Wednesday, August 10, 2022
Google search engine
HomeUncategorizedBIG NEWS: ಬೆಳಗಾವಿ ನಗರದ ಮಧ್ಯ ಭಾಗದಲ್ಲಿಯೇ ಚಿರತೆ ಪ್ರತ್ಯಕ್ಷ; ಬೆಚ್ಚಿಬಿದ್ದ ಜನ

BIG NEWS: ಬೆಳಗಾವಿ ನಗರದ ಮಧ್ಯ ಭಾಗದಲ್ಲಿಯೇ ಚಿರತೆ ಪ್ರತ್ಯಕ್ಷ; ಬೆಚ್ಚಿಬಿದ್ದ ಜನ

BIG NEWS: ಬೆಳಗಾವಿ ನಗರದ ಮಧ್ಯ ಭಾಗದಲ್ಲಿಯೇ ಚಿರತೆ ಪ್ರತ್ಯಕ್ಷ; ಬೆಚ್ಚಿಬಿದ್ದ ಜನ

ಕಾಡು ನಾಶವಾದಂತೆ ಪ್ರಾಣಿಗಳು ಆಹಾರ ಅರಸಿ ನಗರಕ್ಕೆ ಬರುತ್ತಿರುವ ಸುದ್ದಿಗಳು ಆಗಾಗ್ಗೆ ಮಾಧ್ಯಮಗಳಲ್ಲಿ ಪ್ರಕಟವಾಗುತ್ತವೆ. ಇವುಗಳು ಒಮ್ಮೊಮ್ಮೆ ಮನುಷ್ಯರ ಮೇಲೆ ದಾಳಿಯನ್ನು ಸಹ ನಡೆಸುತ್ತವೆ. ಅಂತಹುದೇ ಒಂದು ಘಟನೆ ಇಂದು ನಡೆದಿದೆ.

ಬೆಳಗಾವಿ ನಗರದ ಜಾಧವ ನಗರದಲ್ಲಿ ಇಂದು ಮಧ್ಯಾಹ್ನ ಚಿರತೆಯೊಂದು ವ್ಯಕ್ತಿಯೊಬ್ಬರ ಮೇಲೆ ದಾಳಿ ಮಾಡಿದ್ದು, ಈ ಘಟನೆಯಿಂದ ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ.

ಜಾಧವ ನಗರದಲ್ಲಿ ಲಕ್ಷ್ಮಣ ಮಿರಾಜಕರ ಎಂಬವರು ಕಟ್ಟಡ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಚಿರತೆ ಅವರ ಮೇಲೆ ದಾಳಿ ನಡೆಸಿದೆ‌.

ಇದರಿಂದ ಗಾಬರಿಗೊಂಡ ಅವರು ಕೂಗಿಕೊಂಡ ವೇಳೆ ಸ್ಥಳೀಯರು ಆಗಮಿಸಿದ್ದು ಚಿರತೆ ಅಲ್ಲಿಂದ ಓಡಿ ಹೋಗಿ ಪೊದೆಯೊಂದರಲ್ಲಿ ಅವಿತುಕೊಂಡಿದೆ.

ಸ್ಥಳಕ್ಕೆ ಅರಣ್ಯಾಧಿಕಾರಿಗಳು ದೌಡಾಯಿಸಿದ್ದು ಚಿರತೆ ಸೆರೆಗೆ ಪ್ರಯತ್ನ ನಡೆಸಿದ್ದಾರೆ. ಹಾಡಹಗಲೇ ನಗರದ ಮಧ್ಯಭಾಗದಲ್ಲಿ ಚಿರತೆ ಪ್ರತ್ಯಕ್ಷವಾಗಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments