Thursday, August 11, 2022
Google search engine
HomeUncategorizedBIG NEWS: ನಾನು ಚಾಮುಂಡೇಶ್ವರಿ ಕ್ಷೇತ್ರದಿಂದ ಮತ್ತೆ ಸ್ಪರ್ಧಿಸಲ್ಲ; 2023 ನನ್ನ ಕಟ್ಟಕಡೆ ಚುನಾವಣೆ; ಸಿದ್ದರಾಮಯ್ಯ...

BIG NEWS: ನಾನು ಚಾಮುಂಡೇಶ್ವರಿ ಕ್ಷೇತ್ರದಿಂದ ಮತ್ತೆ ಸ್ಪರ್ಧಿಸಲ್ಲ; 2023 ನನ್ನ ಕಟ್ಟಕಡೆ ಚುನಾವಣೆ; ಸಿದ್ದರಾಮಯ್ಯ ಅಧಿಕೃತ ಘೋಷಣೆ

BIG NEWS: ನಾನು ಚಾಮುಂಡೇಶ್ವರಿ ಕ್ಷೇತ್ರದಿಂದ ಮತ್ತೆ ಸ್ಪರ್ಧಿಸಲ್ಲ; 2023 ನನ್ನ ಕಟ್ಟಕಡೆ ಚುನಾವಣೆ; ಸಿದ್ದರಾಮಯ್ಯ ಅಧಿಕೃತ ಘೋಷಣೆ

ಮೈಸೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾನು ಚಾಮುಂಡೇಶ್ವರಿ ಕ್ಷೇತ್ರದಿಂದ ಮತ್ತೆ ಸ್ಪರ್ಧಿಸಲ್ಲ. ಇದು ವೆರಿ ವೆರಿ ಕ್ಲಿಯರ್ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅಧಿಕೃತವಾಗಿ ಘೋಷಿಸಿದ್ದಾರೆ.

ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಮತ್ತೆ ನಾನು ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಲ್ಲ. ಮತ್ತೆ ನನ್ನನ್ನು ಕರೆಯಬೇಡಿ. 2023 ನನ್ನ ಕಟ್ಟ ಕಡೆಯ ಚುನಾವಣೆ. ಆಮೇಲೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ. ರಾಜ್ಯಸಭೆ ಸದಸ್ಯನಾಗು ಎಂದು ಕರೆದರೂ ಆಗಲ್ಲ ಎಂದು ಸ್ಪಷ್ಟಪಡಿಸಿದರು.

ಬಾದಾಮಿ ಜನತೆ ನನ್ನನ್ನು ಮತ್ತೆ ಕರೆಯುತ್ತಿದ್ದಾರೆ. ಬಾದಾಮಿ, ಕೋಲಾರ, ಕೊಪ್ಪಳ ಎಲ್ಲೋ ಒಂದು ಕಡೆ ನಿಲ್ಲುತ್ತೇನೆ. ಆದರೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಿಲ್ಲಲ್ಲ ಎಂದರು. ಇನ್ನು ಚಾಮುಂಡೇಶ್ವರಿ ಕ್ಷೇತ್ರದಿಂದ ಯಾರೋ ಒಬ್ಬರನ್ನು ನಿಲ್ಲಿಸುತ್ತೇನೆ. ಅವರನ್ನು ಗೆಲ್ಲಿಸಿ ಅಷ್ಟೇ ಎಂದು ಇದೇ ವೇಳೆ ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments