Saturday, November 26, 2022
Google search engine
HomeUncategorizedBIG NEWS: ಜಿಮ್‌ನಲ್ಲಿ ವರ್ಕೌಟ್‌ ಮಾಡುತ್ತಿದ್ದಾಗ್ಲೇ ಹೃದಯಾಘಾತ; ಕಿರುತೆರೆಯ ಪ್ರತಿಭಾವಂತ ನಟ ಸಾವು

BIG NEWS: ಜಿಮ್‌ನಲ್ಲಿ ವರ್ಕೌಟ್‌ ಮಾಡುತ್ತಿದ್ದಾಗ್ಲೇ ಹೃದಯಾಘಾತ; ಕಿರುತೆರೆಯ ಪ್ರತಿಭಾವಂತ ನಟ ಸಾವು

BIG NEWS: ಜಿಮ್‌ನಲ್ಲಿ ವರ್ಕೌಟ್‌ ಮಾಡುತ್ತಿದ್ದಾಗ್ಲೇ ಹೃದಯಾಘಾತ; ಕಿರುತೆರೆಯ ಪ್ರತಿಭಾವಂತ ನಟ ಸಾವು

ಈ ವರ್ಷ ಭಾರತೀಯ ಟಿವಿ ಉದ್ಯಮಕ್ಕೆ ಒಂದಾದ ಮೇಲೊಂದರಂತೆ ಆಘಾತಗಳು ಎದುರಾಗುತ್ತಲೇ ಇವೆ. ಅನೇಕ ಪ್ರತಿಭಾವಂತ ನಟನಟಿಯರನ್ನು ಟಿವಿ ಇಂಡಸ್ಟ್ರಿ ಕಳೆದುಕೊಂಡಿದೆ. ‘ಭಾಬಿ ಜಿ ಘರ್ ಪರ್ ಹೈ’ ಖ್ಯಾತಿಯ ನಟ ದೀಪೇಶ್ ಭಾನ್ ಮತ್ತು ಹಾಸ್ಯನಟ ರಾಜು ಶ್ರೀವಾಸ್ತವ್ ಸಾವಿನ ಕಹಿ ಸುದ್ದಿ ಇನ್ನೂ ಅಭಿಮಾನಿಗಳಿಂದ ಮರೆಯಾಗಿಲ್ಲ. ಅಷ್ಟರಲ್ಲಾಗ್ಲೇ ಮತ್ತೋರ್ವ ಕಿರುತೆರೆ ನಟ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.

ನಟ ಸಿದ್ದಾಂತ್ ವೀರ್ ಸೂರ್ಯವಂಶಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಸಿದ್ಧಾಂತ್‌ಗೆ ಕೇವಲ 46 ವರ್ಷ. ಮುಂಬೈನಲ್ಲಿ ನೆಲೆಸಿದ್ದ ಸಿದ್ಧಾಂತ್‌, ಜನಪ್ರಿಯ ಹಿಂದಿ ಧಾರಾವಾಹಿ ಕಸೌಟಿ ಜಿಂದಗಿ ಕೇ ಸೇರಿದಂತೆ ಅನೇಕ ಸೀರಿಯಲ್‌ಗಳಲ್ಲಿ ನಟಿಸಿದ್ದರು. ಜಿಮ್‌ನಲ್ಲಿ ವರ್ಕೌಟ್‌ ಮಾಡುತ್ತಿದ್ದಾಗ್ಲೇ ಸಿದ್ಧಾಂತ್ಗೆ ಹೃದಯಾಘಾತವಾಗಿದೆಯಂತೆ.

2017ರಲ್ಲಿ ಈತ ಎರಡನೇ ಮದುವೆಯಾಗಿದ್ದರು. ಅವರಿಗೆ ಇಬ್ಬರು ಮಕ್ಕಳಿದ್ದಾರೆ. 2022ರಲ್ಲಿ ‘ಜಿದ್ದಿ ದಿಲ್ ಮಾನೆ ನಾ’ ಧಾರಾವಾಹಿಯಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು. ಕುಸುಮ್‌, ವಾರಿಸ್‌, ಸೂರ್ಯಪುತ್ರ ಕರ್ಣ್‌ ಸೇರಿದಂತೆ ಅನೇಕ ಜನಪ್ರಿಯ ಧಾರಾವಾಹಿಯಲ್ಲಿ ಸಿದ್ಧಾಂತ್‌ ಅಭಿನಯಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments