ ತೀರ್ಮಾನ ಎಂದ ಬಿ.ವೈ.‌ ವಿಜಯೇಂದ್ರ

ಕೊಪ್ಪಳ: ಶಿಕಾರಿಪುರ ಕ್ಷೇತ್ರದಿಂದ ವಿಜಯೇಂದ್ರ ಸ್ಪರ್ಧೆ ಎಂಬ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿಕೆಗೆ ಸ್ಪಷ್ಟನೆ ನೀಡಿರುವ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪಕ್ಷ ಸೂಕ್ತ ಸಮಯದಲ್ಲಿ, ಸೂಕ್ತರಾದ ವ್ಯಕ್ತಿಯನ್ನು ಆಯ್ಕೆ ಮಾಡುತ್ತೆ ಎಂದು ಹೇಳಿದ್ದಾರೆ.

ಕೊಪ್ಪಳದಲ್ಲಿ ಮಾತನಾಡಿದ ವಿಜಯೇಂದ್ರ, ಶಿಕಾರಿಪುರ ಕ್ಷೇತ್ರದಿಂದ ಸ್ಪರ್ಧೆ ಬಗ್ಗೆ ಗೊಂದಲವಿಲ್ಲ. ಯಡಿಯೂರಪ್ಪನವರಿಗೆ ಶಿಕಾರಿಪುರದೊಂದಿಗೆ ಅವಿನಾಭಾವ ಸಂಬಂಧವಿದೆ. ಹಾಗಾಗಿ ಅವರು ಘೋಷಣೆ ಮಾಡಿದ್ದಾರೆ. ಶಿಕಾರಿಪುರದಿಂದಲೇ ನಾನು ಸ್ಪರ್ಧಿಸಬೇಕೆಂದೇನೂ ಇಲ್ಲ. ಇಡೀ ಕರ್ನಾಟಕವೇ ನನ್ನ ಕ್ಷೇತ್ರ ಎಂದರು.

ನಮ್ಮದು ಭಾರತೀಯ ಜನತಾಪಾರ್ಟಿ, ಇಲ್ಲಿ ಉತ್ತರಾಧಿಕಾರಿ ಪ್ರಶ್ನೆ ಬರಲ್ಲ. ಯಡಿಯೂರಪ್ಪನವರು 30-40 ವರ್ಷಗಳ ಕಾಲ ಜೀವನ ಧಾರೆ ಎರೆದಿದ್ದಾರೆ. ಬಿಜೆಪಿ ಅವರಿಗೆ ಗೌರವ ಕೊಟ್ಟಿದೆ. ಮುಂಬರುವ ದಿನಗಳಲ್ಲಿ ಯಡಿಯೂರಪ್ಪ ಅವರ ಶಕ್ತಿ ಉಪಯೋಗಿಸಿಕೊಂಡು ರಾಜ್ಯದಲ್ಲಿ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ. ಶಿಕಾರಿಪುರ ಮಾತ್ರವಲ್ಲ 224 ಕ್ಷೇತ್ರದ ಬಗ್ಗೆ ತೀರ್ಮಾನ ಮಾಡುತ್ತಾರೆ. ನನಗೆ ರಾಜ್ಯದ ಎಲ್ಲಾ ಕ್ಷೇತ್ರಗಳ ಮೇಲೂ ಒಲವಿದೆ. ಸೂಕ್ತ ಸಮಯದಲ್ಲಿ ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದೆ ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments