Sunday, September 25, 2022
Google search engine
HomeUncategorizedBIG NEWS: ರಕ್ಷಣೆಗೆ ತೆರಳಿದ್ದ ನಾಲ್ವರು ಅಗ್ನಿಶಾಮಕ ಸಿಬ್ಬಂದಿಗಳ ಬೋಟ್ ಪಲ್ಟಿ

BIG NEWS: ರಕ್ಷಣೆಗೆ ತೆರಳಿದ್ದ ನಾಲ್ವರು ಅಗ್ನಿಶಾಮಕ ಸಿಬ್ಬಂದಿಗಳ ಬೋಟ್ ಪಲ್ಟಿ

BIG NEWS: ರಕ್ಷಣೆಗೆ ತೆರಳಿದ್ದ ನಾಲ್ವರು ಅಗ್ನಿಶಾಮಕ ಸಿಬ್ಬಂದಿಗಳ ಬೋಟ್ ಪಲ್ಟಿ

ಬಳ್ಳಾರಿ: ವರುಣಾರ್ಭಟಕ್ಕೆ ವೇದಾವತಿ ನದಿ ಅಪಾಯದ ಮಟ್ಟದಲ್ಲಿ ತುಂಬಿ ಹರಿಯುತ್ತಿದ್ದು, ಜನರ ರಕ್ಷಣೆಗೆಂದು ಹೋಗಿದ್ದ ಅಗ್ನಿಶಾಮಕ ದಳ ಸಿಬ್ಬಂದಿಯೇ ನೀರು ಪಾಲಾಗಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ಮುದೇನೂರಿನಲ್ಲಿ ನಡೆದಿದೆ.

ಮುದೇನೂರಿನ ಶನೇಶ್ವರ ದೇವಸ್ಥಾನಕ್ಕೆ ಹೋಗಿದ್ದ ನಾಲ್ವರು ನೀರಿನಲ್ಲಿ ಸಿಲುಕಿದ್ದರು. ದೇವಸ್ಥಾನಕ್ಕೆ ತೆರಳಿದ್ದಾಗ ವೇದಾವತಿ ನದಿ ನೀರು ದೇವಾಲಯದ ಸುತ್ತ ಆವರಿಸಿ ರಕ್ಷಣೆಗಾಗಿ ಮೊರೆಯಿಟ್ಟಿದ್ದರು.

ನದಿ ನೀರಿನಲ್ಲಿ ಸಿಲುಕಿದ ನಾಲ್ವರ ರಕ್ಷಣೆಗೆಂದು ಅಗ್ನಿಶಾಮಕ ಸಿಬ್ಬಂದಿಗಳು ಬೋಟ್ ನಲ್ಲಿ ತೆರಳುತ್ತಿದ್ದ ವೇಳೆ ನದಿ ನೀರಿನಲ್ಲಿ ಬೋಟ್ ಪಲ್ಟಿಯಾಗಿದೆ. ನಾಲ್ವರು ರಕ್ಷಣಾ ಸಿಬ್ಬಂದಿಗಳು ನೀರುಪಾಲಾಗಿದ್ದಾರೆ. ಜನರ ರಕ್ಷಣೆಗಾಗಿ ಸಧ್ಯ ಬೇರೊಂದು ಬೋಟ್ ತೆರಳಿದ್ದು, ನೀರು ಪಾಲಾದ ಸಿಬ್ಬಂದಿಗಳು ನದಿಯಲ್ಲಿ ಈಜಿ ದಡ ಸೇರಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments