Wednesday, August 10, 2022
Google search engine
HomeUncategorizedBIG NEWS: ಜನರನ್ನು ನಂಬಿಸಲು ಇಬ್ಬರೂ ಕೈ ಎತ್ತುತ್ತಿದ್ದಾರೆ; ಸಿದ್ದರಾಮಯ್ಯ-ಡಿಕೆಶಿ ಒಗ್ಗಟ್ಟು ಪ್ರದರ್ಶಕ್ಕೆ HDK ತಿರುಗೇಟು

BIG NEWS: ಜನರನ್ನು ನಂಬಿಸಲು ಇಬ್ಬರೂ ಕೈ ಎತ್ತುತ್ತಿದ್ದಾರೆ; ಸಿದ್ದರಾಮಯ್ಯ-ಡಿಕೆಶಿ ಒಗ್ಗಟ್ಟು ಪ್ರದರ್ಶಕ್ಕೆ HDK ತಿರುಗೇಟು

BIG NEWS: ಜನರನ್ನು ನಂಬಿಸಲು ಇಬ್ಬರೂ ಕೈ ಎತ್ತುತ್ತಿದ್ದಾರೆ; ಸಿದ್ದರಾಮಯ್ಯ-ಡಿಕೆಶಿ ಒಗ್ಗಟ್ಟು ಪ್ರದರ್ಶಕ್ಕೆ HDK ತಿರುಗೇಟು

ಬೆಂಗಳೂರು: ಸಿದ್ದರಾಮೋತ್ಸವ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಒಗ್ಗಟ್ಟು ಪ್ರದರ್ಶನ ವಿಚಾರವಾಗಿ ಪ್ರತಿಕ್ರಿಯಿಸಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ನನಗೂ ಕೈ ಕೈ ಹಿಡಿದುಕೊಂಡು ಕೈ ಎತ್ತಿದ್ದರು. ಹಾಗೇ ಈಗ ಜನರಿಗೆ ಕೈ ಎತ್ತುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಸಿದ್ದರಾಮಯ್ಯ, ಡಿಕೆಶಿಯವರನ್ನು ನಂಬಿದ್ದಕ್ಕೆ ನನಗೂ ಕೈ ಎತ್ತಿದರು. ಬೆನ್ನಿಗೆ ಚೂರಿ ಹಾಕಿದರು. ಕೈ ಎತ್ತೋದು, ಕೈ ಇಳಿಸೋದು ಆಯಾ ಸಂದರ್ಭಕ್ಕೆ ತಕ್ಕಂತೆ ನಡೆಯುತ್ತಿರುತ್ತದೆ ಎಂದರು.

ಈಗ ಜನರನ್ನು ನಂಬಿಸಲು ಇಬ್ಬರೂ ಕೈ ಎತ್ತುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಯಾರು ಯಾರಿಗೆ ಕೈ ಎತ್ತುತ್ತಾರೆ? ಯಾರ ಬೆನ್ನಿಗೆ ಯಾರು ಚೂರಿ ಹಾಕುತ್ತಾರೆ ನೋಡೊಣ ಎಂದು ಮಾರ್ಮಿಕವಾಗಿ ನುಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments