Thursday, August 11, 2022
Google search engine
HomeUncategorizedBIG NEWS: ವರುಣಾರ್ಭಟಕ್ಕೆ ಕೊಡಗು ತತ್ತರ; ಕುಸಿಯುವ ಹಂತ ತಲುಪಿದ ಜಿಲ್ಲಾಧಿಕಾರಿ ಕಚೇರಿ

BIG NEWS: ವರುಣಾರ್ಭಟಕ್ಕೆ ಕೊಡಗು ತತ್ತರ; ಕುಸಿಯುವ ಹಂತ ತಲುಪಿದ ಜಿಲ್ಲಾಧಿಕಾರಿ ಕಚೇರಿ

BIG NEWS: ವರುಣಾರ್ಭಟಕ್ಕೆ ಕೊಡಗು ತತ್ತರ; ಕುಸಿಯುವ ಹಂತ ತಲುಪಿದ ಜಿಲ್ಲಾಧಿಕಾರಿ ಕಚೇರಿ

ಮಡಿಕೇರಿ: ಭಾರಿ ಮಳೆ, ಭೂಕುಸಿತದಿಂದಾಗಿ ತಲ್ಲಣಗೊಂಡಿರುವ ಕೊಡಗು ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಕುಸಿಯುವ ಹಂತ ತಲುಪಿದೆ.

ಸತತ ಮಳೆಯಿಂದಾಗಿ ಮಡಿಕೇರಿಯಲ್ಲಿ ಜಿಲ್ಲಾಧಿಕಾರಿ ಕಚೇರಿ ಒಳಗೆ ನೀರು ನುಗ್ಗಿದ್ದು, ತಡೆಗೋಡೆ ಬೀಳುವ ಹಂತ ತಲುಪಿದೆ. ಮಡಿಕೇರಿ-ಮಂಗಳೂರು ರಸ್ತೆಯಲ್ಲಿರುವ ಜಿಲ್ಲಾಧಿಕಾರಿ ಕಚೇರಿಯ ತಡೆಗೋಡೆ ಸ್ಲ್ಯಾಬ್ ಗಳು ಹೊರಚಾಚಿದ್ದು, ಆತಂಕ ಎದುರಾಗಿದೆ.

ಕಳೆದ ಒಂದು ವಾರಗಳಿಂದ ತಡೆಗೋಡೆಯ ಸ್ಲ್ಯಾಬ್ ಹೊರಚಾಚಿದ್ದು, ಆದರೂ ಅಪಾಯವಿಲ್ಲ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಒಳಗೆ ನೀರು ನುಗ್ಗಿದ್ದರಿಂದ ಸ್ಲ್ಯಾಬ್ ಗಳು ಹೊರಚಾಚಿವೆ. ಆದರೆ ತಡೆಗೋಡೆ ಬೀಳುವುದಿಲ್ಲ ಎಂದು ಭರವಸೆ ನೀಡಿದ್ದಾರೆ.

ಇನ್ನೊಂದೆಡೆ ಮಡಿಕೇರಿ- ಮಂಗಳೂರು ಮಾರ್ಗದಲ್ಲಿ ವಾಹನ ಸಂಚಾರ ಬಂದ್ ಮಾಡಲಾಗಿದ್ದು, ಮಂಗಳೂರಿಗೆ ಹೋಗಲು ಹಾಗೂ ಬರಲು ಮೇಕೇರಿ-ಅಪ್ಪಂಗಳ-ತಾಳತ್ತಮನೆ ಜಂಕ್ಷನ್ ಮಾರ್ಗದಲ್ಲಿ ಸಂಚರಿಸುವಂತೆ ಸೂಚಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments