Friday, October 7, 2022
Google search engine
HomeUncategorizedBIG NEWS: ತಾರಕಕ್ಕೇರಿದ ಹಾಲಿ ಹಾಗೂ ಮಾಜಿ ಶಾಸಕರ ಜಗಳ; ತಹಶೀಲ್ದಾರ್ ಎದುರಲ್ಲೇ ಜಟಾಪಟಿ; ವಿಡಿಯೋ...

BIG NEWS: ತಾರಕಕ್ಕೇರಿದ ಹಾಲಿ ಹಾಗೂ ಮಾಜಿ ಶಾಸಕರ ಜಗಳ; ತಹಶೀಲ್ದಾರ್ ಎದುರಲ್ಲೇ ಜಟಾಪಟಿ; ವಿಡಿಯೋ ವೈರಲ್

BIG NEWS: ತಾರಕಕ್ಕೇರಿದ ಹಾಲಿ ಹಾಗೂ ಮಾಜಿ ಶಾಸಕರ ಜಗಳ; ತಹಶೀಲ್ದಾರ್ ಎದುರಲ್ಲೇ ಜಟಾಪಟಿ; ವಿಡಿಯೋ ವೈರಲ್

ದಾವಣಗೆರೆ: ಮಳೆಹಾನಿ ಪರಿಹಾರ ನೀಡದ ವಿಚಾರವಾಗಿ ಮಾಜಿ ಶಾಸಕರು ಹಾಗೂ ಹಾಲಿ ಶಾಸಕರ ನಡುವೆ ಭಾರಿ ಜಟಾಪಟಿಯೇ ನಡೆದಿದ್ದು, ಜಗಳ ತಾರಕಕ್ಕೇರಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ಹೊನ್ನಾಳಿ ಮಾಜಿ ಶಾಸಕ ಶಾಂತನಗೌಡ ಹಾಗೂ ಹಾಲಿ ಶಾಸಕ ಎಂ.ಪಿ.ರೇಣುಕಾಚಾರ್ಯ ನಡುವೆ ತಹಶೀಲ್ದಾರ್ ಸಮ್ಮುಖದಲ್ಲಿಯೇ ಜಗಳ ನಡೆದಿದೆ. ಉದ್ದೇಶಪೂರ್ವಕವಾಗಿಯೇ ಮಳೆಹಾನಿ ಪರಿಹಾರವನ್ನು ನೀಡುತ್ತಿಲ್ಲ. ಜನರು ಸಂಕಷ್ಟದಿಂದ ಪರದಾಡುತ್ತಿದ್ದಾರೆ ಆದರೂ ಶಾಸಕರು ಈ ಬಗ್ಗೆ ಕಿಂಚಿತ್ತು ಕಾಳಜಿ ತೋರುತ್ತಿಲ್ಲ. ಫೋನ್ ಮಾಡಿದರೆ ನಮ್ಮ ಕರೆಯನ್ನೂ ಸ್ವೀಕರಿಸುತ್ತಿಲ್ಲ ಎಂದು ಮಾಜಿ ಶಾಸಕ ಶಾಂತನಗೌಡ ವಾಗ್ದಾಳಿ ನಡೆಸಿದ್ದಾರೆ.

ಮಾಜಿ ಶಾಸಕರ ಆರೋಪ ಅಲ್ಲಗಳೆದ ಶಾಸಕ ರೇಣುಕಾಚಾರ್ಯ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಶಾಂತನಗೌಡ, ಎಷ್ಟು ದಿನಗಳಿಂದ ನೋಡುತ್ತಿದ್ದೇವೆ. ಯಾವುದೇ ಪರಿಹಾರವನ್ನು ನೀಡದೇ ತಪ್ಪಿಸಿಕೊಂಡು ಓಡಾಡುತ್ತಿದ್ದೀರಾ. ಪರಿಹಾರದ ಹಣವನ್ನು ಏನು ಮಾಡುತ್ತಿದ್ದೀರಾ? ಮಳೆಹಾನಿ ಪರಿಹಾರದ ಹಣ ಎಲ್ಲಿ ಎಂದು ಪ್ರಶ್ನಿಸಿದ್ದಾರೆ. ಇಬ್ಬರು ನಾಯಕರ ನಡುವಿನ ವಾಕ್ಸಮರದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments