Thursday, August 11, 2022
Google search engine
HomeUncategorizedBIG NEWS: ನವ್ಯಶ್ರೀ ಪ್ರಕರಣ; ತೋಟಗಾರಿಕಾ ಇಲಾಖೆ ಅಧಿಕಾರಿ ರಾಜಕುಮಾರ್ ಟಾಕಳೆ ವಿರುದ್ಧ FIR ದಾಖಲು

BIG NEWS: ನವ್ಯಶ್ರೀ ಪ್ರಕರಣ; ತೋಟಗಾರಿಕಾ ಇಲಾಖೆ ಅಧಿಕಾರಿ ರಾಜಕುಮಾರ್ ಟಾಕಳೆ ವಿರುದ್ಧ FIR ದಾಖಲು

BIG NEWS: ನವ್ಯಶ್ರೀ ಪ್ರಕರಣ; ತೋಟಗಾರಿಕಾ ಇಲಾಖೆ ಅಧಿಕಾರಿ ರಾಜಕುಮಾರ್ ಟಾಕಳೆ ವಿರುದ್ಧ FIR ದಾಖಲು

ಬೆಳಗಾವಿ: ಕಾಂಗ್ರೆಸ್ ಯುವ ನಾಯಕಿ ನವ್ಯಶ್ರೀ ಪ್ರಕರಣ ಇದೀಗ ಮತ್ತೊಂದು ತಿರುವು ಪಡೆದುಕೊಂಡಿದ್ದು, ತೋಟಗಾರಿಕಾ ಇಲಾಖೆ ಅಧಿಕಾರಿ ರಾಜಕುಮಾರ್ ಟಾಕಳೆ ವಿರುದ್ಧ ಬೆಳಗಾವಿ ಎಪಿಎಂಸಿ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.

ನವ್ಯಶ್ರೀ ವಿರುದ್ಧ ರಾಜಕುಮಾರ್ ಟಾಕಳೆ ಹನಿಟ್ರ್ಯಾಪ್, ವಂಚನೆ, ಬ್ಲ್ಯಾಕ್ ಮೇಲ್, ಜೀವ ಬೆದರಿಕೆ ಆರೋಪ ಮಾಡಿ ಎಪಿಎಂಸಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ಬಳಿಕ ನವ್ಯಶ್ರೀ, ರಾಜಕುಮಾರ್ ಟಾಕಳೆ ನನ್ನ ಗಂಡ, 2020ರಲ್ಲಿ ಆತ ತನ್ನನ್ನು ವಿವಾಹವಾಗಿದ್ದು, ತನಗೆ ಮೋಸ ಮಾಡಿದ್ದಾನೆ. ತನ್ನ ವಿರುದ್ಧ ಅಶ್ಲೀಲ ವಿಡಿಯೋ ಅಪ್ ಲೋಡ್ ಮಾಡಿ ಸಾಮಾಜಿಕವಾಗಿ ಮಾನ ಹರಾಜು ಹಾಕಿದ್ದಾಗಿ ಗುಡುಗಿದ್ದರು.

ಇದೀಗ ನವ್ಯಶ್ರೀ ಬೆಳಗಾವಿ ಎಪಿಎಂಸಿ ಠಾಣೆಯಲ್ಲಿ ರಾಜಕುಮಾರ್ ಟಾಕಳೆ ವಿರುದ್ಧ ಎಫ್ ಐ ಆರ್ ದಾಖಲಿಸಿದ್ದಾರೆ. ಅಲ್ಲದೇ ರಾಜಕುಮಾರ್ ಟಾಕಳೆ ವಿರುದ್ಧ 10 ಆರೋಪ ಮಾಡಲಾಗಿದ್ದು, ಒಟ್ಟು 10 ಸೆಕ್ಷನ್ ಅಡಿ ಕೇಸ್ ದಾಖಲಾಗಿದೆ.

ಸೆಕ್ಷನ್ 376 – ಅತ್ಯಾಚಾರ, 366 ಕಿಡ್ನಾಪ್, 312 -ಗರ್ಭಪಾತ, 420 – ಮೋಸ, 354- ಮಹಿಳೆ ಮೇಲೆ ಹಲ್ಲೆ, 504 – ಅವಾಚ್ಯ ಶಬ್ಧಗಳಿಂದ ನಿಂದನೆ, 506- ಜೀವಬೆದರಿಕೆ, 509- ಗೌರವಕ್ಕೆ ಧಕ್ಕೆ, ಐಟಿ ಆಕ್ಟ್ 66E – ಖಾಸಗಿ ತನಕ್ಕೆ ಧಕ್ಕೆ, 67A-ಪ್ರಚೋದನಾಕಾರಿ ವಿಡಿಯೋ ಅಪ್ ಲೋಡ್ ಸೇರಿದಂತೆ ಒಟ್ಟು 10 ಸೆಕ್ಷನ್ ಗಳಡಿ ಕೇಸ್ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments