Thursday, August 11, 2022
Google search engine
HomeUncategorizedBIG NEWS: ಚಾರ್ಮಡಿಘಾಟ್ ನಲ್ಲಿ ಭೀಕರ ಅಪಘಾತ; ಪಲ್ಟಿಯಾಗಿ ಚರಂಡಿಗೆ ಬಿದ್ದ ಲಾರಿ

BIG NEWS: ಚಾರ್ಮಡಿಘಾಟ್ ನಲ್ಲಿ ಭೀಕರ ಅಪಘಾತ; ಪಲ್ಟಿಯಾಗಿ ಚರಂಡಿಗೆ ಬಿದ್ದ ಲಾರಿ

BIG NEWS: ಚಾರ್ಮಡಿಘಾಟ್ ನಲ್ಲಿ ಭೀಕರ ಅಪಘಾತ; ಪಲ್ಟಿಯಾಗಿ ಚರಂಡಿಗೆ ಬಿದ್ದ ಲಾರಿ

ಚಿಕ್ಕಮಗಳೂರು: ರಾಜ್ಯದ ಹಲವೆಡೆಗಳಲ್ಲಿ ಭಾರಿ ಮಳೆ ಅವಾಂತರದ ನಡುವೆ ಅಪಘಾತ ಪ್ರಕರಣಗಳು ಹೆಚ್ಚುತ್ತಿದ್ದು, ಚಾರ್ಮಡಿಘಾಟ್ ನಲ್ಲಿ ಚಾಲಕನ ನಿಯಂತ್ರಣತಪ್ಪಿ ಲಾರಿ ಪಲ್ಟಿಯಾದ ಘಟನೆ ನಡೆದಿದೆ.

ಮಂಗಳೂರಿನಿಂದ ಬೆಂಗಳೂರಿಗೆ ಬರುತ್ತಿದ್ದ ಲಾರಿ ಚಾರ್ಮಡಿಘಾಟ್ ನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಪರಿಣಾಮ ಲಾರಿ ಚಾರ್ಮಡಿಘಾಟ್ ನ ಪಕ್ಕದಲ್ಲೇ ಹರಿಯುತ್ತಿದ್ದ ಚರಂಡಿಗೆ ಬಿದ್ದಿದೆ. ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಕಳೆದ 15 ದಿನಗಳಿಂದ ಈ ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದು, ವರುಣಾರ್ಭಟಕ್ಕೆ ಘಟ್ಟ ಪ್ರದೇಶದಲ್ಲಿ ವಾಹನ ಸಂಚಾರ ಕೂಡ ಕಷ್ಟ ಸಾಧ್ಯವಾಗಿದೆ. ಒಂದೆಡೆ ಮಳೆ, ಘಟ್ಟದ ರಸ್ತೆಗಳಲ್ಲಿ ತಿರುವು, ಮಳೆಯಿಂದ ಹಾನಿಯಾದ ರಸ್ತೆ ಮಾರ್ಗದಲ್ಲಿ ಚಲಿಸುವುದೇ ದುಸ್ಸಾಹಸವಾಗಿದ್ದು, ವಾಹನ ಸವಾರರು ಜೀವ ಕೈಲಿ ಹಿಡಿದು ಗಾಡಿ ಓಡಿಸುವ ಸ್ಥಿತಿ ಎದುರಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments