Saturday, November 26, 2022
Google search engine
HomeUncategorizedBIG NEWS: ಬಾರ್ ಮಾಲೀಕರಿಂದ ಹಣ ವಸೂಲಿಗೆ ಮುಂದಾಗಿದ್ದ ಸಿಪಿಐ ಸಸ್ಪೆಂಡ್

BIG NEWS: ಬಾರ್ ಮಾಲೀಕರಿಂದ ಹಣ ವಸೂಲಿಗೆ ಮುಂದಾಗಿದ್ದ ಸಿಪಿಐ ಸಸ್ಪೆಂಡ್

BIG NEWS: ಬಾರ್ ಮಾಲೀಕರಿಂದ ಹಣ ವಸೂಲಿಗೆ ಮುಂದಾಗಿದ್ದ ಸಿಪಿಐ ಸಸ್ಪೆಂಡ್

ವಿಜಯಪುರ: ಬಾರ್ ಮಾಲೀಕರಿಂದ ಹಣ ವಸೂಲಿಗೆ ಮುಂದಾಗಿದ್ದ ಮುದ್ದೇಬಿಹಾಳದ ಅಬಕಾರಿ ಸಿಪಿಐ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದ ಅಬಕಾರಿ ಸಿಪಿಐ ಜ್ಯೋತಿ ಮೇತ್ರಿ ಸಸ್ಪೆಂಡ್ ಆಗಿರುವ ಅಧಿಕಾರಿ. ಸಿಪಿಐ ಜ್ಯೋತಿ ಬಾರ್ ಮಾಲೀಕರೊಂದಿಗೆ ಡೀಲ್ ಮಾಡಿಕೊಂಡಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಕೊಡೋದು ಕೊಡಿ, ಇಲ್ಲದಿದ್ರೆ ಚೆನ್ನಾಗಿರಲ್ಲ ಎಂದು ಸಿಪಿಐ ಧಮ್ಕಿ ಹಾಕಿದ್ದರು. ಬಾರ್ ಗಳಿಂದ ತಲಾ 15,000 ಬೇಡಿಕೆಯಿಟ್ಟಿದ್ದರು. ವಿಡಿಯೋ ವೈರಲ್ ಆದ ಬೆನ್ನಲ್ಲೇ ಇದೀಗ ಸಿಪಿಐ ಜ್ಯೋತಿ ಅವರನ್ನು ಅಮಾನತು ಮಾಡಿ ಬೆಂಗಳೂರು ಅಬಕಾರಿ ಆಯುಕ್ತರು ಆದೇಶ ಹೊರಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments