Monday, December 5, 2022
Google search engine
HomeUncategorizedBIG NEWS: ಬೆಂಗಳೂರಿನಲ್ಲಿ ಇಂದು ಮೋದಿ ಹವಾ: 5 ಗಂಟೆಯಲ್ಲಿ 5 ಕಾರ್ಯಕ್ರಮಗಳಲ್ಲಿ ಭಾಗಿ

BIG NEWS: ಬೆಂಗಳೂರಿನಲ್ಲಿ ಇಂದು ಮೋದಿ ಹವಾ: 5 ಗಂಟೆಯಲ್ಲಿ 5 ಕಾರ್ಯಕ್ರಮಗಳಲ್ಲಿ ಭಾಗಿ

BIG NEWS: ಬೆಂಗಳೂರಿನಲ್ಲಿ ಇಂದು ಮೋದಿ ಹವಾ: 5 ಗಂಟೆಯಲ್ಲಿ 5 ಕಾರ್ಯಕ್ರಮಗಳಲ್ಲಿ ಭಾಗಿ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಇಂದು ಬೆಂಗಳೂರಿಗೆ ಆಗಮಿಸಲಿದ್ದಾರೆ. 5 ಗಂಟೆಗಳ ಅವಧಿಯಲ್ಲಿ 5 ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಆರು ತಿಂಗಳ ಅವಧಿಯಲ್ಲಿ ಮೂರನೇ ಬಾರಿ ರಾಜ್ಯಕ್ಕೆ ಆಗಮಿಸುತ್ತಿರುವ ಮೋದಿ ಸಾರ್ವಜನಿಕ ರ್ಯಾಲಿಯಲ್ಲಿಯೂ ಭಾಗವಹಿಸಲಿದ್ದಾರೆ.

ಬೆಳಗ್ಗೆ ಬೆಂಗಳೂರಿಗೆ ಆಗಮಿಸಲಿರುವ ಪ್ರಧಾನಿಯವರಿಗೆ ಅದ್ಧೂರಿ ಸ್ವಾಗತ ನೀಡಲಾಗುವುದು. ಬೆಳಗ್ಗೆ 9.45 ಕ್ಕೆ ಕನಕದಾಸ, ವಾಲ್ಮೀಕಿ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಲಿದ್ದಾರೆ. ಬೆಳಗ್ಗೆ 10:20ಕ್ಕೆ ವಂದೇ ಭಾರತ್ ಮತ್ತು ಕಾಶಿದರ್ಶನ ರೈಲಿಗೆ ಚಾಲನೆ ನೀಡಲಿದ್ದಾರೆ.

ಬೆಳಗ್ಗೆ 11:30 ಕ್ಕೆ ಏರ್ ಪೋರ್ಟ್ ಟರ್ಮಿನಲ್ 2 ಲೋಕಾರ್ಪಣೆ ಮಾಡಲಿದ್ದು, ಮಧ್ಯಾಹ್ನ 12 ಗಂಟೆಗೆ 108 ಅಡಿ ಎತ್ತರದ ಕೆಂಪೇಗೌಡ ಪ್ರತಿಮೆ ಅನಾವರಣ ಮಾಡಲಿದ್ದಾರೆ. 12.20ಕ್ಕೆ ಸಾರ್ವಜನಿಕ ಸಭೆ ಉದ್ದೇಶಿಸಿ ಮೋದಿ ಭಾಷಣ ಮಾಡಲಿದ್ದಾರೆ. ಪ್ರಧಾನಿ ಅವರ ಆಗಮನದ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments