Wednesday, August 17, 2022
Google search engine
HomeUncategorizedBIG NEWS: ಮಳೆ ಅವಾಂತರಕ್ಕೆ ಕುಸಿದ ಮನೆ ಗೋಡೆ; ಬಾಲಕ ದುರ್ಮರಣ

BIG NEWS: ಮಳೆ ಅವಾಂತರಕ್ಕೆ ಕುಸಿದ ಮನೆ ಗೋಡೆ; ಬಾಲಕ ದುರ್ಮರಣ

BIG NEWS: ಮಳೆ ಅವಾಂತರಕ್ಕೆ ಕುಸಿದ ಮನೆ ಗೋಡೆ; ಬಾಲಕ ದುರ್ಮರಣ

ಹಾಸನ: ರಾಜ್ಯಾದ್ಯಂತ ಮಳೆ ಅವಾಂತರಗಳು ಮುಂದುವರೆದಿದ್ದು, ಭಾರಿ ಮಳೆಯಿಂದಾಗಿ ಮನೆ ಗೋಡೆ ಕುಸಿದ ಪರಿಣಾಮ ಬಾಲಕ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಚೆನ್ನರಾಯ ಪಟ್ಟಣ ತಾಲೂಕಿನ ಭುವನಹಳ್ಳಿಯಲ್ಲಿ ನಡೆದಿದೆ.

13 ವರ್ಷದ ಪ್ರಜ್ವಲ್ ಮೃತ ಬಾಲಕ. ತಡರಾತ್ರಿಯಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಈ ದುರಂತ ಸಂಭವಿಸಿದೆ. ತಾತನ ಮನೆಗೆಂದು ಬಂದ ಬಾಲಕ ಮನೆ ಗೋಡೆ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ.

ಮನೆಯಲ್ಲಿದ್ದ ಮತ್ತೋರ್ವರಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments