BIG NEWS: ರಾಜಧಾನಿಯಲ್ಲಿ ಮತ್ತೆ ತಲೆಯೆತ್ತಿದ ನಕಲಿ ಛಾಪಾ ಕಾಗದ ಹಗರಣ; 11 ಆರೋಪಿಗಳು ಅರೆಸ್ಟ್
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ನಕಲಿ ಛಾಪಾ ಕಾಗದ ಹಗರಣ ನಡೆದಿದ್ದು, ಪ್ರಕರಣ ಸಂಬಂಧ 11 ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರಿಂದ ಒಡೆಯರ ಕಾಲದಿಂದ ಈವರೆಗೆ ಬಳಕೆ ಮಾಡಲಾಗುತ್ತಿದ್ದ ಛಾಪಾ ಕಾಗದಗಳು ಸೇರಿದಂತೆ 2,664 ನಕಲಿ ಛಾಪಾ ಕಾಗದ ಜಪ್ತಿ ಮಾಡಿದ್ದಾರೆ. ಛಾಪಾ ಕಾಗದದ ಮೂಲಕ ಆರೋಪಿಗಳು ಪ್ರಾಪರ್ಟಿಗಳ ಜಿಪಿಎ ಮಾಡುತ್ತಿದ್ದರು.
ನಕಲಿ ಛಾಪಾ ಕಾಗದ ಬಳಸಿ ಆರೋಪಿಗಳು ನಾಲ್ಕು ಕಡೆ ವಂಚಿಸಿದ್ದರು. 1990, 1995, 2002 ಹಾಗೂ 2009ರ ರಿಜಿಸ್ಟರ್ ದಾಖಲಾತಿ ಸೃಷ್ಟಿಸಿ ಕೋಟ್ಯಂತರ ರೂಪಾಯಿ ಆಸ್ತಿ ಜಿಪಿಎ ಮಾಡಿದ್ದು ಬಯಲಾಗಿದೆ. ಆರೋಪಿಗಳು ರಾಜರ ಕಾಲದ ಒಂದು ಪೇಪರ್ ನ್ನು 5-8 ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದರು. ಬಂಧಿತರಿಂದ 100ಕ್ಕೂ ಹೆಚ್ಚು ಸೀಲ್ ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.