Thursday, August 11, 2022
Google search engine
HomeUncategorizedBIG NEWS: ಜಿಲ್ಲಾ ಪಂಚಾಯತ್ CEO ನೂರ್ ಜಹಾರ್ ಖಾನಂ ದಿಢೀರ್ ಎತ್ತಂಗಡಿ

BIG NEWS: ಜಿಲ್ಲಾ ಪಂಚಾಯತ್ CEO ನೂರ್ ಜಹಾರ್ ಖಾನಂ ದಿಢೀರ್ ಎತ್ತಂಗಡಿ

BIG NEWS: ಜಿಲ್ಲಾ ಪಂಚಾಯತ್ CEO ನೂರ್ ಜಹಾರ್ ಖಾನಂ ದಿಢೀರ್ ಎತ್ತಂಗಡಿ

ರಾಯಚೂರು: ತೀವ್ರ ವಿವಾದಕ್ಕೆ ಕಾರಣವಾಗಿದ್ದ ರಾಯಚೂರು ಜಿಲ್ಲಾ ಪಂಚಾಯತ್ ಸಿಇಒ ನೂರ್ ಜಹಾರ್ ಖಾನಂ ಅವರನ್ನು ಎತ್ತಿಂಗಡಿ ಮಾಡಲಾಗಿದೆ.

ಇತ್ತೀಚೆಗೆ ನೂರ್ ಜಹಾರ್ ಹುದ್ದೆ ಬಗ್ಗೆ ಭಾರಿ ವಿವಾದ ಕೇಳಿಬಂದಿತ್ತು. ಕೆ ಎ ಎಸ್ ಅಧಿಕಾರಿ ನೂರ್ ಜಹಾರ್ ಅವರಿಗೆ ಐಎಎಸ್ ವೃಂದದ ಹುದ್ದೆ ನೀಡಿರುವುದಕ್ಕೆ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕೆಎಟಿ ಮೊರೆ ಹೋಗಿದ್ದರು. ನೂರ್ ಜಹಾರ್ ಖಾನಂ ಸಿಇಒ ಹುದ್ದೆಗೆ ಅನರ್ಹರಾಗಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರಿದ್ದರು.

ಈ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಒ ನೂರ್ ಜಹಾರ್ ಅವರನ್ನು ಎತ್ತಂಗಡಿ ಮಾಡಲಾಗಿದ್ದು, ರಾಯಚೂರು ಜಿಲ್ಲಾಧಿಕಾರಿಗೆ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments