Tuesday, September 27, 2022
Google search engine
HomeUncategorizedBIG NEWS: ರಾಜ್ಯದ ಜನರ ಆತಂಕಕ್ಕೆ ಕಾರಣವಾಗಿದೆ ಕೋಡಿ ಮಠದ ಸ್ವಾಮೀಜಿ ನುಡಿದ ಭವಿಷ್ಯ

BIG NEWS: ರಾಜ್ಯದ ಜನರ ಆತಂಕಕ್ಕೆ ಕಾರಣವಾಗಿದೆ ಕೋಡಿ ಮಠದ ಸ್ವಾಮೀಜಿ ನುಡಿದ ಭವಿಷ್ಯ

BIG NEWS: ರಾಜ್ಯದ ಜನರ ಆತಂಕಕ್ಕೆ ಕಾರಣವಾಗಿದೆ ಕೋಡಿ ಮಠದ ಸ್ವಾಮೀಜಿ ನುಡಿದ ಭವಿಷ್ಯ

ರಾಜ್ಯದಲ್ಲಿ ಮುಂಗಾರು ಚುರುಕಾದ ಬೆನ್ನಲ್ಲೇ ಭಾರೀ ಮಳೆಯಾಗುತ್ತಿದೆ. ಅದರಲ್ಲೂ ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಗೆ ನಗರದ ಒಂದಿಷ್ಟು ಪ್ರದೇಶಗಳಲ್ಲಿ ಪ್ರವಾಹದ ರೀತಿ ಮಳೆ ನೀರು ನಿಂತಿದೆ. ಈಗಾಗಲೇ ಈ ಮಳೆಯಿಂದ ಬೆಚ್ಚಿ ಬಿದ್ದಿರುವ ಜನತೆಗೆ ಇದೀಗ ಮತ್ತೊಂದು ಬೆಚ್ಚಿ ಬೀಳುವ ಭವಿಷ್ಯವನ್ನು ನುಡಿದಿದ್ದಾರೆ ಹಾಸನ ಜಿಲ್ಲೆ ಅರಸೀಕೆರೆಯ ಕೋಡಿ ಮಠದ ಶ್ರೀ ಶಿವಾನಂದ ಶ್ರೀಗಳು.

ಹೌದು, ಇಂದು ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆಯಲ್ಲಿ ಮಾತನಾಡಿರುವ ಅವರು, ಮಳೆ ಅನಾಹುತ ಇನ್ನು ಮುಂದುವರಿಯಲಿದೆ. ದೇಶದಾದ್ಯಂತ ಜಲಪ್ರಳಯ ಎದುರಾಗಲಿದೆ. ಸುನಾಮಿ ಸಹ ಬರುವ ಸಾಧ್ಯತೆ ಇದೆ. ಭೂಮಿಯಿಂದ ಹೊಸ ಹೊಸ ವಿಷ ಜಂತುಗಳು ಉದ್ಭವಿಸಲಿವೆ. ಜನರು ಮನೆಯಿಂದ ಹೊರಗೆ ಹೊರಡುವಾಗ ಬಡಿಗೆ ಹಿಡಿದು ಹೋಗುವ ಕಾಲ ಬರಲಿದೆ. ಇದಕ್ಕಿಂತಲೂ ಹೆಚ್ಚಿನ ಕಷ್ಟ ಕಾಲ ಎದುರಾಗಲಿದೆ ಎಂದಿದ್ದಾರೆ.

ಇನ್ನು ಇದಕ್ಕೆ ಪರಿಹಾರವನ್ನು ಹೇಳಿರುವ ಅವರು, ಇದಕ್ಕೆಲ್ಲಾ ಪರಿಹಾರ ದೇವರನ್ನು ಪೂಜಿಸುವುದು. ಇತ್ತೀಚಿಗೆ ಭಗವಂತನ ಪೂಜೆ ಆಡಂಬರವಾಗಿದೆ. ಯೋಗ್ಯ ಸಾಧುಗಳಿದ್ದಾರೆ, ಗದ್ದುಗೆಗಳಿವೆ ಎಲ್ಲರೂ ಸೇರಿ ಪ್ರಾರ್ಥಿಸಿದರೆ ಜಗತ್ತು ಉಳಿಯುತ್ತದೆ ಎಂದಿದ್ದಾರೆ. ಹಿಂದೆ ಕೊರೊನಾ ಬಗ್ಗೆಯೂ ಶ್ರೀಗಳು ನುಡಿದಿದ್ದ ಭವಿಷ್ಯ ನಿಜವಾಗಿತ್ತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments