Saturday, November 26, 2022
Google search engine
HomeUncategorizedBIG NEWS: ಬಂಡೆಮಠದ ಸ್ವಾಮೀಜಿ ಆತ್ಮಹತ್ಯೆ ಪ್ರಕರಣ; 3ನೇ ವಿಡಿಯೋ ವೈರಲ್

BIG NEWS: ಬಂಡೆಮಠದ ಸ್ವಾಮೀಜಿ ಆತ್ಮಹತ್ಯೆ ಪ್ರಕರಣ; 3ನೇ ವಿಡಿಯೋ ವೈರಲ್

BIG NEWS: ಬಂಡೆಮಠದ ಸ್ವಾಮೀಜಿ ಆತ್ಮಹತ್ಯೆ ಪ್ರಕರಣ; 3ನೇ ವಿಡಿಯೋ ವೈರಲ್

ರಾಮನಗರ: ಬಂಡೆಮಠದ ಬಸವಲಿಂಗಶ್ರೀ ಆತ್ಮಹತ್ಯೆ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದ್ದು, ಇದೀಗ ಮತ್ತೊಂದು ವಿಡಿಯೋ ವೈರಲ್ ಆಗಿದೆ.

ಬಸವಲಿಂಗಶ್ರೀಗಳಿಗೆ ಸಂಬಂಧಿಸಿದ ಮೂರನೇ ವಿಡಿಯೋ ಬಹಿರಂಗವಾಗಿದ್ದು, ಈ ವಿಡಿಯೋದಲ್ಲಿ ಸ್ವಾಮೀಜಿ ಸಂಪೂರ್ಣ ಬೆತ್ತಲಾಗಿದ್ದಾರೆ ಎನ್ನಲಾಗಿದೆ. ಮೊದಲ ಎರಡು ವಿಡಿಯೋದಲ್ಲಿ ಅರೆ ನಗ್ನರಾಗಿದ್ದ ಸ್ವಾಮೀಜಿ ಮೂರನೇ ವಿಡಿಯೋದಲ್ಲಿ ನಗ್ನರಾಗಿದ್ದಾರೆ. ಆದರೆ ವಿಡಿಯೋ ಕಾಲ್ ಮಾಡಿರುವ ಮಹಿಳೆ ಯಾರೆಂಬುದು ಈವರೆಗೆ ಪತ್ತೆಯಾಗಿಲ್ಲ.

ಬಂಡೆಮಠದ ಬಸವಲಿಂಗಶ್ರೀ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿರುವಾಗಲೇ ದಿನಕ್ಕೊಂದು ವಿಡಿಯೋಗಳು ವೈರಲ್ ಆಗುತ್ತಿದ್ದು, ವಿಡಿಯೋದಲ್ಲಿರುವ ಮಹಿಳೆ ಹಾಗೂ ಪ್ರಕರಣದ ಹಿಂದಿರುವವರ ಬಗ್ಗೆ ಮಾತ್ರ ಇನ್ನೂ ಸುಳಿವು ಸಿಕಿಲ್ಲ.

ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಂಡಿದ್ದ ಸ್ಥಳದಲ್ಲಿ ಸಿಕ್ಕಿದ್ದ ಡೆತ್ ನೋಟ್ ನಲ್ಲಿ ಬರೆದಿಟ್ಟದ್ದ 8 ಜನರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಪ್ರಕರಣ ಬೇದಿಸಲು ಮೂರು ತಂಡಗಳನ್ನು ರಚಿಸಲಾಗಿದೆ ಎಂದು ತಿಳಿದುಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments