Thursday, August 11, 2022
Google search engine
HomeUncategorizedBIG NEWS: ಬಿಜೆಪಿಯವರ್ಯಾರೂ ಮನೆ ಕಟ್ಟಿಲ್ವ, ಆಸ್ತಿ ಮಾಡಿಲ್ವ….? ACB ವಿಚಾರಣೆ ಬಳಿಕ ಶಾಸಕ ಜಮೀರ್...

BIG NEWS: ಬಿಜೆಪಿಯವರ್ಯಾರೂ ಮನೆ ಕಟ್ಟಿಲ್ವ, ಆಸ್ತಿ ಮಾಡಿಲ್ವ….? ACB ವಿಚಾರಣೆ ಬಳಿಕ ಶಾಸಕ ಜಮೀರ್ ಅಹ್ಮದ್ ವಾಗ್ದಾಳಿ

BIG NEWS: ಬಿಜೆಪಿಯವರ್ಯಾರೂ ಮನೆ ಕಟ್ಟಿಲ್ವ, ಆಸ್ತಿ ಮಾಡಿಲ್ವ….? ACB ವಿಚಾರಣೆ ಬಳಿಕ ಶಾಸಕ ಜಮೀರ್ ಅಹ್ಮದ್ ವಾಗ್ದಾಳಿ

ಬೆಂಗಳೂರು: ಎಸಿಬಿ ಸಮನ್ಸ್ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾದ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್, ಅಧಿಕಾರಿಗಳು ಕೇಳಿದ ಎಲ್ಲಾ ದಾಖಲೆಗಳನ್ನು ಸಲ್ಲಿಸಿದ್ದೇನೆ. ಮತ್ತೆ ವಿಚಾರಣೆಗೆ ಕರೆದರೆ ಹಾಜರಾಗುತ್ತೇನೆ ಎಂದು ತಿಳಿಸಿದ್ದಾರೆ.

ಎಸಿಬಿ ವಿಚಾರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಜಮೀರ್ ಅಹ್ಮದ್, ಇಡಿ, ಎಸಿಬಿ, ಐಟಿ ಎಲ್ಲಾ ನಮ್ಮನ್ನೇ ಟಾರ್ಗೆಟ್ ಮಾಡ್ತಿದ್ದಾರೆ. ಅವರ ಕಣ್ಣಿಗೆ ನಾನು ಮಾತ್ರ ಕಣ್ತಿದೀನಾ? ದೇಶದಲ್ಲಿ ಬಿಜೆಪಿಯವರು ಯಾರೂ ಮನೆ ಕಟ್ಟಿಲ್ವಾ? ಆಸ್ತಿ ಮಾಡಿಲ್ವಾ? ನನ್ನ ಹಾಗೂ ಡಿ.ಕೆ.ಶಿವಕುಮಾರ್ ಅವರನ್ನು ಮಾತ್ರ ಟಾರ್ಗೆಟ್ ಮಾಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ನನ್ನ ಮನೆ ನಿರ್ಮಾಣ ಸಂಬಂಧ ಎಸಿಬಿ ಅಧಿಕಾರಿಗಳು ದಾಖಲೆ ಕೇಳಿದ್ದರು. ಅವರು ಕೇಳಿದ ಎಲ್ಲಾ ದಾಖಲೆಗಳನ್ನು ಸಲ್ಲಿಸಿದ್ದೇನೆ. ವಿಚಾರಣೆಗೆ ಸ್ಪಂದಿಸಿದೀನಿ. ಅಗತ್ಯವಿದ್ದು ಮತ್ತೆ ಕರೆದರೆ ವಿಚಾರಣೆಗೆ ಹಾಜರಾಗುತ್ತೇನೆ ಎಂದು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments