BIG NEWS: ಮಂಡ್ಯಕ್ಕೆ ಆಗಮಿಸಿದ ಪ್ರಧಾನಿ ಮೋದಿ; ಹೂಮಳೆಗರೆದು ಸ್ವಾಗತಿಸಿದ ಜನರು
ಮಂಡ್ಯ: ಪ್ರಧಾನಿ ನರೇಂದ್ರ ಮೋದಿ ಮೈಸೂರಿನಿಂದ ವಿಶೇಷ ಹೆಲಿಕಾಪ್ಟರ್ ನಲ್ಲಿ ಮಂಡ್ಯಕ್ಕೆ ಆಗಮಿಸಿದ್ದು, ಭ್ಯವ್ಯ ಸ್ವಾಗತ ಕೋರಲಾಗಿದೆ.
ಮೈಸೂರಿನಿಂದ ವಿಶೇಷ ಹೆಲಿಕಾಪ್ಟರ್ ನಲ್ಲಿ ಮಂಡ್ಯದ ಪಿಇಎಸ್ ಕಾಲೇಜು ಮೈದಾನಕ್ಕೆ ಬಂದಿಳಿದ ಪ್ರಧಾನಿ ಮೋದಿ ಬಳಿಕ ಅಲ್ಲಿಂದ ಮಂಡ್ಯ ಪ್ರವಾಸಿ ಮಂದಿರಕ್ಕೆ ತೆರಳಿದರು.
ಮಂಡ್ಯ ಪ್ರವಾಸಿ ಮಂದಿರದಲ್ಲಿ ಪ್ರಧಾನಿ ಮೋದಿಯವರ ಮೇಲೆ ಹೂಮಳೆಗರೆದು ಸ್ವಾಗತಿಸಲಾಯಿತು. ಮೋದಿ ಮೋದಿ ಜಯಘೋಷ, ಕರತಾಡ ಮೊಳಗಿದವು. ಮಂಡ್ಯ ಪ್ರವಾಸಿ ಮಂದಿರದಿಂದ ನಂದಾ ಸರ್ಕಲ್ ವರೆಗೆ ಪ್ರಧಾನಿ ಮೋದಿ ರೋಡ್ ಶೋ ನಡೆಸಲಿದ್ದಾರೆ.