Tuesday, September 27, 2022
Google search engine
HomeUncategorizedBIG NEWS: ಪಿಎಸ್ಐ ನೇಮಕಾತಿ ಹಗರಣ; ಕೆ.ಆರ್ ಪುರಂ ಟ್ರಾಫಿಕ್ PSI ನಾಪತ್ತೆ

BIG NEWS: ಪಿಎಸ್ಐ ನೇಮಕಾತಿ ಹಗರಣ; ಕೆ.ಆರ್ ಪುರಂ ಟ್ರಾಫಿಕ್ PSI ನಾಪತ್ತೆ

BIG NEWS: ಪಿಎಸ್ಐ ನೇಮಕಾತಿ ಹಗರಣ; ಕೆ.ಆರ್ ಪುರಂ ಟ್ರಾಫಿಕ್ PSI ನಾಪತ್ತೆ

ಬೆಂಗಳೂರು: ಪಿಎಸ್ಐ ಹುದ್ದೆ ನೇಮಕಾತಿ ಪರೀಕ್ಷಾ ಅಕ್ರಮ ಪ್ರಕರಣದ ಆರೋಪಿ ಕೆ.ಆರ್.ಪುರಂ ಟ್ರಾಫಿಕ್ ಸಬ್ ಇನ್ಸ್ ಪೆಕ್ಟರ್ ನಾಪತ್ತೆಯಾಗಿದ್ದು, ಸಿಐಡಿ ಅಧಿಕಾರಿಗಳು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.

545 ಪಿಎಸ್ಐ ಹುದ್ದೆ ನೇಮಕಾತಿ ಪರೀಕ್ಷೆ ಹಗರಣಕ್ಕೆ ಸಂಬಂಧಿಸಿದಂತೆ ಬಗೆದಷ್ಟು ಅಕ್ರಮಗಳು ಹೊರಬರುತ್ತಿದ್ದು, ಬೆಂಗಳೂರಿನ ಕೆ.ಆರ್.ಪುರಂ ಸಂಚಾರಿ ಪೊಲೀಸ್ ಠಾಣೆ ಪಿಎಸ್ಐ ಸುಬ್ರಮಣಿ ಭಾಗಿಯಾಗಿರುವುದು ಸಿಐಡಿ ತನಿಖೆಯಲ್ಲಿ ಪತ್ತೆಯಾಗಿದೆ. ಪ್ರಕರಣ ಬೆಳಕಿಗೆ ಬಂದಾಗಿನಿಂದ ಆರೋಪಿ ಸುಬ್ರಮಣಿ ನಾಪತ್ತೆಯಾಗಿದ್ದಾರೆ.

ಪಿಎಸ್ಐ ಸುಬ್ರಮಣಿ ಅಭ್ಯರ್ಥಿಗಳ ಪೋಸ್ಟಿಂಗ್ ಮಾಡಲು ಡೀಲ್ ಮಾಡಿಕೊಂಡಿದ್ದರು. ಹೊಸಕೋಟೆಯ ಶಿವರಾಜು ಸೇರಿ ಇಬ್ಬರು ಅಭ್ಯರ್ಥಿಗಳಿಂದ ಲಕ್ಷ ಲಕ್ಷ ರೂಪಾಯಿ ಹಣ ಪಡೆದಿದ್ದಾರೆ ಎಂಬುದು ತನಿಖೆ ವೇಳೆ ಬಯಲಾಗಿದೆ. ಇದೀಗ ತಲೆಮರೆಸಿಕೊಂಡಿರುವ ಪಿಎಸ್ಐ ಗಾಗಿ ಸಿಐಡಿ ಹುಡುಕಾಟ ನಡೆಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments