Tuesday, December 6, 2022
Google search engine
HomeUncategorizedBIG NEWS: ಗುಂಬಜ್ ಮಾದರಿಯ ಬಸ್ ನಿಲ್ದಾಣ ವಿವಾದ; ಬೆಳಗಾಗುವಷ್ಟರಲ್ಲಿ ಕೆಂಪು ಬಣ್ಣಕ್ಕೆ ತಿರುಗಿದ ಗುಂಬಜ್...

BIG NEWS: ಗುಂಬಜ್ ಮಾದರಿಯ ಬಸ್ ನಿಲ್ದಾಣ ವಿವಾದ; ಬೆಳಗಾಗುವಷ್ಟರಲ್ಲಿ ಕೆಂಪು ಬಣ್ಣಕ್ಕೆ ತಿರುಗಿದ ಗುಂಬಜ್ ಬಣ್ಣ; ಅರಮನೆ ಬಣ್ಣದಲ್ಲಿ ಬದಲಾದ ಬಸ್ ಶೆಲ್ಟರ್

BIG NEWS: ಗುಂಬಜ್ ಮಾದರಿಯ ಬಸ್ ನಿಲ್ದಾಣ ವಿವಾದ; ಬೆಳಗಾಗುವಷ್ಟರಲ್ಲಿ ಕೆಂಪು ಬಣ್ಣಕ್ಕೆ ತಿರುಗಿದ ಗುಂಬಜ್ ಬಣ್ಣ; ಅರಮನೆ ಬಣ್ಣದಲ್ಲಿ ಬದಲಾದ ಬಸ್ ಶೆಲ್ಟರ್

ಮೈಸೂರು: ಗುಂಬಜ್ ಮಾದರಿಯ ಬಸ್ ನಿಲ್ದಾಣ ವಿವಾದಕ್ಕೆ ಸಂಬಂಧಿಸಿದಂತೆ ಮತ್ತೊಂದು ಬೆಳವಣಿಗೆ ನಡೆದಿದ್ದು, ರಾತ್ರೋರಾತ್ರಿ ಬಸ್ ನಿಲ್ದಾಣದ ಬಣ್ಣವೇ ಬದಲಾಗಿ ಹೋಗಿದೆ.

ಮೈಸೂರಿನ ಹಲವೆಡೆ ಗುಂಬಜ್ ಮಾದರಿಯ ಬಸ್ ನಿಲ್ದಾಣಗಳು ನಿರ್ಮಾಣಗೊಂಡಿದ್ದು, ತೀವ್ರ ವಿವಾದಕ್ಕೆ ಕಾರಣವಾಗಿತ್ತು. 4 ದಿನಗಳಲ್ಲಿ ಗುಂಬಜ್ ತೆರವುಗೊಳಿಸದಿದ್ದಲ್ಲಿ ಸ್ವತಃ ತಾನೇ ಗುಂಬಜ್ ಒಡೆದು ಹಾಕುವುದಾಗಿ ಸಂಸದ ಪ್ರತಾಪ್ ಸಿಂಹ ಜಿಲ್ಲಾಧಿಕಾರಿಗಳಿಗೆ ಎಚ್ಚರಿಸಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ಇದೀಗ ಗುಂಬಜ್ ಬಣ್ಣ ಬದಲಾಗಿದೆ.

ರಾತ್ರಿ ಬೆಳಗಾಗುವಷ್ಟರಲ್ಲಿ ಬಂಗಾರದ ಬಣ್ಣದಲ್ಲಿದ್ದ ಗುಂಬಜ್ ಬಣ್ಣ ಕೆಂಪು ಬಣ್ಣಕ್ಕೆ ತಿರುಗಿದೆ. ನಿನ್ನೆ ಒಂದು ಗುಂಬಜ್ ಗೆ ಕೆಂಪು ಬಣ್ಣ ಬಳಿಯಲಾಗಿತ್ತು. ಇದೀಗ ಬಸ್ ನಿಲ್ದಾಣದ ಮೇಲಿದ್ದ ಮೂರೂ ಗುಂಬಜ್ ಗೆ ಕೆಂಪು ಬಣ್ಣ ಬಳಿಯಲಾಗಿದೆ. ಈ ಮೂಲಕ ಚಿನ್ನದ ಬಣ್ಣದಲ್ಲಿದ್ದ ಗುಂಬಜ್ ಬಣ್ಣ ಕೆಂಪು ಬಣ್ಣಕ್ಕೆ ಮಾರ್ಪಡಿಸಲಾಗಿದೆ. ಅರಮನೆ ಮಾದರಿಯ ಬಣ್ಣದೊಂದಿಗೆ ಬಸ್ ನಿಲ್ದಾಣ ಬದಲಾವಣೆಯಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments