Thursday, August 11, 2022
Google search engine
HomeUncategorizedBIG NEWS: ಗಣಿತದಲ್ಲಿ ಬೆಂಗಳೂರು ವಿದ್ಯಾರ್ಥಿಯ ಸಾಧನೆ; ಒಲಿಂಪಿಯಾಡ್‌ನಲ್ಲಿ ಗೆದ್ದಿದ್ದಾರೆ ಮೂರು ಚಿನ್ನದ ಪದಕ

BIG NEWS: ಗಣಿತದಲ್ಲಿ ಬೆಂಗಳೂರು ವಿದ್ಯಾರ್ಥಿಯ ಸಾಧನೆ; ಒಲಿಂಪಿಯಾಡ್‌ನಲ್ಲಿ ಗೆದ್ದಿದ್ದಾರೆ ಮೂರು ಚಿನ್ನದ ಪದಕ

BIG NEWS: ಗಣಿತದಲ್ಲಿ ಬೆಂಗಳೂರು ವಿದ್ಯಾರ್ಥಿಯ ಸಾಧನೆ; ಒಲಿಂಪಿಯಾಡ್‌ನಲ್ಲಿ ಗೆದ್ದಿದ್ದಾರೆ ಮೂರು ಚಿನ್ನದ ಪದಕ

ಭಾರತೀಯ ವಿದ್ಯಾರ್ಥಿಗಳು ಅಂತರಾಷ್ಟ್ರೀಯ ಒಲಿಂಪಿಯಾಡ್‌ಗಳನ್ನು ಗೆಲ್ಲುವ ಮೂಲಕ ರಾಷ್ಟ್ರಕ್ಕೆ ಪ್ರಶಸ್ತಿಗಳನ್ನು ತರುತ್ತಿದ್ದಾರೆ. ಇದೀಗ ಬೆಂಗಳೂರಿನ 18 ವರ್ಷದ ಪ್ರಾಂಜಲ್ ಶ್ರೀವಾಸ್ತವ ಕೂಡ ಓಸ್ಲೋದಲ್ಲಿ ನಡೆದ ಅಂತರರಾಷ್ಟ್ರೀಯ ಗಣಿತ ಒಲಿಂಪಿಯಾಡ್ (IMO) ನಲ್ಲಿ ಮೂರು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಈ ಸಾಧನೆ ಮಾಡಿದ ಮೊದಲ ಭಾರತೀಯ ಎನಿಸಿಕೊಂಡಿದ್ದಾರೆ.

ಪ್ರಾಂಜಲ್ ಹೆಸರು IMO ಹಾಲ್-ಆಫ್-ಫೇಮ್‌ನಲ್ಲಿ ಕಾಣಿಸಿಕೊಂಡಿದೆ.  ಏಕೆಂದರೆ IMO ನ 63 ವರ್ಷಗಳ ಇತಿಹಾಸದಲ್ಲಿ ಕೇವಲ 11 ಮಂದಿ ಮಾತ್ರ ಪ್ರಾಂಜಲ್‌ಗಿಂತ ಹೆಚ್ಚು ಪದಕಗಳನ್ನು ಗೆದ್ದಿದ್ದಾರೆ. ಬಾಲ್ಯದಿಂದಲೇ ಪ್ರಾಂಜಲ್‌ಗೆ ಗಣಿತದ ಬಗ್ಗೆ ಒಲವಿತ್ತು. ತಂದೆ ತಾಯಿ ಹೇಳಿದ ಆಸಕ್ತಿದಾಯಕ ಕಥೆಗಳು, ಅಜ್ಜ ಗಣಿತದ ಸೌಂದರ್ಯದ ಬಗ್ಗೆ ಕೊಡುತ್ತಿದ್ದ ವಿವರಣೆ ಎಲ್ಲವೂ ತನಗೆ ಪ್ರೇರಣೆ ಅಂತಾ ಪ್ರಾಂಜಲ್‌ ಹೇಳಿದ್ದಾರೆ.

ಪ್ರಾಂಜಲ್‌ ಹೆತ್ತವರು ಐಟಿ ವೃತ್ತಿಪರರಾಗಿದ್ದು, ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. 2019ರಲ್ಲಿ 35 ಸ್ಕೋರ್ ಮಾಡಿದ್ದ ಪ್ರಾಂಜಲ್‌ ಮೊದಲ ಚಿನ್ನದ ಪದಕ ಗಳಿಸಿದ್ದರು. 2021ರಲ್ಲಿ 31 ಅಂಕಗಳನ್ನು ಗಳಿಸಿದರು. ಕೋವಿಡ್‌ನಿಂದಾಗಿ ಭಾರತ 2020 ರಲ್ಲಿ IMO ನಲ್ಲಿ ಭಾಗವಹಿಸಲಿಲ್ಲ. 2018ರಲ್ಲಿ ಬೆಳ್ಳಿ ಪದಕದೊಂದಿಗೆ ಪ್ರಾಂಜಲ್‌ ಶ್ರೀವಾಸ್ತವ ಅವರ ಪದಕಗಳ ಬೇಟೆ ಆರಂಭವಾಗಿತ್ತು.

ಗಣಿತದ ಬಗ್ಗೆ ಅಪಾರ ಪ್ರೀತಿಯನ್ನು ಪ್ರಾಂಜಲ್‌ ಮೈಗೂಡಿಸಿಕೊಂಡಿದ್ದಾರೆ. ಅನೇಕ ವೇದಿಕೆಗಳು, ಕ್ಲಬ್‌ಗಳು ಮತ್ತು ಸಂಸ್ಥೆಗಳ ಭಾಗವಾಗಿದ್ದಾರೆ. ಇದು ಅವರಿಗೆ ಅಪ್‌ಡೇಟ್ ಆಗಿರಲು ಮತ್ತು ಅಭ್ಯಾಸ ಮಾಡಲು ಸಹಾಯ ಮಾಡುತ್ತದೆ. ಗಣಿತವು ಅನೇಕ ವಿದ್ಯಾರ್ಥಿಗಳಿಗೆ ದುಃಸ್ವಪ್ನವಾಗಿದ್ದರೆ, ಪ್ರಾಂಜಲ್‌ಗೆ ಮಾತ್ರ ಅದ್ಭುತವಾದ ವಿಷಯ. ಗಣಿತ ದೊಡ್ಡ ಸಂಖ್ಯೆಗಳು ಮತ್ತು ಸಂಕೀರ್ಣ ಲೆಕ್ಕಾಚಾರಗಳಿಗೆ ಸಂಬಂಧಿಸಿದೆ ಎಂಬ ಭಾವನೆ ತಪ್ಪು ಎನ್ನುತ್ತಾರೆ ಅವರು.

ಗಣಿತ, ಸಾಮಾನ್ಯವಾಗಿ, ಸುಂದರವಾಗಿರುತ್ತದೆ. ಇದು ಸಂಖ್ಯಾ ಸಿದ್ಧಾಂತ, ಮಾದರಿಗಳು ಮತ್ತು ಜ್ಯಾಮಿತೀಯ ಆಕಾರಗಳ ಬಗ್ಗೆ ಇರುವಂಥದ್ದು. ಯುವ ವಿದ್ಯಾರ್ಥಿಗಳು ಶಾಲೆಯ ಗಣಿತದಿಂದ ಹೊರಬಂದು ಆಸಕ್ತಿದಾಯಕ ಪುಸ್ತಕಗಳನ್ನು ಪ್ರಯತ್ನಿಸಬೇಕು ಮತ್ತು ಸೃಜನಶೀಲ ಸಮಸ್ಯೆಗಳನ್ನು ಪರಿಹರಿಸಬೇಕು. ಚಿಕ್ಕ ವಯಸ್ಸಿನಲ್ಲಿ, ಪ್ರೊ ಇಯಾನ್ ಸ್ಟೀವರ್ಟ್ ಅವರ ಕೆಲವು ಪುಸ್ತಕಗಳಿಂದ ನಾನು ಪ್ರಭಾವಿತನಾಗಿದ್ದೆ ಎಂದು ಪ್ರಾಂಜಲ್‌ ಹೇಳಿದ್ದಾರೆ. ಗಣಿತದ ಜೊತೆಗೆ, ಪ್ರಾಂಜಲ್ ಸ್ಪರ್ಧಾತ್ಮಕ ಮತ್ತು ಅಲ್ಗಾರಿದಮಿಕ್ ಪ್ರೋಗ್ರಾಮಿಂಗ್ ಅನ್ನು ಸಹ ಇಷ್ಟಪಡುತ್ತಾರೆ.

ಇಂಟರ್ನ್ಯಾಷನಲ್ ಇನ್ಫರ್ಮ್ಯಾಟಿಕ್ಸ್ ಒಲಿಂಪಿಯಾಡ್‌ನಲ್ಲಿ ಬೆಳ್ಳಿ ಪದಕವನ್ನು ಸಹ ಗಳಿಸಿದ್ದಾರೆ. ಪ್ರಾಂಜಲ್‌ಗೆ ಚೆಸ್‌ ಅತ್ಯಂತ ಪ್ರಿಯವಾದ ಆಟ. 2021ರಲ್ಲಿ ದಕ್ಷಿಣ ಕೊರಿಯಾದಲ್ಲಿ ನಡೆದಿದ್ದ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಭಾರತೀಯ ಶಾಸ್ತ್ರೀಯ ಸಂಗೀತವನ್ನು ಸಹ ಕಲಿತಿರುವ ಪ್ರಾಂಜಲ್‌, ಪಾಶ್ಚಾತ್ಯ ಸಂಗೀತದ ಕಡೆಗೂ ಒಲವನ್ನು ಹೊಂದಿದ್ದಾರೆ. ಇಂಟರ್‌ನ್ಯಾಶನಲ್‌ ಮ್ಯಾಥಮೆಟಿಕಲ್ ಒಲಿಂಪಿಯಾಡ್ (IMO) ಅನ್ನೋದು ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಆಯೋಜಿಸುವ ವಿಶ್ವ ಚಾಂಪಿಯನ್‌ಶಿಪ್ ಗಣಿತ ಸ್ಪರ್ಧೆಯಾಗಿದೆ.

ವಾರ್ಷಿಕವಾಗಿ ಬೇರೆ ದೇಶದಲ್ಲಿ ನಡೆಯುತ್ತದೆ. ಮೊದಲ IMO 1959 ರಲ್ಲಿ ರೊಮೇನಿಯಾದಲ್ಲಿ ನಡೆದರೆ, 2022 IMO ಓಸ್ಲೋದಲ್ಲಿ ನಡೆಯಿತು. ಈ ವರ್ಷ, ಪ್ರಾಂಜಲ್ ಚಿನ್ನದ ಪದಕವನ್ನು ಗೆದ್ದರೆ, ಇತರ ಐದು ಭಾರತೀಯ ಅಭ್ಯರ್ಥಿಗಳು ಕಂಚಿನ ಪದಕವನ್ನು ಪಡೆದರು – ಅರ್ಜುನ್ ಗುಪ್ತಾ, ಅತುಲ್ ಶತಾವರ್ತ್ ನಾಡಿಗ್, ವೇದಾಂತ್ ಸೈನಿ, ಕೌಸ್ತುವ್ ಮಿಶ್ರಾ ಮತ್ತು ಆದಿತ್ಯ ಕಂಚಿನ ಪದಕಕ್ಕೆ ಭಾಜನರಾದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments